ವಿಠ್ಠಪ್ಪ ಗೋರಂಟ್ಲಿಯವರಿಗೆ ಚಾಲುಕ್ಯಪ್ರಶಸ್ತಿ ಪ್ರದಾನ

ಕೊಪ್ಪಳ :  ಬೆಂಗಳೂರಿನಲ್ಲಿ ದಿ. ೧೧ರಂದು ನಡೆದ ಉತ್ತರ ಕರ್ನಾಟಕ ಉತ್ಸವ ೨೦೧೩ರ ಕಾರ್‍ಯಕ್ರಮದಲ್ಲಿ ಕೊಪ್ಪಳ ಜಿಲ್ಲೆಯ ಹಿರಿಯ ಸಾಹಿತಿ, ಹೋರಾಟಗಾರ ವಿಠ್ಠಪ್ಪ ಗೋರಂಟ್ಲಿಯವರಿಗೆ ಚಾಲುಕ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಒಟ್ಟು ಹದಿಮೂರು ಜನ ಸಾಧಕರಿಗೆ ಈ ಪ್ರಶಸ್ತಿಯನ್ನು ನೀಡಲಾಯಿತು. ಗ್ರಾಮೀಣಾಭಿವೃದ್ದಿ ಸಚಿವ ಎಚ್.ಕೆ.ಪಾಟೀಲ್ ಪ್ರಶಸ್ತಿ ಪ್ರದಾನ ಮಾಡಿದರು. 
ಸಮಾರಂಭದಲ್ಲಿ ವೀರಣ್ಣ ಮತ್ತಿಕಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉತ್ತರ ಕರ್ನಾಟಕ ಅಭಿವೃದ್ದಿ ಸಂಘದ ಅಧ್ಯಕ್ಷ ಡಾ.ಚಂದ್ರಶೇಖರ ಸಾಂಭ್ರಾಣಿ ಸೇರಿದಂತೆ ಇತರರು ಉಪಸ್ಥಿತರಿದ್ದರು. 

Please follow and like us:
error

Related posts

Leave a Comment