fbpx

ಭೂಸ್ವಾಧೀನ ಕಾಯ್ದೆ ತಿದ್ದುಪಡಿ ವಿರೊಧಿಸಿ ಸಂಸದರಿಗೆ ಮನವಿ.

ಕೇಂದ್ರ ಸಕಾ೯ರ ಇತ್ತೀಚೆಗೆ ಹೊರಡಿಸಿರುವ ಪ್ರಜಾಪ್ರಭುತ್ರ ವಿರೋಧಿಯಾದ ಹಾಗೂ ಭೂ ಸ್ವಾಧೀನ ೨೦೧೩ ರೈತರಿಗೆ ಮತ್ತು ಆದಿವಾಸಿಗಳಿಗೆ ನೀಡಿದ್ದ ಪ್ರಜಾತಾಂತ್ರಿಕ ಹಕ್ಕುಗಳನ್ನು ಕಸಿದುಕೊಳ್ಳುವ ಎಲ್‌ಎಆರ್‌ಅರ್ ಸುಗ್ರೀವಾಜ್ಞೆಯನ್ನು ವಿರೋಧಿಸುವಂತೆ ಮತ್ತು ತಡೆಯುವಂತೆ ಕರೆನೀಡಿತು.  ಈ ಹೊಸ ಭೂ ಸ್ವಾಧೀನ ಕಾಯಿದೆ ಅಥವಾ ೨೦೧೩ರ ಭೂ ಸ್ವಾಧೀನ ಕಾಯಿದೆಗೆ ತಿದ್ದುಪಡಿ ಮಾಡಿ ಹೊರಡಿಸಲಾಗಿರುವ ಸುಗ್ರೀವಾಜ್ಞೆ ಅಂತಿಮವಾಗಿ ಹೇಳುವುದೇನೆಂದರೆ,ಶೇ೮೦ ರಷ್ಟು ಭೂ ಮಾಲೀಕರ ಒಪ್ಪಿಗೆ ಇಲ್ಲದಿದ್ದರೂಸಹ ಸಕಾ೯ರ ಹೇಳಿರುವ ಯೋಜನೆಗೆ ಭೂಮಿಯನ್ನು ಆಕ್ರಮಿಸಿಕೊಳ್ಳಬಹುದು.  ಮತ್ತು ಈವರೆಗೂ ಸಾವ೯ಜನಿಕ ವಿಚಾರಣೆ ಕಡ್ಡಾಯವಾಗಿದ್ದ ಸಾಮಾಜಿಕ ಪರಿಣಾಮ ಮೌಲ್ಯೀಕರಣದ ಅಗತ್ಯವಿಲ್ಲ.   ರಾಷ್ಟ್ರದ ಖಾಸಗಿ ಬಂಡವಾಳಿಗರು ಅಭಿವೃದ್ಧಿಯ ನೆಪದಲ್ಲಿ ಅಗತ್ಯಕಿಂತ ನೂರಾರು-ಸಾವಿರರು ಎಕರೆ,  ಭೂಮಿಯನ್ನು ದೋಚಿ ಬಂಡವಾಳ ಮಾಡಲು ಇರುವ ದಾರಿ, ಬಡವರ ಹಕ್ಕನ್ನೇ ನಾಶಮಾಡುವುದು,  ಅಧಿಕಾರಿಶಾಹಿಗಳಿಗೆ ರೈತರ ಕೃಷಿ ಭೂಮಿಯನ್ನು ಕಿತ್ತುಕೊಳ್ಳುವ ಪರಮಾಧಿಕಾರ ಮಾತ್ರವಲ್ಲದೆ, ಸೇವೆಯ ಹೆಸರಿನಲ್ಲಿ ಮತೀಯವಾದಿ ಸಂಘ-ಸಂಸ್ಥೆಗಳು ನೂರಾರು ಎಕರೆ ಭೂಮಿಯನ್ನು ಕಬಳಿಸಲು ಮುಕ್ತ ಅವಕಾಶಕ್ಕೆ ಖಾತರಿ ಮಾಡಿಕೊಡುವುದು. ಹಿತಕಿಂತ ಈ ದೇಶದ ಸಾವ೯ಜನಿಕರು,  ಜನ ಸಂಘಟನೆಗಳು,  ರಾಜಕೀಯ ಪಕ್ಷಗಳು, ಸಂಸದರು ಇವರ‍್ಯಾರನ್ನೂ ಕೇಳದೇ, ಈ ಕೇಂದ್ರ ಸಕಾ೯ರ ಇಂಥಹದೊಂದು ಸುಗ್ರೀವಾಜ್ಞೆಯನ್ನು ಹೊರಡಿಸಿದೆ.  