ಹೊಸಪೇಟೆ ಥಿಯೋಸಾಫಿಕಲ್ ಮಹಿಳಾ ಕಾಲೇಜ : ಮಾದರಿ ಸಂಸತ್ತು ಉದ್ಘಾಟನೆ

ಹೊಸಪೇಟೆ:ಯುವಕರು ರಾಜಕೀಯದಿಂದ ದೂರವಿರದೇ ತಮ್ಮನು ತಾವು ತೊಡಗಿಸಿಕೊಂಡು ಅದರಲ್ಲಿರುವ ನ್ಯೂನ್ಯತೆಗಳನ್ನು ತಿದ್ದಿ ಸಕ್ರಿಯರಾಗಿ ಸಮಾಜ ಸೇವೆ ನಡೆಸಬೇಕೆಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಲ್.ಸಿದ್ದನಗೌಡ ಹೇಳಿದರು.
                   

ನಗರದ ಥಿಯೋಸಾಫಿಕಲ್ ಕಾಲೇಜಿನಲ್ಲಿ ಗುರುವಾರ ಥಿಯೋಸಾಫಿಕಲ್ ಕಾಲೇಜ್ ಆಫ್ ಮ್ಯಾನೇಜಮೆಂಟ್ ಏರ್ಪಡಿಸಿದ್ದ ಮಾದರಿ ಸಂಸತ್ತು ಸತ್ರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜಕೀಯ ಹೊಲಸು ಅನ್ನುತ್ತಾ ದೂರ ಇರಬಾರದು. ಅದನ್ನು ಒಳ ಬಂದು ಶುದ್ಧಿ ಮಾಡಬೇಕೆಂದರು. ವಿಜಯನಗರ ಶ್ರೀಕೃಷ್ಣ ದೇವರಾಯ ವಿವಿ. ಸಿಂಡಿಕೇಟ್ ಸದಸ್ಯ ರಾಘವೇಂದ್ರ ಗುಂಡಿ, ವಿರೂಪಾಕ್ಷ ಗವಿಯಪ್ಪ, ಸಂಸ್ಥೆಯ ಉಪಾಧ್ಯಕ್ಷ ಭರಮಲಿಂಗನಗೌಡ, ಹಿರಿಯ ಸದಸ್ಯ ಭೂಪಾಳ್ ರಾಘವೇಂದ್ರಶೆಟ್ಟಿ, ಕಾಲೇಜಿನ ಸಂಚಾಲಕ ಸದಾಶಿವ ರೆಡ್ಡಿ, ಪ್ರಾಚಾರ್ಯ ರಘುತ್ತೊಮ್ಮ ಅರ್ಣಿ, ಸಂಚಾಲಕಿ ಭಾಗ್ಯಲಕ್ಷ್ಮಿ ಭರಾಡೆ ಹಾಜರಿದ್ದರು. ನಂತರ ವಿದ್ಯಾರ್ಥಿಗಳು ಮಾದರಿ ಸಂಸತ್ತು ಅಧಿವೇಶನವನ್ನು ನಡೆಸಿಕೊಟ್ಟರು. ಕುಮಾರಿ ಕನ್ನಿಕ ಎಸ್ , ಸಭಾಪತಿಯಾಗಿ ಸಭೆ ನಡೆಸಿಕೊಟ್ಟರು. ಚಂದ್ರಕಾಂತ್ ಕಪ್ಲಿ ಪ್ರದಾನ ಮಂತ್ರಿಯಾಗಿ ಮತ್ತು ಶೇಕ್ ತಾಜುದ್ದೀನ್ ವಿರೋಧಪಕ್ಷದ ನಾಯಕನಾಗಿ ಸಂಸತ್‌ನಲ್ಲಿ  ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಿದರು.

Leave a Reply