fbpx

ಡಾ.ಕಲಬುರ್ಗಿ ಹತ್ಯೆ ಖಂಡಿಸಿ ಪ್ರತಿಭಟನೆಮಾನವ ಸರಪಳಿ ನಿರ್ಮಾಣ ರಸ್ತೆ ತಡೆ.

ಕೊಪ್ಪಳ ಆ.೩೦- ಹಿರಿಯ ಸಂಶೋಧಕ ,ಸಾಹಿತಿ ಡಾ.ಎಂ.ಎಂ.ಕಲಬುರ್ಗಿ ಯವರ  ಮೇಲೆ  ಧಾರವಾಡದಲ್ಲಿ ಗುಂಡಿನ ದಾಳಿ ನಡೆಸಿ,ಹತ್ಯೆಗೈದಿರುವ ದುರ್ಘಟನೆ ಖಂಡಿಸಿ ತಿರುಳ್ಗನ್ನಡ ಕ್ರಿಯಾ ಸಮಿತಿ ನೇತೃತ್ವದಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳು , ಹಠಾತ್ ಸಭೆ ಸೇರಿ ಒಕ್ಕೊರಲಿನ ಖಂಡನಾ ನಿರ್ಣಯ ಕೈಗೊಂಡರು.  ನಂತರ ಅಶೋಕ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ರಸ್ತೆ ತಡೆ ನಡೆಸಿ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದರು. ರವಿವಾರ ಬೆಳಗಿನ ಜಾವ  ಧಾರವಾಡದಲ್ಲಿ  ಹಿರಿಯ ಸಂಶೋಧಕ ಡಾ.ಕಲಬುರ್ಗಿಯವರನ್ನು ಹತ್ಯೆಗೈದ ಸುದ್ದಿ ತಿಳಿಯುತ್ತಿದ್ದಂತೆಯೇ ತಿರುಳ್ಗನ್ನಡ ಕ್ರಿಯಾ ಸಮಿತಿಯ ನೇತೃತ್ವದಲ್ಲಿ  ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಅಧ್ಯಕ್ಷತೆಯಲ್ಲಿ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ನಗರದ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿದರು. ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು. ಸಾಹಿತಿ ಡಾ.ವಿ.ಬಿ.ರಡ್ಡೇರ ಮಾತನಾಡಿ, ಸಂಶೋಧಕ,ಸಾಹಿತಿ ಎಂ.ಎಂ.ಕಲಬುರ್ಗಿಯವರ ಕೊಲೆ ಕೇವಲ ನಮ್ಮ ರಾಜ್ಯ,ದೇಶ ಅಷ್ಟೇ ಅಲ್ಲ ಸಮಸ್ತ ಪ್ರಪಂಚದ ಮಾನವೀಯತೆಯ ಕಗ್ಗೊಲೆಯಾಗಿದೆ. ೧೯೭೮-೭೯ ರ ಅವಧಿಯಲ್ಲಿ ಧಾರವಾಡದ ಕರ್ನಾಟಕ ವಿ.ವಿ.