ಮಹಾಯೋಗಿ ವೇಮನನ ವಚನಗಳು ಇಂದಿಗೂ ಪ್ರಸ್ತುತ- ಜಿ. ಎಸ್.ಗೋನಾಳ.

ರಡ್ಡಿ ಸಮಾಜದ ದೈವೀಪುರುಷನಾದ ಶ್ರೀ ಮಹಾಯೋಗಿ ವೇಮನನ ೬೦೩ನೇ ಜಯಂತಿ ಆಚರಣೆಯನ್ನು ಶ್ರೀ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಸಹಕಾರಿ ನಿ. ಕೊಪ್ಪಳದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.  ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಸಹಕಾರಿಯ ಅಧ್ಯಕ್ಷರಾದ ಶ್ರೀ ಜಿ. ಎಸ್. ಗೋನಾಳರವರು ವೇಮನನ ಕುರಿತು ಮಾತನಾಡುತ್ತಾ  ರಡ್ಡಿ ಸಮಾಜದ ಆರಾದ್ಯ ದೈವ ಭಕ್ತಿ ಧಾರ್ಮಿಕ ಶಕ್ತಿಯಿಂದ ಶಿವನ ಸಾಕ್ಷಾತ್ಕಾರ ಪಡೆದ ಹೇಮರಡ್ಡಿ ಮಲ್ಲಮ್ಮಳ ಮಾರ್ಗದರ್ಶನದಿಂದ ದೈವತ್ವವನ್ನು ಪಡೆದು ಮುಕ್ತಿ ಮಾರ್ಗದಲ್ಲಿ ದಾರ್ಶನಿಕನಾದ ವೇಮನ ಸಾವಿರಾರು ವಚನಗಳನ್ನು ಬರೆಯುವದರ ಮೂಲಕ ಸಮಾಜದ ಅಂಕು-ಡೊಂಕುಗಳನ್ನು ತಿದ್ದಿ ತೀಡುವಲ್ಲಿ ವೇಮನರ ವಚನಗಳು ಇಂದಿಗೂ ಪ್ರಸ್ತುತವಾಗಿವೆ.
    ವೇಮನರ ತತ್ವ ಸಿದ್ದಾಂತ ಹಾಗೂ ಅವರ ಸಾಹಿತ್ಯವನ್ನು ಇಂದಿನ ಯುವ ಪೀಳಿಗೆಗಳು ಅಧ್ಯಯನ ಮಾಡುವದರ ಮೂಲಕ ಇನ್ನೂ ಹೆಚ್ಚೆಚ್ಚು ಪ್ರಗತಿ ಹೊಂದುವಲ್ಲಿ ವೇಮನರ ಆದರ್ಶಗಳನ್ನೂ ಪಾಲನೆ ಮಾಡಬೇಕೆಂದು ಕರೆ ನೀಡಿದರು.
ಹಿರಿಯ ನಿರ್ದೇಶಕರಾದ ಎಸ್.ಡಿ. ಡಂಬಳ ಇವರು ಮಾತನಾಡಿ ಭೋಗದಿಂದ ಯೋಗಸಾಧನೆಗೆ ಬಂದ ವ್ಯಕ್ತಿ ವೇಮನರು ಮನುಷ್ಯತ್ವದಿಂದ ದೈವತ್ವವನ್ನು ಪಡೆದ ಮಹಾನ್ ಸಾಧಕ.  ಆಂದ್ರ, ತಮಿಳುನಾಡು, ಕೇರಳ, ಕರ್ನಾಟಕಗಳಲ್ಲಿ ವೇಮನರ ವಚನ ಸಾಹಿತ್ಯ ಸಾಮಾಜಿಕ ಮೌಢ್ಯತೆಗಳನ್ನು ತೊಢೆದು ಹಾಕಲು ಸಾಧ್ಯವಾಗಿವೆ, ಇಂಥ ಚಿಂತಕ ಮಹಾನ ಯೋಗಿ ವೇಮನನ ೬೦೩ನೇ ಜಯಂತಿ ಸಂಭ್ರಮದ ಆಚರಣೆ ಮೂಲಕ ಅವರ ವಿಚಾರಧಾರೆ ಭಕ್ತಿ, ಮುಕ್ತಿ ಮಾರ್ಗದ ಕಡೆ ನಾವು ಚಿಂತನೆ ಮಾಡುವುದು ಅತ್ಯಗತ್ಯವಿದೆ ಎಂದು ಅಭಿಮತ ವ್ಯಕ್ತಪಡಿಸಿದರು.
    ಈ ಸಂದರ್ಭದಲ್ಲಿ ಸಹಕಾರಿ ನಿರ್ದೇಶಕರಾದ ಬಿ. ಶರಣಪ್ಪ, ಚಂದ್ರಕಾಂತ ಸಿಂಗಟಾಲೂರ, ದೇವಪ್ಪ ಅರಕೇರಿ, ವಿ.ಜಿ.ಯತ್ನಳ್ಳಿ, ಪತ್ರಕರ್ತರಾದ ಬಸವರಾಜ ಬಿನ್ನಾಳ, ಸಿದ್ದನಗೌಡ ಪಿ. ಸಹಕಾರಿಯ ಸಿಬ್ಬಂದಿಗಳಾದ ಯಂಕರಡ್ಡಿ ದೇವರಡ್ಡಿ,  ವೆಂಕರಡ್ಡಿ ಕೆಂಚರಡಿ,
ವೀರಶ ಅಳವಂಡಿ, ಕಾರ್ಯಕ್ರಮದ ನಿರೂಪಣೆಯನ್ನು ಸಹಕಾರಿಯ ಕಾರ್ಯದರ್ಶಿಗಳಾದ ಬಸವರಾಜ ರಾಮದುರ್ಗ ಇವರು ನಡೆಸಿಕೊಟ್ಟರು,

Please follow and like us:
error