ಶಾದಿಮಹಲ್ ಬಾಡಿಗೆ ಹೆಚ್ಚಳಕ್ಕೆ ಜೀಲಾನ್ ಸಿದ್ದಿ ಆಕ್ಷೇಪ.

ಕೊಪ್ಪಳ – ನಗರದ ರಾಷ್ಟ್ರೀಯ ಹೆದ್ದಾರಿ ೬೩ ನಗರಸಭೆ ಎದುರುಗಡೆ ಇರುವ ಮುಸ್ಲಿಂ ಶಾದಿಮಹಲ್ (ಸುನ್ನಿ)ಗೆ ನೂತನ ಆಡಳಿತ ಮಂಡಳಿ ಇತ್ತೀಚಿಗಷ್ಟೆ ಅಸ್ತಿತ್ವಕ್ಕೆ ಬಂದಿದ್ದು, ನೂತನ ಪದಾಧಿಕಾರಿಗಳ ಎರಡನೇ ಸಾಮಾನ್ಯ ಸಭೆ ಆ.೧೬ ರಂದು ಸಂಜೆ ವೇಳೆ ಶಾದಿಮಹಲ್ ಆವರಣದಲ್ಲಿ ಜರುಗಿತು. ಇದರಲ್ಲಿ ನೂತನ ಆಡಳಿತ ಮಂಡಳಿ ಒಟ್ಟು ೨೭ ಸದಸ್ಯರ ಪೈಕಿ ೧೯ ಜನ ಸದಸ್ಯರು ಸಭೆಯಲ್ಲಿ ಹಾಜರಿದ್ದು, ನಿಗಧಿಯಾಗಿರುವ ಶಾದಿಮಹಲ್ ಬಾಡಿಗೆ ರೂ.೩ ಸಾವಿರ ದಿಂದ ಈಗ ೫ ಸಾವಿರಕ್ಕೆ ಹೆಚ್ಚಳ ಮಾಡಿರುವುದಕ್ಕೆ ಆಡಳಿತ ಮಂಡಳಿಯ ಪಕ್ಷೇತರ ಸದಸ್ಯ ಮಹೆಬೂಬ ಜೀಲಾನ್ ರಹೇಮಾನ ಸಾಬ ಸಿದ್ದಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಕ್ಯಾರೆ ಎನ್ನದ ಆಡಳಿತ ಮಂಡಳಿ ಏಕಾಏಕೀ ೩ ಸಾವಿರ ದಿಂದ ೫ ಸಾವಿರಕ್ಕೆ ಬಾಡಿಗೆ ಹೆಚ್ಚಳ ಮಾಡಿರುವುದು ಸಮಂಜಸವಲ್ಲ ಮತ್ತು ಇದು ಕಾಯ್ದೆ ಕ್ರಮವಲ್ಲ ಎಂದು ವಿರೋಧ ವ್ಯಕ್ತಪಡಿಸಿದರು. ಕೊಪ್ಪಳದಲ್ಲಿ ಅಲ್ಪಸಂಖ್ಯಾತ ಸಮುದಾಯದವರ ಶಾದಿ ಇತ್ಯಾದಿ ಕಾರ್ಯಕ್ರಮಗಳ ಅನುಕೂಲಕ್ಕಾಗಿ ನಿರ್ಮಿಸಿದ ಈ ಶಾದಿಮಹಲ್ ಬಾಡಿಗೆ ರೂ.೩ ಸಾವಿರ ಇದ್ದು ಅದನ್ನೇ ಮುಂದುವರೆಸಿಕೊಂಡು ಹೋಗುವುದು ಸೂಕ್ತ . ಏಕೆಂದರೆ ಇಲ್ಲಿ ವಾಸಿಸುವ ನಮ್ಮ ಅಲ್ಪಸಂಖ್ಯಾತರ ಸಮುದಾಯದಲ್ಲಿ ಬಹುತೇಕರು ಬಡ ವರ್ಗದವರಾಗಿದ್ದು, ಅವರಿಗೆ ೩ ಸಾವಿರ ಬಾಡಿಗೆ ಸೂಕ್ತವಾಗಿದೆ. ಏಕಾ ಏಕಿ ೫ ಸಾವಿರ ಬಾಡಿಗೆ ಮಾಡಿರುವುದರಿಂದ ಜನಸಾಮಾನ್ಯರ ಮೇಲೆ ಭಾರ ಹಾಕಿದಂತಾಗುತ್ತದೆ. ನಾವು ಜನರಿಗಾಗಿ ಆಯ್ಕೆಯಾಗಿದ್ದೇವೆ. ನಮ್ಮಿಂದ ಸಾಮಾನ್ಯ ಜನರಿಗೆ ತೊಂದರೆ ಮಾಡಿ ಶಾದಿಮಹಲ್ ಅಭಿವೃದ್ದಿಪಡಿಸುವುದು ಬೇಕಾಗಿಲ್ಲ. ಇದರ ಬದಲು ಸರಕಾರದಿಂದ ಸಿಗುವ ವಿಶೇಷ ಅನುದಾನ ಜನಪ್ರತಿನಿಧಿಗಳ ಮೂಲಕ ಮನವರಿಕೆ ಮಾಡಿ ಹೆಚ್ಚು ಅನುದಾನ ಪಡೆದು ಅಭಿವೃದ್ದಿಪಡಿಸುವುದಕ್ಕಾಗಿ ನೂತನ ಆಡಳಿತ ಮಂಡಳಿಯು ಅಸ್ತಿತ್ವಕ್ಕೆ ಬಂದಿರುತ್ತದೆ. ನಾವು ನಮ್ಮ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಬಾಯಿಸಿ ಶಾದಿಮಹಲ್ ಅಭಿವೃದ್ದಿಪಡಿಸಬೇಕಾಗಿದೆ. ಆದರೆ ಜನರ ಮೇಲೆ ಹೊರೆ ಹಾಕಿ ಅವರಿಗೆ ತೊಂದರೆಯನ್ನುಂಟು ಮಾಡಿ ಅಭಿವೃದ್ದಿಪಡಿಸುವುದು ಸೂಕ್ತವಲ್ಲ. ಕೂಡಲೇ ಆಡಳಿತ ಮಂಡಳಿಯ ನನ್ನ ಸಹೋದ್ಯೋಗಿ ಮಿತ್ರರು ತಮ್ಮ ಈ ನಿರ್ಧಾರ ಹಿಂಪಡೆಯಬೇಕು ಎಂದು ಆಡಳಿತ ಮಂಡಳಿಯ ಪಕ್ಷೇತರ ಸದಸ್ಯ ಮಹೆಬೂಬ ಜೀಲಾನ್ ರಹೇಮಾನ ಸಾಬ ಸಿದ್ದಿ ಒತ್ತಾಯಪಡಿಸಿದ್ದಾರೆ.
Please follow and like us:
error