ಆನೆಗೊಂದಿ ಉತ್ಸವ: ವಿವಿಧ ಕ್ರೀಡೆಗಳಿಗೆ ಹೆಸರು ನೋಂದಾಯಿಸಲು ಸೂಚನೆ

ಕೊಪ್ಪಳ ಏ.  : ಆನೆಗೊಂದಿ ಉತ್ಸವದ ಅಂಗವಾಗಿ ಏ. ೧೨ ರಂದು ಆನೆಗೊಂದಿಯಲ್ಲಿ ಏರ್ಪಡಿಸಲಾಗಿರುವ ವಿವಿಧ ಕ್ರೀಡೆಗಳಲ್ಲಿ ಪಾಲ್ಗೊಳ್ಳಲು, ಇಚ್ಛಿಸುವವರು ಹೆಸರು ನೋಂದಾಯಿಸಿಕೊಳ್ಳಲು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸೂಚನೆ ನೀಡಿದೆ.

  ಆನೆಗೊಂದಿ ಉತ್ಸವದಲ್ಲಿ ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚಿನ ಉತ್ತೇಜನ ನೀಡುವ ನಿಟ್ಟಿನಲ್ಲಿ ಪುರುಷರಿಗೆ ಮತ್ತು ಮಹಿಳೆಯರಿಗೆ ಹಾಗೂ ವಿಕಲಚೇತನರಿಗೆ ಪ್ರತ್ಯೇಕವಾಗಿ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. 
  ಪುರುಷರಿಗಾಗಿ ನಡೆಸಲಾಗುವ ೧೨ ಕಿ.ಮೀ. ಮ್ಯಾರಥಾನ್ ಸ್ಪರ್ಧೆ ಏ. ೧೨ ರಂದು ಬೆಳಿಗ್ಗೆ ೭ ಗಂಟೆಗೆ ಆನೆಗೊಂದಿ ದುರ್ಗಾದೇವಿ ದೇವಸ್ಥಾನ ಬಳಿಯಿಂದ ಪ್ರಾರಂಭಗೊಂಡು, ಆನೆಗೊಂದಿ ಉತ್ಸವ ವೇದಿಕೆ ಬಳಿ ಕೊನೆಗೊಳ್ಳಲಿದೆ.  ಈ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ೦೫ ಸಾವಿರ, ದ್ವಿತೀಯ- ೦೪ ಸಾವಿರ ಹಾಗೂ ತೃತೀಯ ಸ್ಥಾನ ಪಡೆದವರಿಗೆ ೦೩ ಸಾವಿರ ಬಹುಮಾನ ನೀಡಲಾಗುವುದು.  ಭಾರ ಎತ್ತಿ ಬಸ್ಕಿ ಹೊಡೆಯುವ ಸ್ಪರ್ಧೆ ಅಂದು ಮುಖ್ಯ ವೇದಿಕೆ ಬಳಿ ಜರುಗಲಿದ್ದು, ಈ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ೦೪ ಸಾವಿರ, ದ್ವಿತೀಯ- ೦೩ ಸಾವಿರ ಹಾಗೂ ತೃತೀಯ ಸ್ಥಾನ ಪಡೆದವರಿಗೆ ೦೨ ಸಾವಿರ ಬಹುಮಾನ ನೀಡಲಾಗುವುದು.  ಕುಸ್ತಿ ಪಂದ್ಯಗಳಲ್ಲಿ ೫೭ ರಿಂದ ೬೪ ಕೆ.ಜಿ. ವಿಭಾಗ, ೬೫ ರಿಂದ ೬೯ ಕೆ.ಜಿ., ೭೦ ರಿಂದ ೭೩ ಕೆ.ಜಿ. ಹಾಗೂ ೭೫ ಕೆ.ಜಿ.ಗಿಂತ ಮೇಲ್ಪಟ್ಟ ವಿಭಾಗದವರಿಗೆ ಪ್ರತ್ಯೇಕ ಸ್ಪರ್ಧೆ ನಡೆಸಲಾಗುವುದು.  ೫೭-೬೪ ಕೆ.ಜಿ. ವಿಭಾಗದಲ್ಲಿ ಪ್ರಥಮ ಸ್ಥಾನಕ್ಕೆ ೦೪ ಸಾವಿರ ರೂ., ದ್ವಿತೀಯ- ೦೩ ಸಾವಿರ, ತೃತೀಯ- ೦೨ ಸಾವಿರ ರೂ. ನಗದು ಬಹುಮಾನ ನೀಡಲಾಗುವುದು.  ೬೫-೬೯ ಕೆ.ಜಿ. ವಿಭಾಗದಲ್ಲಿ ಪ್ರಥಮ ಸ್ಥಾನಕ್ಕೆ ೦೪ ಸಾವಿರ ರೂ., ದ್ವಿತೀಯ- ೦೩ ಸಾವಿರ,  ತೃತೀಯ – ೦೨ ಸಾವಿರ ರೂ. ನಗದು ಬಹುಮಾನ.  ೭೦-೭೩ ಕೆ.ಜಿ. ವಿಭಾಗದಲ್ಲಿ ಪ್ರಥಮ ಸ್ಥಾನಕ್ಕೆ ೦೫ ಸಾವಿರ ರೂ., ದ್ವಿತೀಯ- ೦೪ ಸಾವಿರ,  ತೃತೀಯ- ೦೩ ಸಾವಿರ ರೂ. ನಗದು ಬಹುಮಾನ.  ೭೪ ಕೆ.ಜಿ. ಮೇಲ್ಪಟ್ಟ ವಿಭಾಗದಲ್ಲಿ ಪ್ರಥಮ ಸ್ಥಾನಕ್ಕೆ ೦೬ ಸಾವಿರ ರೂ., ದ್ವಿತೀಯ- ೦೫ ಸಾವಿರ,  ತೃತೀಯ- ೦೪ ಸಾವಿರ ರೂ. ನಗದು ಬಹುಮಾನ ನೀಡಲಾಗುವುದು.  ಮಲ್ಲಕಂಬ ಸ್ಪರ್ಧೆಯಲ್ಲಿ ಪ್ರಥಮ-೦೭ ಸಾವಿರ, ದ್ವಿತೀಯ-೦೬ ಸಾವಿರ ಹಾಗೂ ತೃತೀಯ- ೦೫ ಸಾವಿರ ರೂ. ಬಹುಮಾನ.  ಬಾಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಪ್ರಥಮ-೦೭ ಸಾವಿರ, ದ್ವಿತೀಯ-೦೬ ಸಾವಿರ ಹಾಗೂ ತೃತೀಯ- ೦೫ ಸಾವಿರ ರೂ. ಬಹುಮಾನ ನೀಡಲಾಗುವುದು.  ಕುಸ್ತಿಯಲ್ಲಿ ಭಾಗವಹಿಸುವ ಕ್ರೀಡಾಪಟುಗಳು ಏ. ೧೨ ರಂದು ಬೆಳಿಗ್ಗೆ ೧೦ ಗಂಟೆಯೊಳಗಾಗಿ ತಮ್ಮ ತೂಕವನ್ನು ಮುಖ್ಯ ವೇದಿಕೆಯ ಬಳಿ ಸಂಘಟಕರಲ್ಲಿ ನೋಂದಾಯಿಸಕೊಳ್ಳಬೇಕು.
  ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ ಆನೆಗೊಂದಿಯ ರಂಗನಾಥಸ್ವಾಮಿ ದೇವಾಲಯ ಆವರಣದಲ್ಲಿ ನಡೆಯಲಿದ್ದು,  ಪ್ರಥಮ ಸ್ಥಾನ ಪಡೆದವರಿಗೆ-೦೩ ಸಾವಿರ, ದ್ವಿತೀಯ-೦೨ ಸಾವಿರ ಹಾಗೂ ತೃತೀಯ- ೦೧ ಸಾವಿರ ರೂ. ಬಹುಮಾನ.  ಏ. ೧೨ ರಂದು ಬೆಳಿಗ್ಗೆ ೭-೩೦ ಗಂಟೆಗೆ ೬ ಕಿ.ಮೀ. ಮ್ಯಾರಥಾನ್ ಸ್ಪರ್ಧೆ ಹನುಮನಹಳ್ಳಿಯ (ಆಂಜನೇಯ ಬೆಟ್ಟ) ದೇವಸ್ಥಾನದಿಂದ ಉತ್ಸವ ವೇದಿಕೆವರೆಗೆ ನಡೆಯಲಿದ್ದು,  ಪ್ರಥಮ ಸ್ಥಾನ ಪಡೆದವರಿಗೆ-೦೫ ಸಾವಿರ, ದ್ವಿತೀಯ-೦೪ ಸಾವಿರ ಹಾಗೂ ತೃತೀಯ- ೦೨ ಸಾವಿರ ರೂ. ಬಹುಮಾನ ನೀಡಲಾಗುವುದು.
  ವಿಕಲಚೇತನರಿಗಾಗಿ ಈ ಬಾರಿ ವಿಶೇಷವಾಗಿ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿದ್ದು, ಪ್ರಥಮ ಸ್ಥಾನ ಪಡೆದವರಿಗೆ-೦೭ ಸಾವಿರ, ದ್ವಿತೀಯ-೦೬ ಸಾವಿರ ಹಾಗೂ ತೃತೀಯ- ೦೫ ಸಾವಿರ ರೂ. ಬಹುಮಾನ ನೀಡಲಾಗುವುದು.
  ಕ್ರೀಡಾಪಟುಗಳಿಗೆ ಯಾವುದೇ ಪ್ರಯಾಣ ಭತ್ಯೆ ನೀಡಲಾಗುವುದಿಲ್ಲ.  ಸ್ಪರ್ಧಾಳುಗಳಿಗೆ ಉತ್ಸವ ಸಮಿತಿ ವತಿಯಿಂದ ಅಂದು ಊಟೋಪಹಾರದ ವ್ಯವಸ್ಥೆ ಕೈಗೊಳ್ಳಲಾಗಿದೆ.   ಆಸಕ್ತ ಕ್ರೀಡಾ ಪಟುಗಳು ಏ. ೧೦ ರಂದು ಮಧ್ಯಾಹ್ನ ೩ ಗಂಟೆಯ ಒಳಗಾಗಿ ತಂಡದ ಹೆಸರನ್ನು ನೋಂದಾಯಿಸಿಕೊಳ್ಳಬೇಕು.  ಹೆಚ್ಚಿನ ಮಾಹಿತಿಗೆ  ಸಿ.ಎ. ಪಾಟೀಲ್- ೯೩೪೨೩೮೭೯೩೫.  ಯತಿರಾಜು- ೯೪೪೮೬೩೩೧೪೬ ಅಥವಾ ೦೮೫೩೯-೨೦೧೪೦೦ ಕ್ಕೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Leave a Reply