You are here
Home > Koppal News > ಕಿನ್ನಾಳ ಕ್ಲಷ್ಟರ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ದೆಯಲ್ಲಿ ಕುವೆಂಪು ಶ. ಮಾ. ಶಾಲೆ ಪ್ರಥಮ.

ಕಿನ್ನಾಳ ಕ್ಲಷ್ಟರ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ದೆಯಲ್ಲಿ ಕುವೆಂಪು ಶ. ಮಾ. ಶಾಲೆ ಪ್ರಥಮ.

ಕೊಪ್ಪಳ-18- ೧೬ ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಟ್ಟಿ ಯಲ್ಲಿ ಕಿನ್ನಾಳ ಕ್ಲಷ್ಟರ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ದೆಗಳನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕುವೆಂಪು ಶತಮಾನೋತ್ಸವ ಮಾದರಿ ಶಾಲೆಗೆ ೧೧ ಪ್ರಥಮ ಸ್ಥಾನ, ೦೫ ದ್ವೀತಿಯ ಸ್ಥಾನ, ೦೪ ತೃತಿಯ ಸ್ಥಾನ ಗಳಿಸುವ ಮೂಲಕ ಪ್ರಥಮ ಸ್ಥಾನಪಡೆದುಕೊಂಡಿದೆ. ಈ ಸಾಧನೆಗೆ ಶಾಲೆಯ ಸಂಗೀತ ಶಿಕ್ಷಕರಾದ ಶ್ರೀಮತಿ ಬಸಮ್ಮ ನಾಗರಾಜ ಹೊಸಳ್ಳಿ ಇವರ ಪರಿಶ್ರಮ ಕಾರಣ.
    ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷ ಶರಣಪ್ಪ ವಾಲ್ಮೀಕಿ, ಮತ್ತು ಸರ್ವ ಸದಸ್ಯರು ಶಾಲೆಯ ಮೂಖ್ಯೋಪಾದ್ಯಾಯ ಶ್ರೀನಿವಾಸ ಪುರೋಹಿತ ಹಾಗೂ ಸ. ಶಿಕ್ಷಕರು ಶಾಲಾ ಮಕ್ಕಳನ್ನು ಅಭಿನಂದಿಸಿದರು ಜೊತೆಗೆ  ಶಾಲೆಯ ವಿದ್ಯಾರ್ಥಿಗಳೊಟ್ಟಿಗೆ ಸೇರಿ ಸಾಧನೆಗೆ ಕಾರಣರಾದ ಶಿಕ್ಷಕಿ ಬಸಮ್ಮ ನಾಗರಾಜ ಹೊಸಳ್ಳಿಯವರನ್ನು ಸನ್ಮಾನಿಸಿದರು.

Leave a Reply

Top