ಯಲ್ಲಿ ಅವರ ನೇರ ವಿದ್ಯಾರ್ಥಿಗಳಾಗಿದ್ದ  ನಾವು ಅವರಲ್ಲಿನ ಪ್ರತಿಭೆ,ಒಂದು ನಿಮಿಷವನ್ನೂ ವ್ಯರ್ಥ ಮಾಡದಂತೆ ಪಾಠ ಮಾಡುತ್ತಿದ್ದ  ವೈಖರಿಯನ್ನು ಕಂಡಿದ್ದೇವೆ. ವಚನಗಳನ್ನು ಕನ್ನಡದಲ್ಲಿ  ವಿಶೇಷವಾಗಿ ಅರ್ಥೈಸಿ ಸಾಕಷ್ಟು ಸಂಶೋಧನೆ ಮಾಡಿದ್ದ ಅವರು ಎಂದಿಗೂ ಸತ್ಯ ಹೇಳಲು ಹಿಂಜರಿಯುತ್ತಿರಲಿಲ್ಲ. ಕರ್ನಾಟಕದಲ್ಲಿ ಭಯೋತ್ಪಾದಕ ವಾತಾವರಣ ನಿರ್ಮಾಣವಾಗುತ್ತಿರುವದು ಖಂಡನೀಯ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬುಲೆಟ್ ಉತ್ತರವಾಗುತ್ತಿರುವದು ದುರಂತ . ವಿಚಾರಬೇಧಗಳಿಗೆ ಪ್ರಜಾಪ್ರಭುತ್ವದಲ್ಲಿ ಮುಕ್ತ ಅವಕಾಶಗಳಿರಬೇಕು ಎಂದರು. ದುಷ್ಕೃತ್ಯ ಎಸಗಿದವರನ್ನು ಬಂಧಿಸಿ ಶಿಕ್ಷೆಗೆ ಗುರಿಪಡಿಸಬೇಕೆಂದು ಆಗ್ರಹಿಸಿ ಘೋಷಣೆಗಳನ್ನು ಕೂಗುತ್ತ ಅಶೋಕವೃತ್ತಕ್ಕೆ ಆಗಮಿಸಿದ ಕನ್ನಡಪರ ಕಾರ್ಯಕರ್ತರು ಅಲ್ಲಿ ಬಹಿರಂಗ ಪ್ರತಿಭಟನೆ ನಡೆಸಿದರು.
ಬಂಡಾಯ ಸಾಹಿತಿ ಪ್ರೊ.ಅಲ್ಲಮಪ್ರಭು ಬೆಟ್ಟದೂರ ಮಾತನಾಡಿ, ಬ್ರಾಹ್ಮಣೇತರರು ಹಿಂದೂಗಳಲ್ಲ  ಎಂದು ಬಲವಾಗಿ ಪ್ರತಿಪಾದಿಸುತ್ತಿದ್ದ  ಡಾ.ಕಲಬುರ್ಗಿಯವರು,ನಿರಂತರ ಅಧ್ಯಯನಶೀಲರಾಗಿರದ್ದರು. ಬಸವಣ್ಣ ,ಗಾಂಧೀಜಿಯಂತಹ ಮಹಾತ್ಮರನ್ನು ಕೊಲೆಗೈದ ನಾಡಿನಲ್ಲಿ ಇಂದು ಕಲಬುರ್ಗಿಯವರನ್ನೂ ಸಹ ಹತ್ಯೆ ಮಾಡಿರುವದು .ಅಂತಹ ನೀಚ ಮನಸ್ಸುಗಳು ಇಂದಿಗೂ ಅಪಾಯಕಾರಿಯಾಗಿ ಉಳಿದಿವೆ ಎಂಬುದಕ್ಕೆ ಸಾಕ್ಷಿ ಎಂದರು.
ಪತ್ರಕರ್ತ ವಿಠ್ಠಪ್ಪ ಗೋರಂಟ್ಲಿ ಮಾತನಾಡಿ, ಡಾ.ಕಲಬುರ್ಗಿಯವರು ವಚನಕಾರ ಚನ್ನಬಸವಣ್ಣ ನ ಜನನ ,ಕನಕಾದಸರ ಜಾತಿಯ ಮರುಪರಿಶೀಲನೆ ಮೊದಲಾದ ವಿಚಾರಗಳಲ್ಲಿ ಸ್ಪಷ್ಟವಾಗಿ ತಮ್ಮ ಮಾರ್ಗ ೧ ಹಾಗೂ ಮಾರ್ಗ ೨ ಸಂಪುಟಗಳಲ್ಲಿ ವಿಷಯ ಮಂಡಿಸಿದ್ದಾರೆ.  ಯಾವುದೇ ವಿಷಯಗಳನ್ನು  ನಿರ್ದಾಕ್ಷಿಣ್ಯವಾಗಿ ,ನಿಷ್ಠುರವಾಗಿ ಹೇಳುವ ಗುಣ ಬೆಳೆಸಿಕೊಂಡಿದ್ದರು. ಮಹಾರಾಷ್ಟ್ರದಲ್ಲಿ ಪ್ರಖರ ವಿಚಾರವಾದಿ ನರೇಂದ್ರ ದಾಬೋಲ್ಕರ್ ಅವರನ್ನು ಹತ್ಯಗೈದ ರೀತಿಯಲ್ಲಿಯೇ , ನಮ್ಮ ರಾಜ್ಯದಲ್ಲಿ ಡಾ.ಕಲಬುರ್ಗಿಯವನ್ನು ಕೊಂದಿರುವದು ಆತಂಕ ಸಂಗತಿ.ಸಂಶೋಧನಾ ಕ್ಷೇತ್ರಕ್ಕೆ ದೊಡ್ಡ ನಷ್ಟ ಎಂದರು.
