ಜನಶ್ರೀ ವಾಹಿನಿಯ ಪ್ರಥಮ ವಾರ್ಷಿಕೋತ್ಸವ

ರೀದಂ ಡ್ಯಾನ್ಸ್ ಅಕ್ಯಾಡೆಮಿಯಿಂದ ಜನಶ್ರೀ ವಾಹಿನಿಯ ಪ್ರಥಮ ವಾರ್ಷಿಕೋತ್ಸವ ಆಚರಣೆ
ಕೊಪ್ಪಳ,ಫೆ.೧೮: ನಗರದ ಸಾಹಿತ್ಯ ಭವನದಲ್ಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಕಚೇರಿ ಸಭಾಂಗಣದಲ್ಲಿಂದು ರೀದಂ ಡ್ಯಾನ್ಸ್ ಅಕ್ಯಾಡೆಮಿವತಿಯಿಂದ ಜನಶ್ರೀ ವಾಹಿನಿಯ ಚಾನೆಲ್‌ನ ಪ್ರಥಮ ವಾರ್ಷಿಕೋತ್ಸವ ಹುಟ್ಟು ಹಬ್ಬವನ್ನು ಕೇಕ್ ಕಟ್ಟ ಮಾಡುವುದರ ಮೂಲಕ ಜೆಡಿಎಸ್ ಮುಖಂಡ ಹಾಗೂ ಸೈಯ್ಯದ್ ಪೌಂಡೇಶನ್ ಟ್ರಸ್ಟ್ ಅಧ್ಯಕ್ಷ ಕೆ.ಎಂ.ಸೈಯ್ಯದ್ ನೆರವೇರಿಸಿ ಮಾತನಾಡಿದರು.
ಕಾರ್ಯಕ್ರಮದ ಉದ್ಘಾಟನೆ ದೀಪ ಬೆಳಗಿಸುವುದರ ಮೂಲಕ ಜಿ.ಪಂ.ಸದಸ್ಯ ಈರಪ್ಪ ಕುಡಗುಂಟಿ ನೆರವೇರಿಸಿ ಉದ್ಘಾಟನಾ ಭಾಷಣ ಮಾಡಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಪ್ರಥಮ ದರ್ಜೆ ಗುತ್ತಿಗೆದಾರ ಸುರೇಶ ಭೂಮರೆಡ್ಡಿ, ಪತ್ರಕರ್ತರಾದ ಎಂ.ಸಾಧಿಕ್ ಅಲಿ, ಎನ್.ಎಂ.ದೊಡ್ಡಮನಿ ಮತ್ತು ಗುರುಟೇಕ್ ಸಂಸ್ಥೆಯ ಶಿವಪುತ್ರಪ್ಪರವರು ಮಾತನಾಡಿದರು. ಕಸಾಪ ತಾಲೂಕ ಅಧ್ಯಕ್ಷ ಜಿ.ಎಸ್.ಗೋನಾಳ ಅಧ್ಯಕ್ಷತೆ ವಹಿಸಿ ಅಧ್ಯಕ್ಷೀಯ ಭಾಷಣ ಮಾಡಿದರು.
ರವಿ ಕುರಗೋಡ್, ಪೀರುಸಾಬ ಬೆಳಗಟ್ಟಿ ವೇದಿಕೆಯ ಮೇಲೆ ಉಪಸ್ಥಿತರಿದ್ದರೆ ರೀದಂ ಡ್ಯಾನ್ಸ್ ಅಕ್ಯಾಡೆಮಿಯ ಅಧ್ಯಕ್ಷ ಬಸವರಾಜ ಮಾಲಗಿತ್ತಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶರಣುರವರು ಕಾರ್ಯಕ್ರಮವನ್ನು ನಿರೂಪಿಸಿ ಕೊನೆಯಲ್ಲಿ ವಂದಿಸಿದರು. ಜನಶ್ರೀ ವಾಹಿನಿಯ ಜಯಂತ ಮತ್ತು ನಾಗರಾಜ ಡೊಳ್ಳಿನ್ ಉಪಸ್ಥಿತರಿದ್ದರು.
Please follow and like us:
error