fbpx

ದೇಹದಾರ್ಢ್ಯ ಸ್ಪರ್ಧೆ: ಹಾಮೀದ್‌ಗೆ ಕೊಪ್ಪಳ ಶ್ರೀ ಪ್ರಶಸ್ತಿ

ಕೊಪ್ಪಳ.ಜು.೨೦: ನ್ಯಾಷನಲ್ ಜಿಮ್ ಕೊಪ್ಪಳದ ೫ನೇ ವಾರ್ಷಿಕೋತ್ಸವದ ಅಂಗವಾಗಿ ಇತ್ತೀಚೆಗೆ ನಗರದ ಸಾಹಿತ್ಯ ಭವನದಲ್ಲಿ ನಡೆದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಕೊಪ್ಪಳದ ಎವರ್‌ಗ್ರೀನ್ ಮಲ್ಟಿ ಜಿಮ್‌ನ ಮುಖ್ಯಸ್ಥ ಸಯ್ಯದ್ ಹಾಮೀದ್ ಹುಸೇನ್‌ಗೆ ಕೊಪ್ಪಳ ಶ್ರೀ ಟೈಟಲ್ ಪ್ರಶಸ್ತಿ ಲಭಿಸಿದೆ.
ಎರಡನೇ ಬಹುಮಾನವಾದ ಬೆಷ್ಟ್ ಫೋಜರ್ ಪ್ರಶಸ್ತಿಯನ್ನು ಅವರ ಸಹೋದರ ಸಯ್ಯದ್ ಶಾಹಿದ ಹುಸೇನಿ ಪಡೆದುಕೊಂಡರೆ, ೩ನೇ ಬಹುಮಾನವನ್ನು ಅದೇ ಸಂಸ್ಥೆಯ ಸಲಿಂ ಪಾಷಾ ಪಡೆದುಕೊಂಡಿದ್ದಾರೆ.
ಈ ಎಲ್ಲ ಬಹುಮಾನವನ್ನು ಪ್ರಥಮ ದರ್ಜೆ ಗುತ್ತಿಗೆದಾರ ಸುರೇಶ ಭೂಮರೆಡ್ಡಿ ರವರ ಪರವಾಗಿ ಗುತ್ತಿಗೆದಾರ ಸಯ್ಯದ್ ಹಾಜಿ ಹುಸೇನಿ, ಸಯ್ಯದ್ ಜುಬೇರ್ ಹುಸೇನಿ ಹಾಗೂ ಸಂಘಟಕ ಸಯ್ಯದ್ ಫಜೀಲ್ ವಿತರಣೆ ಮಾಡಿದರು.
ಇನ್ನೂಳಿದ ಬಹುಮಾನ ಹಾಗೂ ಪ್ರಶಸ್ತಿ ಪತ್ರವನ್ನು ಬಿಎಸ್ ಆರ್ ಕಾಂಗ್ರೆಸ್ ಪಕ್ಷದ ಮುಖಂಡ ಕೆಎಂ ಸಯ್ಯದ್, ಗುತ್ತಿಗೆದಾರ ದೌಲತ್, ಸಯ್ಯದ ಗೌಸ್ ಹುಸೇನಿ, ಮತ್ತಿತರರು ಉಪಸ್ಥಿತರಿದ್ದರು.
ಪ್ರಶಸ್ತಿಗಳಿಸಿದ ಸಯ್ಯದ್ ಹಾಮೀದ್ ಹುಸೇನಿ ಹಾಗೂ ಸಯ್ಯದ್ ಶಾಹಿದ ಹುಸೇನಿರವರಿಗೆ ಜೆಡಿಎಸ್ ಯುವ ಘಟಕದ ಅಧ್ಯಕ್ಷ ಸಯ್ಯದ್ ಮಹೆಮೂದ್ ಹುಸೇನಿ ಸನ್ಮಾನಿಸಿದರು.
ಸಯ್ಯದ್ ಹಾಮಿದ್ ಹುಸೇನಿರವರು ಈ ಹಿಂದೆ ರಾಜ್ಯಮಟ್ಟದ ಸ್ಪರ್ಧೆಯಲ್ಲೂ ಸಹ ಪ್ರಶಸ್ತಿ ಗಳಿಸಿರುವುದಲ್ಲದೆ, ದಾವಣಗೇರಿ, ಗದಗ, ಧಾರವಾಡ, ಮರಿಯಮ್ಮನಹಳ್ಳಿ, ಹೊಸಪೇಟೆ, ಕನಕಗಿರಿ, ಗಂಗಾವತಿ ಇತ್ಯಾದಿ ಕಡೆಗಳಲ್ಲಿ ಜರುಗಿದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಪ್ರಶಸ್ತಿ ಗಳಿಸಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
Please follow and like us:
error

Leave a Reply

error: Content is protected !!