ಕೊಪ್ಪಳ: ಅರಿವಿನ ಪಯಣ ಸುರಕ್ಷ ಬಾಲ್ಯ ಜಾಥಾಕ್ಕೆ ಸ್ವಾಗತ

ಕೊಪ್ಪಳ: ನ. ೨೯. ನಾನೊಬ್ಬ ಸಾಹಿತಿಯಾಗಿ, ರಂಗ ಕರ್ಮಿಯಾಗಿ ಕೊಪ್ಪಳ ಜಿಲ್ಲೆಗೆ ಆಗಮಿಸಿದ ಅರಿವಿನ ಪಯಣ ಎಂಬ ಸುರಕ್ಷಾ ಬಾಲ್ಯ ಜಾಥವನ್ನು ಸ್ವಾಗತಿಸುತ್ತೇನೆ. ಮಕ್ಕಳ ಹಕ್ಕು ಮತ್ತು ಶಿಕ್ಷಣ ಪರವಾಗಿರುವ ಜಾಥಾ ಯಶಸ್ವಿಯಾಗುವುದರಲ್ಲಿ ಎರಡು ಮಾತಿಲ್ಲ ಎಂದು ಹಿರಿಯ ಸಾಹಿತಿ ವಿಠ್ಠಪ್ಪ

ಗೋರಂಟ್ಲಿ ಹಾರೈಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ಉಪ ನಿರ್ದೇಶಕಿ ವಸಂತ ಪ್ರೇಮ ಮಾತನಾಡಿ ವಿಶೇಷವಾಗಿ ಕಳೆದ ಆರು ತಿಂಗಳುಗಳ ಈಚೆಗೆ ಮೂರು ವರ್ಷದಿಂದ ಆರು ವರ್ಷದೊಳಗಿನ ಬಾಲಕಿಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳನ್ನು ನೋಡಿದರೆ, ಈ ಜನರಿಗೆ ಕಾನೂನಿನ ಅರಿವಿಲ್ಲವೆ, ಇವರು ಮಾನಸಿಕ ರೋಗಿಗಳೇ, ಯಾರದೂ ಭಯವಿಲ್ಲದ್ದೂ, ಮಕ್ಕಳಂತ ಭಾವನೆ ಮೂಡಲಿಲ್ಲವೋ ಎಂದು ಅರ್ಥವಾಗುತ್ತಿಲ್ಲ. ಇದಕ್ಕೆ ಸರ್ಕಾರ, ಜನ ಸಾಮಾನ್ಯರು, ಸಂಘ ಸಂಸ್ಥೆಗಳು ಮತ್ತು ಮಾಧ್ಯಮದವರು ಜಂಟಿಯಾಗಿ ತಡೆಗೆ ಪ್ರಯತ್ನಿಸಬೇಕೆಂದು ಹೇಳಿದರು.
ಈ ಜಾಥಾದ ಮೂಲಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಉಪ ನಿರ್ದೇಶಕಿ ವಸಂತ ಪ್ರೇಮ ಅವರಿಗೆ ಈ ಕೆಳಗಿನ ಮನವಿ ಪತ್ರ ಅರ್ಪಿಸಲಾಯಿತ್ತು.
