ಜಿನುಗು ಕೆರೆ ನಿರ್ಮಾಣ ಕಾಮಗಾರಿಗೆ ಶಾಸಕರಿಂದ ಭೂಮಿ ಪೂಜೆ

ಕೊಪ್ಪಳ:  ಕ್ಷೇತ್ರದ ಎಲ್ಲಾ ಕೆರೆಗಳನ್ನು ಪುನಚ್ಛೇತಗೊಳಿಸಿ ಒಣಬೆಸಾಯದ ಭೂಮಿಯನ್ನು ನೀರಾವರಿಯನ್ನಾಗಿ ಮಾರ್ಪಾಡ ಮಾಡಲಾಗುವುದು. ಈಗಾಗಲೇ ಗಿಣಗೇರಾ ಕೆರೆಯ ಅಭಿವೃದ್ಧಿಗೆ ರೂ. ೧ ಕೋಟಿ ಅನುದಾನದ ಅಡಿಯಲ್ಲಿ ಪುನಚ್ಛೇತನ ಗೊಳಿಸಲಾಗುತ್ತಿದೆ. ಬರುವ ದಿನಗಳಲ್ಲಿ ಬ.ಹೊಸಳ್ಳಿ, ಬೇಟಗೇರಾ, ಕವಲೂರು ಗ್ರಾಮಗಳ ಕೆರೆಗಳ ಅಭಿವೃದ್ಧಿ ಪಡಿಸಲಾಗುವುದು  ಎಂದ ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು. ಅವರು  ಕ್ಷೇತ್ರದ ಹಂದ್ರಾಳ ಗ್ರಾಮದಲ್ಲಿ ೧೦೮ ಎಕೆರೆಗಳ ನೀರಾವರಿಗೆ ಒಳಪಡುವ ಅಂದಾಜು ಮೊತ್ತ ರೂ.೫೦ ಲಕ್ಷದ ಸಣ್ಣ ನೀರಾವರಿ ಇಲಾಖೆಯ ಅನುದಾನದಡಿಯ ಕೆರೆ ಕಾಮಗಾರಿಗೆ ಚಾಲನೆ ನೀಡಿ  ಮಾತನಾಡಿದರು. ಇದೇ ಸಂದರ್ಭದಲ್ಲಿ ಹಿರೇಸಿಂದೋಗಿ-ಮೈನಳ್ಳಿ ೨೦೧೩-೧೪ನೇ ಸಾಲಿನ ನಬಾರ್ಡ ಯೋಜನೆಯ ರೂ.೧ ಕೋಟಿ ರಸ್ತೆ ಕಾಮಗಾರಿಗೂ ಭೂಮಿ ಪೂಜೆನೆರವೇರಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷರಾದ ಕೇಶವ ರೆಡ್ಡಿ, ಮಾಜಿ ಜಿ.ಪಂ. ಅಧ್ಯಕ್ಷರಾದ ಹೆಚ್.ಎಲ್.ಹಿರೇಗೌಡ್ರು, ಎ.ಪಿ.ಎಮ್.ಸಿ. ಸದಸ್ಯರಾದ ಹನುಮರೆಡ್ಡಿ ಹಂಗನಕಟ್ಟಿ, ಶಿವಲಿಂಗಪ್ಪ ಹಿಟ್ನಾಳ, ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷರಾದ ಶಿವಣ್ಣ ಹಂದ್ರಾಳ, ಪಕ್ಷದ ಮುಖಂಡರಾದ ಈಶಪ್ಪ ಮಾದಿನೂರು, ಯಂಕಣ್ಣ ಕೊಳ್ಳಿ, ತಾ.ಪಂ.ಸದಸ್ಯ ಹನುಮಂತಪ್ಪ ಗಡ್ಡಿ, ಚನ್ನಾಳ ರಾಮಣ್ಣ, ಕೆರೆ ಕಾಮಗಾರಿಯ ಗುತ್ತಿಗೆದಾರರಾದ ಅಶೋಕ ಬೊಳ್ಳೂಳ್ಳಿ, ರಸ್ತೆ ಕಾಮಗಾರಿಯ ಗುತ್ತಿಗೆದಾರರಾದ ಸಿ.ವಿ. ಹಳ್ಳಿ,  ಸಣ್ಣ ನೀರಾವರಿ  ಉಪವಿಭಾಗದ ಅಧಿಕಾರಿಗಳು ಉಪಸ್ಥಿಸರಿದ್ದರು.

Leave a Reply