ಬಿಜೆಪಿಯಿಂದ ಪಂಜಿನ ಮೆರವಣಿಗೆ

ಜನಲೋಕಪಾಲ ಮಸೂದೆಯನ್ನು ಜಾರಿ ಮಾಡುವಂತೆ ಒತ್ತಾಯಿಸಿ ಅಣ್ಣಾ ಹಜಾರೆ ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸಿ ಜಿಲ್ಲೆಯಾದ್ಯಂಥ ಬಿಜೆಪಿ 19,20,22ರಂದು ಪ್ರತಿಭಟನೆ ಹಮ್ಮಿಕೊಂಡಿದೆ. ಎಪ್ರಿಲ್ 19ರಂದು ಪಂಜಿನ ಮೆರವಣಿಗೆ ಮಾಡಲಾಗುವುದು ಎಂದು ಬಿಜೆಪಿಯ ಜಿಲ್ಲಾಧ್ಯಕ್ಷ ಎಚ್.ಗಿರೇಗೌಡ ತಿಳಿಸಿದ್ದಾರೆ
ಜಿಲ್ಲೆಯಾದ್ಯಂತ ವ್ಯಾಪಕ ಬೆಂಬಲ : ಅಣ್ಣಾ ಹಜಾರೆ ಹೋರಾಟಕ್ಕೆ ಜಿಲ್ಲೆಯಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಕೊಪ್ಪಳದಲ್ಲಿ ಜಯಕರ್ನಾಟಕ ಸಂಘಟನೆಯವರು ಅಣ್ಣಾ ಹಜಾರೆ ಮುಖವಾಡಗಳನ್ನು ಧರಿಸಿ ಪ್ರತಿಭಟನೆ ನಡೆಸಿದರು. ಕರವೇ ಮತ್ತು ಅಂಗವಿಕಲರ ಸಂಘಟನೆಗಳವರು ಪ್ರತಿಭಟನೆ ನಡೆಸಿದರು.
ಕುಷ್ಟಗಿಯಲ್ಲಿ ನ್ಯಾಯವಾದಿಗಳ ಸಂಘದವರು ಕಲಾಪ ಬಹಿಷ್ಕಾರ ಮಾಡಿ ಬೈಕ್ ರ್ಯಾಲಿ ನಡೆಸಿದರು.

Leave a Reply