ಸಿ.ಎಂ. ಜೊತೆ ಅನಿರ್ದಿಷ್ಟ ‘ಆಶಾ’ ಮುಷ್ಕರದ ಕುರಿತು ಚರ್ಚೆ.

ಒಂದು-ಒಂದೂವರೆ ವರ್ಷದವರೆಗೆ ಬಾಕಿ ಇರುವ ಕೇಂದ್ರದ ಪ್ರೋತ್ಸಾಹಧನ ಮತ್ತು ರಾಜ್ಯದ ‘ಮ್ಯಾಚಿಂಗ್ ಇನ್ಸೆಂಟಿವ್’ ಬಿಡುಗಡೆಗೆ ಆಗ್ರಹಿಸಿ, ಅಕ್ಟೋಬರ್ ೫ ರಿಂದ ನಡೆಯುತ್ತಿರುವ ರಾಜ್ಯವ್ಯಾಪಿ ಆಶಾ ಕಾರ್ಯಕರ್ತೆಯರ ಅನಿರ್ದಿಷ್ಟ ‘ಕೆಲಸ ಬಂದ್’ ಮುಷ್ಕರ ಕುರಿತು ನೆನ್ನೆ ಮೈಸೂರಿನಲ್ಲಿ ಆಶಾ ನಾಯಕರು ನಿಯೋಗದಲ್ಲಿ ಮಾನ್ಯ ಮುಖ್ಯಮಂತ್ರಿ ಶ್ರೀಸಿದ್ಧರಾಮಯ್ಯರವರನ್ನು ಭೇಟಿ ಮಾಡಿ ಚರ್ಚಿಸಿದರು. ಆದಷ್ಟು ಬೇಗ ಆರೋಗ್ಯ ಸಚಿವರು ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳ ಸಭೆ ಕರೆದು ಸಮಸ್ಯೆ ಇತ್ಯರ್ಥ ಮಾಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದರು.
ಶ್ರೀಮತಿ ಡಿ.ನಾಗಲಕ್ಷ್ಮಿ, (ರಾಜ್ಯ ಕಾರ್ಯದರ್ಶಿಗಳು, ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ), ಶ್ರೀ ಶಶಿಧರ್.ಎಂ., (ರಾಜ್ಯ ನಾಯಕರು, ಎಐಯುಟಿಯುಸಿ) ಹಾಗೂ ಶ್ರೀಮತಿ ಉಮಾದೇವಿ.ಎಂ. (ಜಿಲ್ಲಾ ಆಶಾ ನಾಯಕರು, ಮೈಸೂರು) ನಿಯೋಗದ ಭಾಗವಾಗಿದ್ದರು. ಆಶಾ ಕಾರ್ಯಕರ್ತೆಯರ ಮು

ಷ್ಕರದಿಂದಾಗಿ ರಾಜ್ಯದಾದ್ಯಂತ ಆರೋಗ್ಯ ಇಲಾಖೆಯ ಚಟುವಟಿಕೆಗಳಿಗೆ ಪ್ರಮುಖವಾಗಿ ಇಂದ್ರ ಧನುಷ್‌ಗಳಂತಹ ಕಾರ್ಯಕ್ರಮಗಳಿಗೆ ಭಾರಿ ಹೊಡೆತ ಬಿದ್ದಿದೆ. ಗರ್ಭಿಣಿ-ಬಾಣಂತಿ-ಶಿಶುಗಳ ಆರೈಕೆಯಲ್ಲಿ ವ್ಯತ್ಯಯವಾಗುತ್ತಿದೆ ಎಂದು ಆರೋಗ್ಯ ಇಲಾಖೆ ದೂರುವಂತಾಗಿದೆ. ಆರೋಗ್ಯ ಸಚಿವರು, ಕೇಂದ್ರ ಮತ್ತು ರಾಜ್ಯದ ಬಾಕಿ ಪ್ರೋತ್ಸಾಹಧನವನ್ನು ಬಿಡುಗಡೆ ಮಾಡಲು ಕ್ರಮಕೈಗೊಳ್ಳುವ ಬದಲು ಮುಷ್ಕರನಿರತ ಆಶಾಗಳಿಗೆ ಪ್ರೋತ್ಸಾಹ ಧನವನ್ನು ಕಡಿತಗೊಳಿಸಲಾಗುವುದೆಂದು ಪತ್ರಿಕಾ ಹೇಳಿಕೆ ನೀಡಿರುವುದು ವಿಷಾದನೀಯ! ಈಗ ರಾಜ್ಯದಾದ್ಯಂತ ಕಳೆದ ೨೦೧೪-೧೫ರ ಒಂದೂವರೆ ವರ್ಷದಲ್ಲಿ ಆಶಾಗಳು ನಿರ್ವಹಿಸಿದ ಕೆಲಸಗಳಿಗೆ ಸುಮಾರು ೧೦೦ ಕೋಟಿಗೂ ಹೆಚ್ಚು ಬಾಕಿ ಪ್ರೋತ್ಸಾಹ ಧನ ನೀಡಬೇಕೆಂದು ಆಶಾಗಳು ಮುಷ್ಕರದಲ್ಲಿ ತೊಡಗಿರುತ್ತಾರೆ. ಮುಷ್ಕರದಿಂದ ಆಶಾಗಳು ಕೆಲಸ ಮಾಡದೇ ಇರುವ ಪ್ರೋತ್ಸಾಹ ಧನ ಕೇಳುತ್ತಿಲ್ಲ ಎನ್ನುವುದನ್ನು ಮಾನ್ಯ ಸಚಿವರಿಗೆ ನೆನಪಿಸಲು ಇಚ್ಚಿಸುತ್ತೇವೆ. ಮುಷ್ಕರದ ಬೇಡಿಕೆಗಳು ನ್ಯಾಯೋಚಿತವಾಗಿದ್ದು, ಎಲ್ಲಾ ಬೇಡಿಕೆಗಳು ಈಡೇರುವವರೆಗೂ ಕೆಲಸ್ ಬಂದ್ ಮುಷ್ಕರ ಹಿಂತೆಗೆದುಕೊಳ್ಳುವುದಿಲ್ಲ ಎನ್ನುವುದು ರಾಜ್ಯದ ಎಲ್ಲಾ ೩೦೦೦೦ ಆಶಾಗಳ ಅಚಲ ನಿರ್ಧಾರವಾಗಿದೆ. ‘ಜನತೆಯ ಆರೋಗ್ಯದ ನಿರ್ಲಕ್ಷ್ಯಕ್ಕೆ ಸರ್ಕಾರ/ಇಲಾಖೆ ಜವಾಬ್ದಾರವಾಗುತ್ತದೆ’ ಎಂಬುದನ್ನು ಈ ಮೂಲಕ ತಿಳಿಸಲು ಇಚ್ಛಿಸುತ್ತೇವೆ. ಮಾನ್ಯ ಮುಖ್ಯ ಮಂತ್ರಿಗಳು ಸಮಸ್ಯೆಯನ್ನು ಆದಷ್ಟು ಶೀಘ್ರದಲ್ಲಿ ಬಗೆಹರಿಸುವರೆಂದು ಆಶಾಗಳು ನಂಬಿದ್ದಾರೆ.

Leave a Reply