ಭಾರತ ಸರ್ಕಾರವು ೧೯೯೨ರಲ್ಲಿ ವಿಶ್ವ ಸಂಸ್ಥೆಯ ಮಕ್ಕಳ ಹಕ್ಕಿನ ಒಡಂಬಡಿಕೆಯನ್ನು ಅನುಮೋದನೆ ಮಾಡಿದಾಗ, ಇದು ಅನುಷ್ಠಾಗೊಳ್ಳಲು ಒಡಬಂಡಿಕೆಯ ೩೨ನೆಯ ವಿದಿಯನ್ನು ಆಧರಿಸಿತ್ತು. ಈ ವಿದಿಯಂತೆ, ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ ಅನುಷ್ಠಾನವು, ಲಭ್ಯವಿರುವ ಸಂಪನ್ಮೂಲಗಳ ಆಧಾರದ ಮೇಲೆ ಮಾತ್ರ ಸಾಧ್ಯ…. ಈ ಒಡಂಬಡಿಕೆಯ ಬೆಳ್ಳಿಹಬ್ಬದ ಈ ವರ್ಷದಲ್ಲಿ ಭಾರತ ದೇಶವು ಆರ್ಥಿಕವಾಗಿ ಬಹಳಷ್ಟು ಮುಂದುವರೆದು, ದೇಶದ ಮಕ್ಕಳಿಗಾಗಿ ಒಡಂಬಡಿಕೆಯ ಸಂಪೂರ್ಣ ಅನುಷ್ಠಾನಕ್ಕೆ ಅಗತ್ಯ ಇರುವುವ ಕ್ರಮಗಳು ತೆಗೆದುಕೊಳ್ಳ ಬೇಕಾಗಿವೆ.  
ಈ ಹಿನ್ನೆಲೆಯಲ್ಲಿ, ಅಂಅಐ-ಏ, ಅಖಇಂ ನೆಟ್‌ವರ್‌ಕ್‌ರವರ ಮತ್ತು ಹಾಗೂ ಸಮಾನ ಮನಸ್ಕ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಅರಿವಿನ ಪಯಣ ಎಂಬ ಹೆಸರಿನಲ್ಲಿ ಕರ್ನಾಟಕದ ೧೫ ಜಿಲ್ಲೆಗಳಲ್ಲಿ ಸುರಕ್ಷಾ ಬಾಲ್ಯ ಜಾಥಾವನ್ನು ನಡೆಸಲು ತೀರ್ಮಾನಿಸಿರುತ್ತೇವೆ. ಅದರಂತೆ, ದಿನಾಂಕ ೨೫/೧೧/೨೦೧೪ ಈ ಜಾಥಾವನ್ನು ಕಲಬುರಗಿ (ಗುಲ್ಬರ್ಗಾ)ದಲ್ಲಿ ರಿಂದ ಪ್ರಾರಂಬಿಸಿ, ೪/೧೨/೨೦೧೪ರಂದು ಬೆಂಗಳೂರಲ್ಲಿ ಮುಕ್ತಾಯಗೊಳ್ಳಲಿದೆ.
೧. ಜಿಲ್ಲೆಯಲ್ಲಿರುವ ೧೮ ವರ್ಷದೊಳಗಿನ ಎಲ್ಲಾ ಮಕ್ಕಳು ಶಾಲೆಯಲ್ಲಿರುವಂತೆ ಸೂಕ್ತ ಕ್ರಮ ಕೈಗೊಳ್ಳೂವುದು.
೨. ಮಕ್ಕಳ ಹಕ್ಕುಗಳ ಅನುಷ್ಠಾನಕ್ಕೆ ಸಂಬಧಿಸಿದ ಪ್ರಾಧಿಕಾರಗಳು ಮಕ್ಕಳ ಹಿತದೃಷ್ಟಿಯಿಂದ ಕಾನೂನಾತ್ಮವಾಗಿ ೧೮ ವರ್ಷದೂಳಗಿನ ಎಲ್ಲಾ ಮಕ್ಕಳಿಗೆ ಯಾವುದೇ ತಾರತಮ್ಯವಿಲ್ಲದೆ ಕಾಲಕಾಲಕ್ಕೆ ಮೇಲ್ವಿಚಾರಣೆ ನಡೆಸಬೇಕು.
