ಓಜಿನಹಳ್ಳಿಯಲ್ಲಿ ಸಂಗೀತ ಕಾರ್ಯಕ್ರಮ ಯಶಸ್ವಿ.

ಕೊಪ್ಪಳ, ೨೮- ಕೊಪ್ಪಳ ತಾಲೂಕಿನ ಓಜಿನಹಳ್ಳಿ ಗ್ರಾಮದಲ್ಲಿ ಚೇತನ ಸಾಂಸ್ಕೃತಿಕ ಕಲಾ ಸಂಸ್ಥೆ ಕೊಪ್ಪಳ ಸಾ|| ಓಜಿನಹಳ್ಳಿ ಇವರ ಸಹಯೋಗದಲ್ಲಿ ಗ್ರಾಮದ ಹಿರೇಮಠದ ಕೃತ್ಯಗದ್ದುಗೆ ರುದ್ರಾಭೀಷೇಕ ಸಹಸ್ರ ಬಿಲ್ವಾರ್ಚನೆಯ ಮಹಾಪೂಜೆ ಹಾಗೂ ಸಾಮೂಹಿಕ ವಿವಾಹದ ಅಂಗವಾಗಿ ದಿ. ೨೭ ರಂದು ರಾತ್ರಿ ೯ ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಯಶಸ್ವಿ ಜರುಗಿತು.
ಕಾರ್ಯಕ್ರಮದ ಸಾನಿದ್ಯವನ್ನು ಗಂಗಾಧರಯ್ಯಸ್ವಾಮಿ ಹಿರೇಮಠ ವಹಿಸಿದ್ದರು. ಕಲಾ ತಂಡದ ನಾಯಕ ರಂಗಭೂಮಿ ಕಲಾವಿದ ಶಿವಮೂರ್ತಿಮೇಟಿ ನೇತೃತ್ವದಲ್ಲಿ ಭಕ್ತಸಂಗೀತ ಕಾರ್ಯಕ್ರಮವನ್ನು ಯಮನೂತಪ್ಪ ಭಜೇಂತ್ರಿ, ಕೆ. ಇಮಾಮಸಾಬ ಮಾಸ್ತರ, ಬಸವರಾಜ ಎ. ಹಳ್ಳಿಕೇರಿ, ಬಸಣ್ಣ ಕೆ.ಮೇಟಿ ಗೊಂಡಬಾಳ, ಶ್ರೀಶೈಲ ಹಳ್ಳಿಕೇರಿ ಗೊಂಡಬಾಳ ನೀಡಿದರು.
ಗೀಗೀ ಪದ ಕಾರ್ಯಕ್ರಮವನ್ನು ದಾವಲಸಾಬ ಅತ್ತಾರ  ಹಾಬಲಕಟ್ಟಿ ಇವರು ಹಾಡಿದರು. ತತ್ವಪದ ಕಾರ್ಯಕ್ರಮವನ್ನು ಮಹಾಲಿಂಗನಗೌಡ ಮಾಲಿಪಾಟೀಲ್, ಸುಭಾಷ ಮೇಟಿ, ಭೋಜನಗೌಡ ಸಂಕನಗೌಡ್ರ, ದೊಡ್ಡಸಿದ್ದಪ್ಪ ಮೇಟಿ, ಹುಸೇನಪಾಷಾ ಟೈಲರ್ ನಡೆಸಿ ಕೊಟ್ಟರು.ಜಾನಪದ ಕಾರ್ಯಕ್ರಮವನ್ನು ಮಲ್ಲಪ್ಪ ಹೂಗಾರ, ನೀಲಪ್ಪ ಮೋಟಿ ಜಾನಪದ ಗೀತೆ ಹಾಡಿದರು.ತಬಲಾ ಬಾಷಾಸಾಬ ಜಿನ್ನಾದ ಹಿರೇಮನ್ನಾಪೂರ ಸಾಥ್ ನೀಡಿದರು. ಡೋಲಕ ಮಲ್ಲಪ್ಪ ವಿ. ಹೂಗಾರ ನೀಡಿದರು.
ಈ ಸಂದರ್ಭದಲ್ಲಿ ಹಿರೇಮಠ ಗುರು ವೃಂದವರು ಹಾಗೂ ಗ್ರಾಮದ ಹಿರಿಯ ಗಣ್ಯವ್ಯಕ್ತಿಗಳು. ಯುವಕರು, ಕಲಾವಿದರಾದ ಶರಣಪ್ಪ ಮೇಟಿ, ಸಿದ್ದಪ್ಪ ಕಾಟ್ರಳ್ಳಿ ಮತ್ತೀತರರು ಭಾಗವಹಿಸಿದ್ದರು.

Related posts

Leave a Comment