ಕುಷ್ಟಗಿ ಶಾಸಕ ಅಮರೇಗೌಡ ಭಯ್ಯಾಪೂರ ಧರಣಿ

ಕೊಪ್ಪಳ : ಬಸಾಪೂರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದ ಕುಷ್ಟಗಿ ಶಾಸಕ ಅಮರೇಗೌಡ ಭಯ್ಯಾಪೂರ ಅವರ ಕಾರನ್ನು ತಡೆದು , ಚಾಲಕನ ಮೇಲೆ ಹಲ್ಲೆ ಮಾಡಿದ್ದರಿಂದ ಸಿಟ್ಟಿಗೆದ್ದ ಶಾಸಕ ಅಮರೇಗೌಡ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಎದುರೇ ಧರಣಿ ಕುಳಿತ ಪ್ರಸಂಗ ನಡೆಯಿತು. ಶಾಸಕರು ಕಾರ್ಯಕ್ರಮಕ್ಕೆ ಆಗಮಿಸುವಾಗ ಅವರು ಕಾರ್ಯಕ್ರಮದಲ್ಲಿ ಪ್ರತಿಭಟಿಸಬಹುದು ಎನ್ನುವ ಕಾರಣಕ್ಕೆ ಅವರ ಕಾರನ್ನು ತಡೆಯಲಾಗಿತ್ತು. ಆದರೆ ಶಾಸಕರು ತಮ್ಮ ಚಾಲಕನಿಗೆ ಮುಂದೆ ಸಾಗಲು ಸೂಚಿಸಿದಾಗ ಕಾರನ್ನು ಮುಂದೆ ಚಲಾಯಿಸಿದ ಚಾಲಕನನ್ನು ಪೊಲೀಸರು ಹೊರಗೆ ಎಳೆದಾಡಿದ್ದಾರೆ. ಇದರಿಂದ ಸಿಟ್ಟಿಗೆದ್ದ ಶಾಸಕ ಕಾರ್ಯಕ್ರಮ ನಡೆಯುವಾಗ ವೇದಿಕೆಯ ಮೇಲೆ ಆಸೀನರಾಗದೆ ವೇದಿಕೆ ಎದುರಿಗೆ ಧರಣಿ ನಡೆಸಿದರು. ಆರೋಗ್ಯ ಸಚಿವ ಶ್ರೀರಾಮಲು ಅವರನ್ನು ಸಮಾಧಾನ ಮಾಡಿ ವೇದಿಕೆಗೆ ಕರೆತಂದರು.
Please follow and like us:
error