೩. ಮಕ್ಕಳ ಮೇಲಾಗುತ್ತಿರುವ ಲೈಂಗಿಕ ಮತ್ತು   ದೆಹಿಕ ದೌರ್ಜನ್ಯಗಳನ್ನು ತಡೆಯುವಂತೆ ಸರಕಾರ ಇತ್ತೀಚೆಗೆ ತಂದಿರುವ ನಿಯಮಗಳನ್ನು ಸ್ಪಷ್ಟವಾಗಿ ಪಾಲನೆ ಮಾಡುವಂತೆ ಕ್ರಮಕೈಗೂಳ್ಳುವುದು ಇದರ ಕುರಿತು ವ್ಯಾಪಕ ಪ್ರಚಾರಾಂದೋಲನ ನಡೆಸುವುದು.
೪. ಬಾಲ್ಯ ವಿವಾಹ ನಿಷೇಧ ಕಾಯಿದೆ ಮತ್ತು ಡಾ|| ಶಿವರಾಜ ಪಾಟೀಲರವರು ಸೂಚಿಸಿದ ಶಿಫಾರಸ್ಸುಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದು.
೫. ಮಕ್ಕಳ ಗ್ರಾಮಸಭೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದು ಮಕ್ಕಳ ಬೇಡಿಕೆಗಳನ್ನುಳೀಡೇರಿಸುವುದು, ಹಾಗೂ ನಗರದ ಮಕ್ಕಳಿಗೆ ಸಹ ಇಂತಹ ಅವಕಾಶ ಕಲ್ಪಿಸಿಕೊಡುವುದು. 
೬. ಬಾಲಕಾರ್ಮಿಕ ಪದ್ದತಿಯನ್ನು ಸಂಪೂರ್ಣವಾಗಿ ನಿಷೇದಿಸುವುದು.
೭. ಮಕ್ಕಳ ಆರೈಕೆ ಮತ್ತು ಪೋಷಣೆಯಲ್ಲಿ ಸಂಸ್ಥೆಗಳಲ್ಲಿ ವಾಸ ಮಾಡುತ್ತಿರುವ ಮಕ್ಕಳಿಗೆ ಬಾಲನ್ಯಾಯ ಕಾಯಿದೆ ಅನ್ವಯ ಪೂರಕ ವ್ಯವಸ್ಥೆಯನ್ನು ಕಲ್ಪಿಸುವುದು.
೮. ಜಿಲ್ಲೆಯಲ್ಲಿ ಮಕ್ಕಳ ಹಕ್ಕುಗಳ ಬೇಡಿಕೆಯನ್ನು ಖಾತರಿ ಪಡಿಸಲು ಜಿಲ್ಲಾಮಟ್ಟದಲ್ಲಿರುವ ವಿವಿಧ ಸಭೆಗಳು ನಿಯಮಿತವಾಗಿ ನಡೆದಿರುವುದನ್ನು ಪರಿಶೀಲಿಸುವುದು, ಮೂರು ತಿಂಗಳಲ್ಲಿ ಸಿ.ಎ.ಸಿ.ಎಲ್. ಪ್ರತಿನಿಧಿ ಅಥವಾ ಮಕ್ಕಳ ಜೊತೆ ಕೆಲಸ ಮಾಡುತ್ತಿರುವ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಸಮಾಲೋಚನೆ ನಡೆಸುವುದು.
೯. ಆರ್.ಟಿ.ಈ. ಕಾಯಿದೆಯನ್ನು ಸಂಪೂರ್ಣ ಜಾರಿಗೆ ತರುವುದು.
೧೦. ಜಿಲ್ಲಾ ರಕ್ಷಣಾ ಘಟಕದ ಮೂಲಕ ಜಿಲ್ಲೆಯ ಎಲ್ಲಾ ಅಭಿವೃದ್ಧಿಗೆ ಸೂಕ್ತ ಅಧ್ಯಯನ ನಡೆಸಿ ಸೂಕ್ತ ಯೋಜನೆಯನ್ನು ತಯಾರಿಸಿ ಜಾರಿಗೊಳಿಸುವುದು.
