fbpx

ಜಾತಿ ವಿರುದ್ದ ಹೇಳಿಕೆ ನೀಡುವ ಬಗ್ಗೆ ಖಂಡನೆ

 ದಿ ೦೮೦೯-೨೦೧೪ ರಂದು ಕೊಪ್ಪಳ ಬಂದ್ ಮಾಡಲಾದ ವಿಷಯವನ್ನು ತಿರುಚಿ ಭೋವಿ ಸಮಾಜದ ಅಖೀಲ ಕರ್ನಾಟಕ ಬೋವಿ ಸಮಾಜದ ಯುವಘಟಕದ ರಾಜ್ಯಾಧ್ಯಕ್ಷ ಕೊಟ್ರೇಶ್ ಮತ್ತು ಬಸವರಾಜ ವಡ್ಡರ ಟಿ.ಎಂ. ರಾಮಚಂದ್ರ ದಿನಾಂಕ ೧೦-೦೯-೨೦೧೪ ರಂದು ಜಿಲ್ಲಾ ಉಸ್ತುವಾರಿ ಸಚಿವ ತಂಗಡಗಿಯವರ ಬೆಂಬಲಿಗರಾಗಿ ತಂಗಡಗಿ ತೇಜೋವದೆ ಹುನ್ನಾರ ಆರೋಪ ಎಂದು ಮಾದ್ಯಮದಲ್ಲಿ ಹೇಳಿಕೆ ನೀಡಿದ್ದಾರೆ. ಆದರೆ ಕೊಪ್ಪಳ ಬಂದ ಮಾಡಿರುವುದು ಕೇವಲ ಸಚಿವರ ಮತ್ತು ಸರಕಾರದ ವಿರುದ್ದವೇ, ಹೊರತು ಜಾತಿ ವಿರುದ್ದವಲ್ಲ ಕಾರಣ ಮರಕುಂಬಿ ಘಟನೆ ಮತ್ತು ಹೊಸಗುಡ್ಡ ಘಟನೆನಡೆದ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ನಮಗೆ ನ್ಯಾಯ ಬೇಕಾಗಿದೆ ಜಾತಿ ಬೇಕಾಗಿಲ್ಲ ಎಂಬುದೆ ನಮ್ಮ ಉದ್ದೇಶ ನಾವು ಕೂಡಾ ಇನ್ನು ಮುಂದೆ ಹೋರಾಟ ಮಾಡಲಾಗುವುದು ಇನ್ನು ಮುಂದೆ ಈ ತರಹ ಹೇಳಿಕೆ ನೀಡಿದರೆ. ನಿಮ್ಮ ವಿರುದ್ದವಾಗಿ ಮಾನನಷ್ಟ ಮೊಕದ್ದಮೆ ಹಾಕಲಾಗುತ್ತದೆ. ಅನ್ಯಾಯದ ವಿರುದ್ದ ನಮ್ಮ ಹೋರಾಟ ನಿರಂತರ ಇದ್ದೆ ಇರುತ್ತದೆ ಎಂದು ರಾಜ್ಯಾಧ್ಯಕ್ಷರಾದ ಬಿ. ಹುಸೇನಪ್ಪಸ್ವಾಮಿ ಮಾದಿಗ ಪ್ರಭುರಾಜ ಬೋಚನಹಳ್ಳಿ, ಜಿಲ್ಲಾಧ್ಯಕ್ಷರು ಮಾದಿಗ ದಂಡೋರ, ಮರಿಯಪ್ಪ ಎನ್, ದದೇಗಲ್, ಕೆ.ಎಮ್. ಆರ್.ವಿ ರಾಮಣ್ಣ ಚೌಡ್ಕಿ, ಡಿ.ಎಸ್.ಎಸ್. (ಭಿಮವಾದ) ಓಬಳೇಶ ಎಸ್. ಲಕ್ಷ್ಮಣ ವಾಯ್ ಮಾದಿನೂರ, ಹಾಗೂ ಸಮಾಜದ ಮುಖಂಡರು.  
Please follow and like us:
error

Leave a Reply

error: Content is protected !!