You are here
Home > Koppal News > ಕಾರ್ಮಿಕರ ಕಲ್ಯಾಣ ಮಂಡಳಿಯ ಹಣವನ್ನು ದುರುಪಯೋಗ ತಡೆಯಲು ಆಗ್ರಹ

ಕಾರ್ಮಿಕರ ಕಲ್ಯಾಣ ಮಂಡಳಿಯ ಹಣವನ್ನು ದುರುಪಯೋಗ ತಡೆಯಲು ಆಗ್ರಹ

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಹಣವನ್ನು ದುರುಪಯೋಗ ಮಾಡುವುದನ್ನು ತಡೆಹಿಡಿಯುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳವರು ಇಂದು ಪ್ರತಿಭಟನೆ ಮಾಡಿದರು. 
ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ರೂಪಿಸಿರುವ ೧೨ ಸವಲತ್ತುಗಳನ್ನು ಬಿಟ್ಟು ಬೇರೆ ಸವಲತ್ತುಗಳಿಗೆ ಹಣವನ್ನು ಉಪಯೋಗಿಸಬಾರದು. ಈಗ ಮಂಡಳಿಯು ಮಾಡಿರುವ ತೀರ್ಮಾನವನ್ನು ರದ್ದು ಮಾಡಬೇಕು. 
ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಗೆ ಎಲ್ಲಾ ಮಾನ್ಯತೆ ಪಡೆದ ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳನ್ನು ನೇಮಿಸಬೇಕು.
ಇಂದು ದಿನಾಂಕ: ೧೮-೧೨-೨೦೧೩ ರಂದು ನಡೆದ ಪ್ರತಿಭಟನಾ ಮೆರವಣಿಗೆ ಗಡಿಯಾರಕಂಬದದಿಂದ ಪ್ರಾರಂಭವಾಗಿ ಜವಾಹರ ರಸ್ತೆಯ ಮೂಲಕ ಅಶೋಕ ವೃತ್ತ ಬಳಸಿಕೊಂಡು ತಹಶೀಲ್ದಾರ ಕಾರ್ಯಾಲಯಕ್ಕೆ ತಲುಪಿ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. 
ಗೊಂಡಬಾಳ ಗ್ರಾಮ ಘಟಕದ ಅಧ್ಯಕ್ಷ, ಹೊನ್ನೂರಸಾಬ ನದಾಫ್, ಕಾತರಕಿ-ಗುಡ್ಲಾನೂರ ಗ್ರಾಮ ಘಟಕದ ಅಧ್ಯಕ್ಷ, ಮಾಬುಹುಸೇನ ವಾಲಿಕಾರ, ಕವಲೂರ ಗ್ರಾಮ ಘಟಕದ ಉಪಾಧ್ಯಕ್ಷ, ಯಮನೂರಸಾಬ ನದಾಫ್, ಹಿರೇಬಗನಾಳ ಗ್ರಾಮ ಘಟಕದ ಅಧ್ಯಕ್ಷ, ಮರಿಸ್ವಾಮಿ ಸಂಗಪ್ಪ ವಡ್ಡರ, ಹೊಸಕನಕಾಪೂರ ಗ್ರಾಮ ಘಟಕದ ಅಧ್ಯಕ್ಷ, ಚುನ್ನುಸಾಬ ಹೊಸಮನಿ, ಬುಡಶೆಟ್ನಾಳ ಗ್ರಾಮ ಘಟಕದ ಅಧ್ಯಕ್ಷ, ಹನುಮಪ್ಪ ಕಲಿಕೇರಿ, ತಳಕಲ್ ಗ್ರಾಮ ಘಟಕದ ಅಧ್ಯಕ್ಷ, ಬಾಬುಸಾಬ ಬ್ಯಾಡಗಿ, ಹಲಗೇರಿ ಗ್ರಾಮ ಘಟಕದ ಅಧ್ಯಕ್ಷ, ಕಾಸಿಂಸಾಬ ನದಾಫ್, ಇರಕಲ್ಲಗಡಾ ಗ್ರಾಮ ಘಟಕದ ಅಧ್ಯಕ್ಷ, ರಾಯಪ್ಪ ಹಟ್ಟಿ, ಅಲ್ಲಾನಗರ ಗ್ರಾಮ ಘಟಕದ ಪ್ರಧಾನ ಕಾರ್ಯದರ್ಶಿ, ಬೆಟದಯ್ಯ ಹಾದಿಮನಿ, ಜಬ್ಬಲಗುಡ್ಡಾ ಗ್ರಾಮದ ಪ್ರಕಾಶ, ಜಿಲ್ಲಾ ಉಪಾಧ್ಯಕ್ಷ, ನಿಂಗಜ್ಜ ಟಣಕನಕಲ್ಲ, ಶಿವಪ್ಪ ಹಡಪದ, ಮಖಬೂಲ್ ರಾಯಚೂರ, ಶಿವಮ್ಮ ಕಾಮನೂರ, ಜಿಲ್ಲಾ ಪೇಂಟರ ಕಾರ್ಮಿಕರ ಸಂಘದ ಅಧ್ಯಕ್ಷ, ರಜಾಕಸಾಬ ಹಂಚಿನಾಳ ಪೇಂಟರ, ಮುಂತಾದವರು ಭಾಗವಹಿಸಿದ್ದರು.   
ರಮೇಶ ಪಿ.ಚಿಕೇನಕೊಪ್ಪ ಜಿಲ್ಲಾಧ್ಯಕ್ಷರು ಎಸ್.ಎ.ಗಫಾರ್ ಜಿಲ್ಲಾ ಸಂಚಾಲಕರು ಡಾ.ಕೆ.ಎಸ್.ಜನಾರ್ಧನ್ ರಾಜ್ಯ ಸಂಘಟನಾ ಕಾರ್ಯದರ್ಶಿ ಕೃಷಿ ಕೂಲಿ ಕಾರ್ಮಿಕರ ಸಂಘ,ಬಸವರಾಜ ಶೀಲವಂತರ    ಜಿಲ್ಲಾಧ್ಯಕ್ಷರು,   ಎ.ಐ.ಟಿ.ಯು.ಸಿ. ಮೈಲಪ್ಪ ಬಿಸರಳ್ಳಿ ಜಿಲ್ಲಾ ಸಂಚಾಲಕರು ನೂರಸಾಬ ಹೊಸಮನಿ ತಾಲೂಕ ಸಂಚಾಲಕರು ಎ.ಬಿ.ದಿಂಡೂರು ವಿಭಾಗೀಯ ಪ್ರ.ಕಾರ್ಯದರ್ಶಿ. ಕೆ.ಎಸ್.ಆರ್.ಟಿ.ಸಿ. ಸ್ಟಾಫ ಮತ್ತು ವರ್ಕರ‍್ಸ್ ಯೂನಿಯನ್.
   

Leave a Reply

Top