ಕಾಂಗ್ರೆಸ್ ಆಡಳಿತದ ಪಾರದರ್ಶಕತೆ ಕೇಳುವ ಬಿ.ಜೆ.ಪಿ ನಾಯಕರೆ ನಿಮ್ಮ ಆತ್ಮಾವಲೋಕನ ಮಾಡಿಕೊಳ್ಳಿ-ಶಾಸಕ ಕೆ.ರಾಘವೇಂದ್ರ ಹಿಟ್ನಾಳ.

ಕೊಪ್ಪಳ-೧೫, ಬಂಡಿಹರ್ಲಾಪುರ ಹಾಗೂ ಹಿಟ್ನಾಳ ಜಿಲ್ಲಾ ಪಂಚಾಯತಿಯ ಅಭ್ಯರ್ಥಿಗಳ ಚುನಾವಣಾ ಪ್ರಚಾರದಲ್ಲಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿ ಮಾತನಾಡಿದ ಶಾಸಕ ಕೆ.ರಾಘವೇಂದ್ರ ಹಿಟ್ನಾಳರವರು ದಕ್ಷಿಣ ಭಾರತದ ಕರ್ನಾಟಕದ ಮೊದಲ ಯಡಿಯೂರಪ್ಪನವರ ಬಿ.ಜೆ.ಪಿ ಸರ್ಕಾರವೆಂದು ಜಂಭ ಕೊಳ್ಳುತ್ತಿದ್ದ ಬಿ.ಜೆ.ಪಿ. ನಾಯಕರು ೫ ವರ್ಷದ ಅವಧಿಯಲ್ಲಿ ಜೈಲ್ ಬೇಲು ಆಡಳಿತ ನಡೆಸಿದ್ದು ರಾಜ್ಯದ ಜನತೆ ಮರೆತಿಲ್ಲಾ, ನಿಮ್ಮ ಲಜ್ಜೆಗೇಟ್ಟ ನಡವಳಿಕೆ ರಾಜ್ಯದಲ್ಲಿ ಇನ್ನೂ ಮನೆಮಾತಾಗಿದೆ. ನುಡಿದಂತೆ ನಡೆಯುತ್ತಿರುವ ರಾಜ್ಯದ ಜನಪ್ರೀಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರ ಸರ್ಕಾರವು ರಾಜ್ಯದ ಎಲ್ಲಾ ವರ್ಗಗಳ ಜನತೆಯ ಹಿತ ಕಾಪಾಡುತ್ತಿದೆ. ಕೊಪ್ಪಳ ಕ್ಷೇತ್ರದ ಉದ್ದಗಲಕ್ಕೂ ತಂಡೂಪ-ತಂಡವಾಗಿ ಬಿ.ಜೆ.ಪಿ ಪಕ್ಷ ತೂರೆದು ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾಗುತ್ತಿರುವುದು ಇದು ನಮ್ಮ ಅಧಿಕಾರ ಅವದಿಯ ಅಭಿವೃದ್ಧಿ ಕಾರ್ಯಗಳ ಸಾಧನೆಯಾಗಿದೆ. ಕ್ಷೇತ್ರದಲ್ಲಿ ಜನತೆ ಬಿ.ಜೆ.ಪಿಯನ್ನು ಹಾಗೂ ಬಿ.ಜೆ.ಪಿನಾಯಕರನ್ನು ತೀರಸ್ಕರಿಸಿದ್ದು, ಕಾಂಗ್ರೆಸ್ ಪಕ್ಷಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಜಿಲ್ಲಾ ಪಂಚಾಯತ ಹಾಗೂ ತಾಲೂಕು ಪಂಚಾಯತ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಬೇರಿ ಬಾರಿಸಲಿದ್ದಾರೆ. ತಮ್ಮ ಮನ್‌ಕೀ ಭಾತ್ ಹೇಳುತ್ತಿರುವ ಪ್ರಧಾನಿ ಮೋದಿಯವರು ವಿದೇಶಿ ಪ್ರಯಾಣಬಿಟ್ಟು ರಾಷ್ಟ್ರದ ಜನತೆಯ ಮನ್‌ಕೀ ಭಾತ್ ಯಾವಾಗ ಆಲಿಸುತ್ತಾರೆ. ನಾನು ತಿನ್ನುವುದಿಲ್ಲ ನಿಮಗೂ ತಿನ್ನಲು ಬೀಡುವುದಿಲ್ಲ ಎಂದು ಹೇಳಿದ ಮೋದಿಯವರು ರಾಷ್ಟ್ರದ ಬಡಜನತೆಗೆ ರೂ.೨೦೦ ೧ ಕೆ.ಜಿಯಂತೆ ತೊಗರಿಬ್ಯಾಳಿ ದೇಶದಲ್ಲಿ ಲಭ್ಯವಾಗುತ್ತಿರುವುದು ಇವರ ಆಡಳಿತ ವೈಫಲ್ಯದ ಚಿನ್ನೆಯಾಗಿದೆ ಎಂದು ವ್ಯಂಗವಾಗಿ ನುಡಿದರು.
Please follow and like us:
error