fbpx

ಕಾಯಕದಲ್ಲೇ ದೇವರನ್ನು ಕಾಣಬಹುದು: ಗವಿಶ್ರೀ

ಕೊಪ್ಪಳ, ಜ.೨೧: ಪ್ರತಿ ಕಾಯಕದ ಮೊದಲು ದೇವರನ್ನು ನೆನೆಯಿರಿ ಅದೇ ರೀತಿ ನೀವು ಕಾಯಕದಲ್ಲೂ ದೇವರನ್ನು ಕಾಣುವೀರಿ ಎಂದು ಗವಿಮಠದ ಶ್ರೀಗವಿಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು. 
ಅವರಿಂದು ಸಮೀಪದ ಭಾಗ್ಯನಗರದ ಶಾಸ್ತ್ರೀ ಕಾಲೋನಿಯ ಶ್ರೀ ಏಳು ಕೋಟಿ ಮೈಲಾರಲಿಂಗೇಶ್ವರ ದೇವಸ್ಥಾನ ಸೇವಾ ಸಮಿತಿ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ನೂತನ ದೇವಸ್ಥಾನ ಕಟ್ಟಡದ ಅಡಿಗಲ್ಲು ಸಮಾರಂಭದ ಉದ್ಘಾಟನೆ ನೇರವೇರಿಸಿ ಮಾತನಾಡಿದರು. ದೇವರು ಎಲ್ಲೇಡೆ ಇದ್ದಾನೆ ಅವನನ್ನು ನಾವು ಬಾಹ್ಯಕ್ಕಿಂತ ಅಂತರಂಗದಿಂದ ಕಾಣಲೂ ಸಾಧ್ಯವೆಂದರು. ಯಾವುದೇ ಕಾರ್ಯ ಮಾಡುವಾಗ ದೇವರನ್ನು ನೆನೆದರೇ ಸದಾ ನಿಮ್ಮೊಂದಿಗೆ ಇದ್ದು ನಿಮ್ಮ ಶ್ರೇಯಸ್ಸಿಗೆ ಕಾರಣಿಕರ್ತನಾಗುತ್ತಾನೆ ಎಂದು ಹೇಳಿದರು. ಮೈಲಾರದ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ದೇವಸ್ಥಾನದ ಧರ್ಮಕರ್ತರಾದ ಶ್ರೀ ಗುರುವೆಂಕಪಯ್ಯ ಓಡೆಯರ್ ನೂತನ ಅಡಿಗಲ್ಲು ಸಮಾರಂಭದ ಪೂಜೆ ನೆರವೇರಿಸಿ ಮಾತನಾಡಿ, ಗೋರಪ್ಪ ರೂಪದಲ್ಲಿ ಮೈಲಾರಲಿಂಗೇಶ್ವರ ಅವತಾರ ರೂಪದಲ್ಲಿ ತೆಳೆದಿದು ಇಂದು ಭಕ್ತರ ಅಂತರಾಳದಲ್ಲಿ ನೆಲೆಯೂರಿದ್ದಾನೆ. ಆದಿ ದೈವಪುರಷನಾದ ಈತ ಯಾವುದೇ ಒಂದು ಜಾತಿ ಕೋಮಿಗೆ ಸಿಮಿತವಾಗಿಲ್ಲ. ಎಲ್ಲರ ಇಷ್ಟ ದೇವರಾಗಿದ್ದಾನೆಂದು ನುಡಿದರು. 
ಕಾರ್ಯಕ್ರಮದಲ್ಲಿ ಶಾಸಕರಾದ ರಾಘವೇಂದ್ರ ಹಿಟ್ನಾಳ, ತಾ.ಪಂ.ಸದಸ್ಯ ದಾನಪ್ಪ ಕವಲೂರ, ಗ್ರಾ.ಪಂ. ಅಧ್ಯಕ್ಷ ಹೊನ್ನುರಸಾಬ ಬೈರಾಪುರ, ಜಿ.ಪಂ. ಮಾಜಿ ಸದಸ್ಯ ಪ್ರಸನ್ನ ಗಡಾದ, ಸಮಿತಿ ಅಧ್ಯಕ್ಷ ಶಂಕ್ರಪ್ಪ ಕುರಟ್ಟಿ, ಖಜಾಂಚಿ ಶಿವನಗೌಡ ಶಾಂತಗಿರಿ, ಸಮಿತಿ ಸದಸ್ಯರಾದ ಮರಿಯಪ್ಪ, ನಿಂಗಪ್ಪ ಕುರಟ್ಟಿ, ಶಂಕ್ರಪ್ಪ ಅಳವಂಡಿ, ಸರ್ವ ಸದಸ್ಯರು ಉಪಸ್ಥಿತರಿದ್ದು ಗ್ರಾಮ ನೂರಾರು ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.  
Please follow and like us:
error

Leave a Reply

error: Content is protected !!