ಕೊಪ್ಪಳ : ಮಂಗಳೂರಿನ ಹೋಂ ಸ್ಟೇ ನಲ್ಲಿ ನಡೆದ ಹಲ್ಲೆಯನ್ನು ಚಿತ್ರಿಕರಿಸಿದ ಮಂಗಳೂರಿನ ಕಸ್ತೂರಿ ನ್ಯೂಸ್ ಚಾನೆಲ್ನ ವರದಿಗಾರ ನವೀನ್ ಸೂರಿಂಜೆಯವರನ್ನು ಬಂಧಿಸಿರುವ ಪೊಲೀಸರ ಕ್ರಮ ಖಂಡಿಸಿ ಕೊಪ್ಪಳದಲ್ಲಿ ಮೀಡಿಯಾ ಕ್ಲಬ್ ಸದಸ್ಯರು ಪ್ರತಿಭಟನೆ ನಡೆಸಿ ತಹಶಿಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಮಾಧ್ಯಮದವರು ಸುದ್ದಿ ಕೊಡುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬಹುದೇ ಹೊರತು ಮಾಹಿತಿ, ದಾಖಲೆ ಒದಗಿಸುವ ಕೆಲಸದಲ್ಲಿ ನಿರತನಾದರೆ ಅವನ ಕರ್ತವ್ಯಕ್ಕೆ ಚ್ಯುತಿಯಾಗುತ್ತದೆ. ದುರುದ್ದೇಶದ ಹಿನ್ನೆಲೆಯಲ್ಲಿ ಬಂಧಿಸಿರುವ ವರದಿಗಾರ ನವೀನ್ ಅವರನ್ನು ಕೂಡಲೇ ಬಿಡುಗಡೆಗೊಳಿಸಿ ಮಾಧ್ಯಮದ ಸ್ವಾತಂತ್ರ್ಯವನ್ನು ಸರಕಾರ ಕಾಪಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕೊಪ್ಪಳ ಮೀಡಿಯಾ ಕ್ಲಬ್ನ ಅಧ್ಯಕ್ಷ ಸೋಮರಡ್ಡಿ ಅಳವಂಡಿ, ಪ್ರಧಾನ ಕಾರ್ಯದರ್ಶಿ ಭೀಮಸೇನ ಚಳಗೇರಿ, ಬಸವರಾಜ ಕರುಗಲ್, ದೊಡ್ಡೇಶ ಯಲಿಗಾರ, ಶರಣಪ್ಪ ಬಾಚಲಾಪೂರ, ತಿಪ್ಪನಗೌಡ ಪಾಟೀಲ್, ದೇವು ನಾಗನೂರ, ಮಲ್ಲಿಕಾರ್ಜುನ ಸ್ವಾಮಿ, ಮುಕ್ಕಣ್ಣ ಕತ್ತಿ, ಗಂಗಾಧರ ಬಂಡಿಹಾಳ, ಮೌನೇಶ್ ಬಡಿಗೇರ, ವಸೀಮ್ ಭಾವಿಮನಿ, ನಾಭಿರಾಜ ದಸ್ತೇನವರ್, ಸಿರಾಜ್ ಬಿಸರಳ್ಳಿ, ನಾಗರಾಜ ಹಿರೇಮಠ, ಮಾರುತಿ.ಕೆ, ಶಂಕರ ಕೊಪ್ಪದ, ಗುರುರಾಜ.ಬಿ.ಆರ್., ಹುಸೇನ್ ಪಾಷಾ, ಈರಣ್ಣ ಬಡಿಗೇರ, ವಿಠ್ಠಪ್ಪ ಗೋರಂಟ್ಲಿ, ಶ್ರೀಪಾದ್ ಅಯಾಚಿತ್ ಮತ್ತಿತರರು ಇದ್ದರು.
Please follow and like us: