You are here
Home > Koppal News > ಮಹಿಳೆ ಕಾಣೆ ಪತ್ತೆಗೆ ಸಹಕರಿಸಲು ಮನವಿ.

ಮಹಿಳೆ ಕಾಣೆ ಪತ್ತೆಗೆ ಸಹಕರಿಸಲು ಮನವಿ.

ಕೊಪ್ಪಳ,
ಡಿ.೧೮ (ಕ ವಾ) ಕೊಪ್ಪಳ ಜಿಲ್ಲೆಯ ಕುಷ್ಟಗಿಯ ಕೃಷ್ಣಗಿರಿ ಕಾಲೋನಿಯ  ಸೀಮಾ
(೧೯) ಗಂಡ ಉಮೇಶ ಚಿತ್ರಗಾರ ಎಂಬ ಮಹಿಳೆ ಕಳೆದ ಡಿ. ೧೩ ರಿಂದ ಕಾಣೆಯಾಗಿದ್ದು, ಈ
ಮಹಿಳೆಯ ಪತ್ತೆಗೆ ಸಹಕರಿಸುವಂತೆ ಕುಷ್ಟಗಿ ಪೊಲೀಸ್ ಠಾಣಾ ಪ್ರಭಾರಕರು ಸಾರ್ವಜನಿಕರಲ್ಲಿ
ಮನವಿ ಮಾಡಿಕೊಂಡಿದ್ದಾರೆ.
     ಮಹಿಳೆಯು ಡಿ.೧೩ ರ ಭಾನುವಾರದಂದು ಮುಂಜಾನೆ ೬.೦೦
ಗಂಟೆಗೆ ಕುಷ್ಟಗಿಯ ತನ್ನ ಗಂಡನ ಮನೆಯಿಂದ ಹೊರಗಡೆ ಹೋದವಳು ವಾಪಸ್ ಮನೆಗೆ ಬಂದಿಲ್ಲ. ಈ
ಕುರಿತಂತೆ ಮಹಿಳೆಯ ತವರು ಮನೆ ತಳಕಲ್ ಸೇರಿದಂತೆ  ಸಂಬಂಧಿಕರ ಮನೆಗಳಲ್ಲೂ ಮಹಿಳೆಯ ಬಗ್ಗೆ
ಸುಳಿವು ಸಿಕ್ಕಿಲ್ಲ. 
     ಕಾಣೆಯಾದ ಮಹಿಳೆಯ ವಿವರ ಇಂತಿದೆ ಹೆಸರು: ಸೀಮಾ,
ಗಂಡ ಉಮೇಶ ಚಿತ್ರಗಾರ, ವಯಸ್ಸು: ೧೯, ಸಾ|| ಕೃಷ್ಣಗಿರಿ ಕಾಲೋನಿ, ಕುಷ್ಟಗಿ.  ತಂದೆ:
ರೇಣುಕಾರಾಜ,  ಜಾತಿ: ಸೋಮವಂಶ ಕ್ಷತ್ರೀಯ, ಎತ್ತರ: ೫ ಫೀಟು, ವಿದ್ಯಾರ್ಹತೆ: ೯ನೇ
ತರಗತಿ, ಕನ್ನಡ ಭಾಷೆ ಮಾತನಾಡುತ್ತಾಳೆ, ಸಾಧಾರಣ ಮೈಕಟ್ಟು, ಕೆಂಪು ಮೈಬಣ್ಣ, ಕಪ್ಪು
ತಲೆಕೂದಲು, ದುಂಡನೆಯ ಮುಖ, ಹಣೆಯ ಮಧ್ಯದಲ್ಲಿ ಒಂದು ಸಣ್ಣ ಹಚ್ಚೆ ಹಾಕಿಸಲಾಗಿದೆ.
ಕಾಣೆಯಾದ ಸಂದರ್ಭದಲ್ಲಿ ಹಳದಿ ಬಣ್ಣದ ಡಿಸೈನ್  ಸೀರೆ, ಕುಪ್ಪಸ ತೊಟ್ಟಿರುತ್ತಾಳೆ.
    
ಈ  ಚಹರೆಯುಳ್ಳ ಮಹಿಳೆಯ ಬಗ್ಗೆ ಯಾವುದೇ ಠಾಣಾ ವ್ಯಾಪ್ತಿಯಲ್ಲಿ ಮಾಹಿತಿ ಗೊತ್ತಾದಲ್ಲಿ,
ಕುಷ್ಟಗಿ ಪೊಲೀಸ್ ಠಾಣೆ, ದೂರವಾಣಿ ಸಂಖ್ಯೆ: ೦೮೫೩೬-೨೬೭೦೩೩, ಕೊಪ್ಪಳ ನಿಯಂತ್ರಣ
ಕೊಠಡಿ, ದೂರವಾಣಿ ಸಂಖ್ಯೆ: ೦೮೫೩೯-೨೩೦೨೨೨ ಇವರಿಗೆ ಮಾಹಿತಿ ನೀಡುವಂತೆ ಕುಷ್ಟಗಿ
ಪೊಲೀಸ್ ಠಾಣಾ ಪ್ರಭಾರಕರು ತಿಳಿಸಿದ್ದಾರೆ.

Leave a Reply

Top