ನಗರಸಭೆ ಗೂಂಡಾ ವರ್ತನೆ ಖಂಡಿಸಿ ಡಿವೈಎಫ್‌ಐ ಅಹೋರಾತ್ರಿ ಧರಣಿ

ಕೊಪ್ಪಳ ಜುಲೈ : ನಗರದ ದೇವರಾಜ ಅರಸು ಕಾಲೊನಿಯ ಎಪಿಎಂಸಿ ಆರಣಕ್ಕೆ ಹೊಂದಿಕೊಂಡು ಜೋಪಡಿ ಹಾಕಿಕೊಂಡು ವಾಸವಾಗಿದ್ದ ಜನರ ಗುಡಿಸಲುಗಳ ಮೇಲೆ ನಗರಸಭೆ ಏಕಾ ಏಕಿ ದಾಳಿ ಮಾಡಿರುವುದು ಸರಿಯಲ್ಲ. ಅದು ಮಾನ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ಸಿಪಿಐಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಜಿ.ಎನ್. ನಾಗರಾಜ ಆರೋಪಿಸಿದರು.
ಅವರು ನಗರಸಭೆ ಮುಂದೆ ಅಹೋರಾತ್ರಿ ಕುಳಿತಿರುವ ಡಿವೈಎಫೈ ಧರಣಿ ಬೆಂಬಲಿಸಿ ಮಾತನಾಡಿ, ಕಳೆದ ಎಂಟು ಹತ್ತು ವರ್ಷಗಳಿಂದ ನಿವೇಶನ ರಹಿತರಿಗೆ ನಿವೇಶನ ನೀಡುವಂತೆ ಆಗ್ರಹಿಸಿ ಹೋರಟ ಮಾಡುತ್ತಿದ್ದಾರೆ. ಆದರೆ ನಗರಸಭೆ, ಜಿಲ್ಲಾಡಳಿತ, ಸರಕಾರ ಮಧ್ಯ ಪ್ರವೇಶಿಸುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರಲ್ಲದೆ ಗುಡಿಸಲು ರಹಿತ ರಾಜ್ಯವನ್ನಾಗಿ ಮಾಡುತ್ತೇವೆ ಎಂದು ಹೇಳುತ್ತಿರುವ ಯಡಿಯೂರಪ್ಪನವರು ಕೊಪ್ಪಳ ಜಿಲ್ಲೆಯಲ್ಲಿ ಠಿಕಾಣಿ ಹೂಡಿ ಸರ್ವೆ ಮಾಡಲಿ ಎಂದು ಜನವಿರೋಧಿ ಸರಕಾರದ ವಿರುದ್ಧ ಹರಿಹಾಯ್ದರು.
ನಗರಸಭೆಯ ಈ ಕ್ರಮದ ವಿರುದ್ಧ ಕೋರ್ಟಿನಲ್ಲಿ ದಾವೆ ಹೂಡುವುದಾಗಿಹೇಳಿದ ಅವರು ಸಿಪಿಐಎಂ ರಾಜ್ಯ ಸಮಿತಿಯ ನಿಯೋಗವು ಮಾಣವ ಹಕ್ಕುಗಳ ಆಯುಕ್ತರನ್ನು ಭೇಟಿ ಮಾಡಿ ದೂರು ಸಲ್ಲಿಸುವುದಾಗಿ ಹೇಳಿದರು.
ಸಿಪಿಐಎಂ ಜಿಲ್ಲಾ ಕಾರ್ಯದರ್ಸಿ ಆರ್.ಕೆ. ದೇಸಾಯಿ, ಪ್ರಾಂತ ರೈತ ಸಂಘದ ಮುಖಂಡ ಬಸವರಾ ಆನೆಗುಂದಿ, ಎಸ್.ಎಫ್.ಐ. ಜಿಲ್ಲಾಧ್ಯಕ್ಷ ಗುರುರಾಜ ದೇಸಾಯಿ, ರೇಣುಕಮ್ಮ, ಯಮನಮ್ಮ,ಶ್ಯಾವಿ, ಹುಸೇನ್ ನದಾಫ್, ಗುಂಡಮ್ಮ ಮೇಧಾ, ಬಡಕಪ್ಪ ಹುಳ್ಳಿ, ಯಮನೂರಪ್ಪ, ದೇವಮ್ಮ ಸೇರಿದಂತೆ ನೂರಾರು ಜನ ಕಾರ್ಯಕರ್ತರು ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಂಡಿದ್ದರು.

Please follow and like us:
error