ದಿ.೨೬ರಂದು ಕೊಪ್ಪಳ ಜಿಲ್ಲಾ ಉತ್ಸವದ ಪೂರ್ವಭಾವಿ ಸಭೆ

ಕೊಪ್ಪಳ,ಮೇ.೨೪:  ಬರುವ ಆಗಸ್ಟ್ ೨೪,೨೫ ಹಾಗೂ ೨೬ ರಂದು ಮೂರು ದಿನಗಳ ಕಾಲ ೬ನೇ ಬಾರಿಗೆ ನಡೆಯುವ ಕೊಪ್ಪಳ ಜಿಲ್ಲಾ ಉತ್ಸವದ ಪೂರ್ವಭಾವಿ ಸಭೆಯನ್ನು ಮೇ.೨೬ ರಂದು ಬೆಳಿಗ್ಗೆ ೧೦.೦೦ ಗಂಟೆಗೆ ಜಿಲ್ಲಾ ನಾಗರೀಕರ ವೇದಿಕೆಯ ಕಾರ್ಯಾಲಯದಲ್ಲಿ ಏರ್ಪಡಿಸಲಾಗಿದೆ.
ಸಭೆಯ ಅಧ್ಯಕ್ಷತೆಯನ್ನು ನಾಗರೀಕರ ವೇದಿಕೆಯ ಅಧ್ಯಕ್ಷರಾದ ಮಹೇಶಬಾಬು ಸುರ್ವೆಯವರು ವಹಿಸಲಿದ್ದು, ಈ ಬಾರಿ ನಡೆಯುವ ಉತ್ಸವದ ಸಿದ್ದತೆಗಾಗಿ ಈ ಸಭೆಯಲ್ಲಿ ಸಾರ್ವಜನಿಕರಿಂದ ಸಲಹೆ, ಸೂಚನೆಗಳನ್ನು ಸ್ವೀಕರಿಸಲಾಗುವುದು. ಈ ಹಿನ್ನಲೆಯಲ್ಲಿ ಜಿಲ್ಲೆಯ ಸಾಹಿತಿಗಳು, ಕಲಾವಿದರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಲು ಕೋರಲಾಗಿದೆ ಎಂದು ಜಿಲ್ಲಾ ನಾಗರೀಕರ ವೇದಿಕೆಯ ಅಧ್ಯಕ್ಷರಾದ ಎಂ.ಸಾಧಿಕ ಅಲಿಯವರು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
Please follow and like us:
error