ಈ ಮೂಲಕ ಕೋಟಿಗಟ್ಟಲೆ ರೈತರು ಕೃಷಿ ಕಾಮಿ೯ಕರು,  ಮೀನುಗಾರರು,  ಆದಿವಾಸಿಗಳು  ಮತ್ತು ದಲಿತರ ಜೀವ ಮತ್ತು ಜೀವನೋಪಾಯಗಳನ್ನು ನಾಶಮಾಡಿ ಕೇವಲ ಕಾಪೋ೯ರೇಟ್ ಹಾಗೂ ದೇಶ-ವಿದೇಶಿ ಬಂಡವಾಳಿಗರು,  ಭೂ ಮಾಲೀಕರು,  ಎನ್.ಆರ್.ಐ.ಗಳು,  ರಿಯಲ್ ಎಸ್ಟೇಟ್ ನಂತಹ ತಿಮಿಂಗಿಲಗಳ ಕೈಗೆ ಈ ದೇಶದ ನೆಲ, ಜಲ, ಸಂಮುದ್ಧಕಾಡು, ನೈಸಗಿ೯ಕ ಸಂಪನ್ಮೂಲ, ಮತ್ತು ಜೀವವೈವಿಧ್ಯತೆಯನ್ನು ಒಪ್ಪಿಸುವ ಹುನ್ನಾರವನ್ನು ನಾಜೂಕಾಗಿ ಮಾಡಲಾಗಿದೆ.
ದಿನಾಂಕ ೭ ಮಾಚ್೯ ೨೦೧೫ ರಂದು ರಾಜ್ಯದ ಸಂಸತ್ ಸದಸ್ಯರ ಮನೆಯ ಮುಂದೆ ಪ್ರತಿಭಟಿಸಿ ಈ ಕರಾಳ ಭೂಸ್ವಾಧೀನ ಸುಗ್ರೀವಾಜ್ಞೆ ಕಾಯಿದೆಯನ್ನು ರಡ್ಡುಪಡಿಸಬೇಕೆಂದು ಈ ಮೂಲಕ ಒತ್ತಾಯಿಸುತ್ತಿದ್ದೇವೆ.
 ಕೊಪ್ಪಳ ಸಂಸದ ಸಂಗಣ್ಣ ಕರಡಿ ಅವರಿಗೆ ಮನವಿ ಪತ್ರ ಸಲ್ಲಿಸಿದ ನಿಯೋಗದಲ್ಲಿ ಆದಿವಾಸಿ, ದಲಿತ ಭೂಮಿ ಹಕ್ಕು ಆಂದೋಲನಾ ಕನಾ೯ಟಕ ಸಂಘಟನೆಯ ಜಿಲ್ಲಾ ಸಂಚಾಲಕ ಹನುಮಂತಪ್ಪ.ಕೆ.ಮ್ಯಾಗಳಮನಿ, ಜಿಲ್ಲಾ ಸಂಘಟನಾ ಸಂಚಾಲಕ ಮೈಲಪ್ಪ ಎಂ.ಬಿಸರಳ್ಳಿ, ಭಾರತ ಕಮ್ಯೂನಿಸ್ಟ್ ಪಕ್ಷದ ಜಿಲ್ಲಾ ಕಾಯ೯ದಶಿ೯ ಎಸ್.ಎ.ಗಫಾರ್, ಮಾದಿಗ ದಂಡೋರ ಸಂಘದ ಜಿಲ್ಲಾಅಧ್ಯಕ್ಷ ಪ್ರಭು ಬೋಚನಹಳ್ಳಿ, ಮಾದಿಗ ಹಿತರಕ್ಷಣಾ ವೇದಿಕೆ ಜಿಲ್ಲಾ ಅಧ್ಯಕ್ಷ ಮರಿಯಪ್ಪ.ಎನ್.ದದೇಗಲ್, ಜಿಲ್ಲಾಉಪಾಧ್ಯಕ್ಷ ಹುಲಗಪ್ಪ ನಿಂಗಾಪೂರ, ದಲಿತ ಸಂಘಷ೯ ಸಮಿತಿ (ಎನ್.ಮೂತಿ೯ಬಣ), ಜಿಲ್ಲಾ ಸಂಚಾಲಕ ಲಕ್ಷಣ ಮಾದಿನೂರು, ಮಲ್ಲಿಕಾಜು೯ನ ಪೂಜಾರ, ಧನರಾಜ ದೊಡ್ಡಮನಿ, ಮೂಕಪ್ಪ ಬಸಾಪುರ, ನಾಗರಾಜ ನಿಟ್ಟಾಲಿ, ಮಲ್ಲಿಕಾಜು೯ನ ಬಂಗ್ಲಿ, ಮುಂತಾದವರು. ಭಾಗವಹಿಸಿದರು.
Please follow and like us:
error

Leave a Reply

error: Content is protected !!