ವಿಶ್ವಗುರು ಬಸವೇಶ್ವರ ಚಾರಿಟೇಬಲ್ ಟ್ರಸ್ಟಿನ ಸಸಿಮಠ ಮಾತನಾಡಿ, ಬರುವ ಅಕ್ಟೋಬರ್ ನಲ್ಲಿ  ಎಂ.ಎಂ.ಕಲಬುರ್ಗಿಯವರು ಸ್ಫೋಟಕ ಸತ್ಯವೊಂದನ್ನು ಬಹಿರಂಗಗೊಳಿಸುವವರಿದ್ದರು. ಈ ಹಿನ್ನೆಲೆಯಲ್ಲಿಯೇ ಅದ
ಸಾಹಿತಿಗಳಾದ ಹೆಚ್.ಎಸ್.ಪಾಟೀಲ,ಡಾ.ಮಹಾಂತೇಶ ಮಲ್ಲನಗೌಡರ,ಡಾ.ಕೆ.ಬಿ.ಬ್ಯಾಳಿ, ಗವಿಸಿದ್ದಪ್ಪ ಕೊಪ್ಪಳ,ತಿರುಳ್ಗನ್ನಡ ಕ್ರಿಯಾಸಮಿತಿಯ ಪ್ರಧಾನ ಕಾರ್ಯದರ್ಶಿ ರಾಜಶೇಖರ ಅಂಗಡಿ, ಜಿ.ಎಸ್.ಗೋನಾಳ ಮತ್ತಿತರರು ಮಾತನಾಡಿದರು.
ನಗರಸಭೆ ಉಪಾಧ್ಯಕ್ಷ ಬಾಳಪ್ಪ ಬಾರಕೇರ,ಅಖಿಲ ಭಾರತ ವೀರಶೈವ ಮಹಾಸಭೆಯ ಬಸವರಾಜ ಬಳ್ಳೊಳ್ಳಿ, ವಿಶ್ವಗುರು ಬಸವೇಶ್ವರ ಚಾರಿಟೇಬಲ್ ಟ್ರಸ್ಟಿನ ಪಂಪಾಪತಿ ಹೊನ್ನಳ್ಳಿ, ತಿರುಳ್ಗನ್ನಡ ಕ್ರಿಯಾ ಸಮಿತಿ ಕಾರ್ಯದರ್ಶಿ ಮಂಜುನಾಥ ಡೊಳ್ಳಿನ ,ಹೆಚ್.ವಿ.ರಾಜಾಭಕ್ಷಿ,ಶಿವಾನಂದ ಹೊದ್ಲೂರ,ವೀರಣ್ಣ ಹುರಕಡ್ಲಿ, ಮಹೇಶಬಾಬು ಸುರ್ವೆ,ಸಾದಿಕ್ ಅಲಿ. ಎನ್.ಎಮ್.ದೊಡ್ಡಮನಿ, ಸುರೇಶ ಕಂಬಳಿ,ಸಿರಾಜ್ ಬಿಸರಳ್ಳಿ, ಬಸಪ್ಪ ದೇಸಾಯಿ,ಕಲ್ಲನಗೌಡ,ನಾಗರಾಜನಾಯಕ ಡೊಳ್ಳಿನ,ವೈ.ಬಿ.ಜೂಡಿ,ವಿಜಯಲಕ್ಷ್ಮಿ ಕೊಟಗಿ,ಸರೋಜ ಬಾಕಳೆ,ಶಾಂತಾದೇವಿ ಹಿರೇಮಠ,ಶಂಕ್ರಯ್ಯ ಅಬ್ಬಿಗೇರಿಮಠ  ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಅಶೋಕ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ,ಸುಮಾರು ಹತ್ತು ನಿಮಿಷಗಳ ಕಾಲ ರಸ್ತೆ ತಡೆ ನಡೆಸಿದುದರಿಂದ ರಾಷ್ಟ್ರೀಯ ಹೆದ್ದಾರಿ ೬೩ ರಲ್ಲಿ ಕೆಲಕಾಲ ಸಮಚಾರಕ್ಕೆ  ವ್ಯತ್ಯಯ ಉಂಟಾಗಿತ್ತು.

ನ್ನು ಸಹಿಸದ ದುಷ್ಕರ್ಮಿಗಳು ಹತ್ಯಗೈದಿರುವ ಶಂಕೆಯಿದೆ ,ತಪ್ಪಿತಸ್ಥರನ್ನು  ಬಂಧಿಸಿ ಶಿಕ್ಷೆಗೆ ಗುರಿಪಡಿಸಬೇಕೆಂದರು.

Please follow and like us:
error

Leave a Reply

error: Content is protected !!