ವಿಶೇಷ ಅಗತ್ಯತೆಯುಳ್ಳ ಮಕ್ಕಳಿಗೆ ವೈದ್ಯಕೀಯ ತಪಾಸಣೆ.

ಕೊಪ್ಪಳ,
ಜು.೧೪ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ, ಕೊಪ್ಪಳ ಇವರ
ವತಿಯಿಂದ ಪ್ರಸಕ್ತ ಸಾಲಿನ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದಡಿಯಲ್ಲಿ ವಿಶೇಷ
ನ್ಯೂನ್ಯತೆಯುಳ್ಳ ಮಕ್ಕಳಿಗೆ ತಾಲೂಕಾ ಮಟ್ಟದಲ್ಲಿ ವೈದ್ಯಕೀಯ ತಪಾಸಣಾ ಶಿಬಿರಗಳನ್ನು
ಏರ್ಪಡಿಸಲಾಗಿದೆ.
     ಕೊಪ್ಪಳ ಜಿಲ್ಲೆಯ ಆಯಾ ತಾಲೂಕುಗಳ ಸರ್ಕಾರಿ ಮತ್ತು
ಅನುದಾನಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ದಾಖಲಾಗಿರುವ, ಶೇಕಡಾ ೪೦ ಕ್ಕಿಂತ
ಹೆಚ್ಚಿನ ನ್ಯೂನ್ಯತೆಯನ್ನು ಹೊಂದಿರುವ ಮಕ್ಕಳು ಈ ವೈದ್ಯಕೀಯ ತಪಾಸಣಾ ಶಿಬಿರದಲ್ಲಿ
ಭಾಗವಹಿಸಬಹುದಾಗಿದ್ದು, ಇಂತಹ ಮಕ್ಕಳನ್ನು ಈ ಕೆಳಕಂಡ ಶಿಬಿರಗಳಿಗೆ ಕರೆತರುವುದು
ಸಂಬಂಧಪಟ್ಟ ಸಿ.ಆರ್.ಪಿ, ಐ.ಇ.ಆರ್.ಟಿ ಗಳು ಹಾಗೂ ವಿಶೇಷ ಶಿಕ್ಷಕರಜವಾಬ್ದಾರಿಯಾಗಿದೆ.
ಶಿಬಿರಗಳು ಜು.೨೧ ರಂದು ಗಂಗಾವತಿಯ ಲಯನ್ಸ್ ಕ್ಲಬ್, ಐ.ಎಂ.ಎ ಭವನದಲ್ಲಿ. ಜು.೨೨ ರಂದು
ಕುಷ್ಟಗಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಬಾಲಕರ). ಜು.೨೩ ರಂದು ಯಲಬುರ್ಗಾದ
ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘ. ಮತ್ತು ಜು.೨೪ ರಂದು ಕೊಪ್ಪಳ ಸರ್ಕಾರಿ
ಹಿರಿಯ ಪ್ರಾಥಮಿಕ ಶಾಲೆ(ಸ್ಟೇಷನ್ ಎದುರು)ಯಲ್ಲಿ ನಡೆಯಲಿವೆ. ವಿಶೇಷ ಅಗತ್ಯತೆಯುಳ್ಳ
ಮಕ್ಕಳ ಪಾಲಕರು ಮಕ್ಕಳೊಂದಿಗೆ ಶಿಬಿರಕ್ಕೆ ಹಾಜರಾಗಿ, ಶಿಬಿರದ ಪ್ರಯೋಜನವನ್ನು
ಪಡೆದುಕೊಳ್ಳುವಂತೆ ಅಭಿಯಾನದ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳು
ತಿಳಿಸಿದ್ದಾರೆ.

Related posts

Leave a Comment