ಗ್ರಾ.ಪಂ. ಚುನಾವಣೆ : ೨೯೦ ನಾಮಪತ್ರ ಸಲ್ಲಿಕೆ

 ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣೆ ಅಧಿಸೂಚನೆ ಹೊರಡಿಸಲಾದ ಎರಡನೆ ದಿನದಂದು ಅಂದರೆ ಮೇ. ೧೬ ಶನಿವಾರ ಜಿಲ್ಲೆಯಲ್ಲಿ  ಒಟ್ಟು ೨೯೦ ನಾಮಪತ್ರಗಳು ಸಲ್ಲಿಕೆಯಾಗಿವೆ. 
       ಕೊಪ್ಪಳ ತಾಲೂಕಿನಲ್ಲಿ ೧೨೨ ಜನ ನಾಮಪತ್ರ ಸಲ್ಲಿಸಿದ್ದಾರೆ.  ಗಂಗಾವತಿ ತಾಲೂಕಿನಲ್ಲಿ  ೪೪ ನಾಮಪತ್ರಗಳು.  ಕುಷ್ಟಗಿ ತಾಲೂಕಿನಲ್ಲಿ ೪೦ ಹಾಗೂ ಯಲಬುರ್ಗಾ ತಾಲೂಕಿನಲ್ಲಿ ೮೪ ಜನ ನಾಮಪತ್ರ ಸಲ್ಲಿಸಿದ್ದಾರೆ.  ಜಿಲ್ಲೆಯಲ್ಲಿ ಸಲ್ಲಿಸಲಾಗಿರುವ ನಾಮಪತ್ರಗಳ ಪೈಕಿ ಪ.ಜಾತಿ-೬೩, ಪ.ಪಂಗಡ-೩೦, ಹಿಂದುಳಿದ ಅ ವರ್ಗ-೨೨, ಹಿಂದುಳಿದ ಬ ವರ್ಗ-೧೧ ಹಾಗೂ ಸಾಮಾನ್ಯ ವರ್ಗದ-೧೬೪ ನಾಮಪತ್ರಗಳು ಸಲ್ಲಿಕೆಯಾಗಿವೆ.
Please follow and like us:
error