fbpx

ಡಿಸೆಂಬರ್ ತಿಂಗಳ ಪಡಿತರ ಧಾನ್ಯ ಬಿಡುಗಡೆ.

ಕೊಪ್ಪಳ, ಡಿ.೦೮ (ಕ ವಾ)
ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ  ಇಲಾಖೆಯು ಕೊಪ್ಪಳ ಜಿಲ್ಲೆಯ ನಗರ, ಪಟ್ಟಣ
ಮತ್ತು ಗ್ರಾಮಾಂತರ ಪ್ರದೇಶದ ಪಡಿತರದಾರರಿಗೆ ಡಿಸೆಂಬರ್ ತಿಂಗಳಿಗಾಗಿ ಆಹಾರಧಾನ್ಯ,
ಸಕ್ಕರೆ, ಸೀಮೆಎಣ್ಣೆ, ತಾಳೆಎಣ್ಣೆ ಮತ್ತು ಆಯೋಡಿನ್‌ಯುಕ್ತ ಉಪ್ಪು ಬಿಡುಗಡೆ ಮಾಡಿದೆ.
    
ಕೊಪ್ಪಳ ಜಿಲ್ಲೆಯ ಅಂತ್ಯೋದಯ ಕಾರ್ಡುದಾರರಿಗೆ ಉಚಿತವಾಗಿ ೨೯ ಕೆ.ಜಿ ಅಕ್ಕಿ, ೬ ಕೆ.ಜಿ
ಗೋಧಿ, ಕೆ.ಜಿ ಗೆ ೧೩.೫೦ ರೂ.ಗಳಂತೆ ೦೧ ಕೆ.ಜಿ ಸಕ್ಕರೆ, ಲೀಟರ್‌ಗೆ ೨೫ ರೂ.ಗಳಂತೆ ೦೧
ಲೀ ತಾಳೆ ಎಣ್ಣೆ ಹಾಗೂ ಕೆ.ಜಿ ಗೆ ೦೨ ರೂ.ಗಳಂತೆ ೦೧.ಕೆ.ಜಿ ಉಪ್ಪು ಬಿಡುಗಡೆ
ಮಾಡಲಾಗಿದೆ. ಬಿಪಿಎಲ್ ಪಡಿತರದಾರರಿಗೆ ಯಾವುದೇ ಪರಿಮಿತಿಯಿಲ್ಲದೇ ಪ್ರತಿ ಸದಸ್ಯರಿಗೆ
ಉಚಿತವಾಗಿ ೦೩ ಕೆ.ಜಿ ಅಕ್ಕಿ, ೨ ಕೆ.ಜಿ ಗೋಧಿ, ಕೆ.ಜಿ ಗೆ ೧೩.೫೦ ರೂ.ಗಳಂತೆ ೦೧ ಕೆ.ಜಿ
ಸಕ್ಕರೆ, ಲೀಟರ್‌ಗೆ ೨೫ ರೂ.ಗಳಂತೆ ೦೧.ಲೀ ತಾಳೆ ಎಣ್ಣೆ ಹಾಗೂ ಕೆ.ಜಿ ಗೆ ೦೨ ರೂ.ಗಳಂತೆ
೦೧ ಕೆ.ಜಿ ಉಪ್ಪು ಬಿಡುಗಡೆ ಮಾಡಲಾಗಿದೆ. ಎಪಿಎಲ್ ಪಡಿತರ ಚೀಟಿದಾರರಿಗೆ ಕೆ.ಜಿ ಗೆ ೧೫
ರೂ.ನಂತೆ ಏಕ ಸದಸ್ಯರಿಗೆ ೦೩, ದ್ವಿ ಮತ್ತು ಹೆಚ್ಚಿನ ಸದಸ್ಯರಿಗೆ ೦೫ ಕೆ.ಜಿ  ಅಕ್ಕಿ. 
ಪ್ರತಿ ಕೆ.ಜಿ.ಗೆ ೧೦.ರೂ.ನಂತೆ ಏಕ ಸದಸ್ಯರಿಗೆ ೦೨, ದ್ವಿ ಮತ್ತು ಹೆಚ್ಚಿನ ಸದಸ್ಯರಿಗೆ
೦೫ ಕೆ.ಜಿ ಗೋಧಿ ಬಿಡುಗಡೆ ಮಾಡಲಾಗಿದೆ. 
     ಅಂತ್ಯೋದಯ ಪಡಿತರ ಚೀಟಿದಾರರಿಗೆ
(ಪಟ್ಟಣ/ಗ್ರಾಮಾಂತರ ಪ್ರದೇಶದವರಿಗೆ)  ೧ ಮತ್ತು ೨ ಸದಸ್ಯರಿಗೆ ೩ ಲೀ. ಸೀಮೆ ಎಣ್ಣೆ. ೩
ಮತ್ತು ಅದಕ್ಕಿಂತ ಮೇಲ್ಪಟ್ಟ ಸದಸ್ಯರಿದ್ದಲ್ಲಿ ೦೫ ಲೀಟರ್. ಬಿಪಿಎಲ್ ಕುಟುಂಬಗಳಿಗೆ
(ಪಟ್ಟಣ/ಗ್ರಾಮಾಂತರ ಪ್ರದೇಶದವರಿಗೆ)  ೧ ಮತ್ತು ೨ ಜನ ಸದಸ್ಯರಿದ್ದಲ್ಲಿ ೩ ಲೀಟರ್ ಹಾಗೂ
೩ ಮತ್ತು ಮೇಲ್ಪಟ್ಟ ಸದಸ್ಯರಿದ್ದಲ್ಲಿ ೦೫ ಲೀ. ಸೀಮೆಎಣ್ಣೆ ಹಂಚಿಕೆ ಮಾಡಲಾಗಿದೆ.
ಗ್ರಾಮಾಂತರ ಪ್ರದೇಶದ ಅನಿಲ ರಹಿತ ಎ.ಪಿ.ಎಲ್ ಪಡಿತರದಾರರಿಗೆ ೦೨ ಲೀ. ಸೀಮೆಎಣ್ಣೆ
ಬಿಡುಗಡೆ ಮಾಡಲಾಗಿದೆ. ಸೀಮೆಎಣ್ಣೆ ಪ್ರತಿ ಲೀಟರ್‌ಗೆ ರೂ.೧೮ ರಂತೆ ದರ
ನಿಗದಿಪಡಿಸಲಾಗಿದೆ.
     ಕುಷ್ಟಗಿ ತಾಲೂಕಿನಲ್ಲಿ ೩೬೯ ಲುಂಗಿಗಳು, ಯಲಬುರ್ಗಾ
ತಾಲೂಕಿನಲ್ಲಿ ೧೫೦ ಧೋತಿಗಳು ಹಾಗೂ ೧೭೭ ಲುಂಗಿಗಳಿದ್ದು, ಅವುಗಳನ್ನು ಮೊದಲು ಬಂದವರಿಗೆ
ಆದ್ಯತೆಯ ಮೇರೆಗೆ ಬಿಡುಗಡೆ ಮಾಡಲಾಗುವುದು. ಪಡಿತರ ಚೀಟಿದಾರರು ಇದರ ಸದುಪಯೋಗ
ಪಡೆದುಕೊಳ್ಳುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ತಿಳಿಸಿದೆ.
Please follow and like us:
error

Leave a Reply

error: Content is protected !!