ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಸ್ಥಾನದ ನಿಯೋಜಿತ ಅಭ್ಯರ್ಥಿ ಕೊಪ್ಪಳದಲ್ಲಿ ಶಿವಾನಂದ ಮೇಟಿ ಪ್ರಚಾರ.

ಕೊಪ್ಪಳ-03- ಬರುವ ಫೆಬ್ರುವರಿ ೨೮ರಂದು ನಡೆಯಲಿರುವ ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದ ನಿಯೋಜಿತ ಅಭ್ಯರ್ಥಿಯಾದ ಶಿವಾನಂದ ಮೇಟಿಯವರು ಕೊಪ್ಪಳದಲ್ಲಿ ಪ್ರಚಾರ ಪ್ರಾರಂಭಿಸಿದ್ದಾರೆ.  
    ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರು ಮತ್ತು ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿಯವರನ್ನು ಭೇಟಿ ಮಾಡಿದ ಶಿವಾನಂದ ಮೇಟಿಯವರು ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿಕೊಂಡರು. ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿಗೆ ಸ್ಫರ್ದಿಸಿರುವ ಡಾ. ಮನು ಬಳಿಗಾರವರನ್ನು ಬೆಂಬಲಿಸುವಂತೆ ಮನವಿ ಮಾಡಿಕೊಂಡರು.    
    ಅಕ್ಬರ ಕಾಲಿಮಿರ್ಚಿ, ಆರ್.ಎಸ್.ಸರಗಣಾಚಾರ, ಬಸವರಾಜ ಪಾಟೀಲ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

Please follow and like us:
error