೧೧. ಜಿಲ್ಲೆಯಲ್ಲಿ ಮಕ್ಕಳ ಸಹಾಯವಾಣಿ ಸೇವೆಯನ್ನು ಬಲ ಪಡಿಸಿ ಪರಿಣಾಮಕಾರಿಯಾಗಿ ಎಲ್ಲ   ತಾಲೂಕುಗಳಲ್ಲಿ ಲಭ್ಯವಾಗುವಂತೆ ನೋಡಿಕೊಳ್ಳುವುದು. 
೧೨. ಮಕ್ಕಳಲ್ಲಿ ಪೌಷ್ಠಿಕತೆಯನ್ನು ಹೆಚ್ಚಿಸಲು ಹಾಗೂ ಮಕ್ಕಳಹಾಜರಾತಿಯ ನಿರಂತರತೆಯನ್ನು ಕಾಪಾಡಲು ಸರ್ಕಾರಿ ಶಾಲೆಗಳಲ್ಲಿನ ಬಿಸಿಯೂಟ ಯೋಜನೆ ಮತ್ತು ಅಂಗನವಾಡಿಗಳಲ್ಲಿ ಮಕ್ಕಳಿಗೆ ಕೊಡುತ್ತಿರುವ ಆಹಾರದ ಬಗ್ಗೆ ಮೇಲಿಂದ ಮೇಲೆ ಉಸ್ತುವಾರಿ ನಡೆಸಿ ಆಹಾರದ ಗುಣಮಟ್ಟ ಹೆಚ್ಚಿಸುವಂತಾಗಬೇಕು.
ಈ ಸಂದರ್ಭದಲ್ಲಿ ಬಾಲಕೀಯರ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಶಾಲಾ ಮಕ್ಕಳಿಗೆ ’ಗೌರಿಯ ಕನಸು’ ಎಂಬ ಬೀದಿನಾಟಕದ ಪ್ರದರ್ಶಿಸಲಾಯಿತ್ತು. ಅಂಅಐ-ಏ ನ ರಾಜ್ಯ ಸಂಚಾಲಕರಾದ ಬಸವರಾಜ್ ಹುಲಗಣ್ಣವರ್, ಸಂಪತ್ ಕಟ್ಟಿ, ಅಶ್ವತ್ ಯರಗಟ್ಟಿ, ಅಖಇಂ ನೆಟ್‌ವರ್‌ಕ್‌ನ ಸುಂಕಪ್ಪ ಮೀಸಿ, ಸುಧಾಕರ್. ಎಸ್, ವಿಸ್ತಾರ್ ಸಂಸ್ಥೆಯ ನಾಜರ್ ಪಿ. ಎಸ್, ಶೈಲಜ ಕಮಲ್ ಗೋಪಿನಾಥ್, ಸುಭಾಸ್ ಚಂದ್ರಬಂಡಿ, ಯೇಸುಫ್ ಡಿ. ಜೆ, ಯುನಿಸೆಫಿನ ಜಿಲ್ಲಾ ಸಂಯೋಜಕ ಹರೀಶ್ ಜೋಗಿ, ಮಕ್ಕಳ ಪೋಲೀಸ್ ಘಟಕದ ಸೋಮಶೇಖರ್, ಚೈಲ್ಡ್ ಲೈನ್‌ನ ಶರಣಪ್ಪ, ಡಿ.ಸಿ.ಪಿ.ಓ. ರವಿಕುಮಾರ್, ಜಿಲ್ಲಾ ಜನಪರ ಜಾಗೃತಿ ವೇಧಿಕೆಯ ಅಧ್ಯಕ್ಷ ಮೈಲಪ್ಪ ಬೀಸರಳ್ಳಿ ಮತ್ತು ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಜಿಲ್ಲಾ ಪ್ರಾಧಾನ ಕಾರ್ಯದರ್ಶಿ ಎಸ್. ಎ. ಗಫಾರ್ ಮುಂತಾದವರು ಉಪಸ್ಥಿತರಿದ್ದರು.   

Leave a Reply