ತುಂಗಭದ್ರಾ ನದಿ ಮಾಲಿನ್ಯ : ಸಂಸತ್ತಿನಲ್ಲಿ ಸಂಸದ ಶಿವರಾಮಗೌಡ ಪ್ರಸ್ತಾಪ

 : ತುಂಗಭದ್ರಾ ನದಿ ನೀರು ಮಾಲಿನ್ಯವನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಹಮ್ಮಿಕೊಂಡಿರುವ ಯೋಜನೆಗಳ ಬಗ್ಗೆ ವಿವರ ನೀಡುವಂತೆ ಸಂಸದ ಶಿವರಾಮಗೌಡ ಅವರು ಸಂಸತ್ತಿನಲ್ಲಿ ಪ್ರಶ್ನಿಸುವ ಮೂಲಕ ಕೇಂದ್ರ ಸರ್ಕಾರದ ಗಮನ ಸೆಳೆದಿದ್ದಾರೆ.
  ತುಂಗಭದ್ರಾ ನದಿ ನೀರು ಕಲುಷಿತಗೊಳ್ಳುತ್ತಿದ್ದು, ಮಾಲಿನ್ಯ ತಡೆಗಟ್ಟಲು ಕೇಂದ್ರ ಸರ್ಕಾರ ಏನು ಕ್ರಮಗಳನ್ನು ಕೈಗೊಂಡಿದೆ ಎಂದು ಸಂಸದ ಶಿವರಾಮಗೌಡ ಅವರು ಸಂಸತ್ತಿನಲ್ಲಿ ವಿಷಯ ಪ್ರಸ್ತಾಪಿಸಿದ್ದಾರೆ.  ಸಂಸದರ ಈ ಪ್ರಶ್ನೆಗೆ ಉತ್ತರ ನೀಡಿರುವ ಕೇಂದ್ರ ಪರಿಸರ ಮತ್ತು ಅರಣ್ಯ ಖಾತೆ ರಾಜ್ಯ ಸಚಿವೆ ಜಯಂತಿ ನಟರಾಜನ್ ಅವರು, ಮಾಲಿನ್ಯದ ಮಟ್ಟ ದೇಶಾದ್ಯಂತ ನದಿಗಳಲ್ಲಿ ಹೆಚ್ಚಾಗುತ್ತಿದೆ.  ತ್ವರಿತಗತಿಯಲ್ಲಿ ಆಗುತ್ತಿರುವ ನಗದೀಕರಣ ಮತ್ತು ಕೈಗಾರೀಕರಣ ಇದಕ್ಕೆ ಪ್ರಮುಖ ಕಾರಣವಾಗಿದೆ.  ನದಿ ನೀರನ್ನು ನೀರಾವರಿ, ಕುಡಿಯುವ ನೀರು, ವಿದ್ಯುತ್ ತಯಾರಿಕೆ, ಕೈಗಾರಿಕೆ ಸಲುವಾಗಿ ಬಳಸುವುದರಿಂದ ಮಾಲಿನ್ಯ ಮಟ್ಟ ಹೆಚ್ಚಾಗುತ್ತಿದೆ.  ಸಂಸ್ಕರಿಸದ ನೀರನ್ನು ನಗರ ಮತ್ತು ಪಟ್ಟಣಗಳಲ್ಲಿ ನದಿಗೆ ಬಿಡುವುದರಿಂದ ಮಾಲಿನ್ಯ ಮಟ್ಟ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ.  ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಮಾಲಿನ್ಯ ನಿಯಂತ್ರಣ ಸಂಘಗಳೊಂದಿಗೆ ೧೦೮೫ ನೀರಿನ ಗುಣಮಟ್ಟ ಪರೀಕ್ಷಿಸುವ ಕೇಂದ್ರಗಳನ್ನು ದೇಶದ ಸುಮಾರು ೧೨೧ ನದಿಗಳ ಉದ್ದಕ್ಕೂ ಸ್ಥಾಪಿಸಲಾಗಿದೆ.  ತುಂಗಭದ್ರಾ ನದಿಯೂ ಸೇರಿದಂತೆ ದೇಶದ ಅನೇಕ ನದಿಗಳ ಸ್ಟ್ರೆಚ್‌ಗಳಲ್ಲಿ ಬಯೋಕೆಮಿಕಲ್ ಆಕ್ಸಿಜನ್ ಡಿಮ್ಯಾಂಡ್ (ಬಿಡಿಓ) ಹೆಚ್ಚಾಗಿದೆ.  ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ, ರಾಜ್ಯ ಸಕಾರಗಳ ಸಹಯೋಗದೊಂದಿಗೆ ಕೇಂದ್ರ ಪ್ರಾಯೋಜಿತ ರಾಷ್ಟ್ರೀಯ ನದಿ ಸಂರಕ್ಷಣೆ ಯೋಜನೆಯನ್ನು ನದಿಗಳ ಮಾಲಿನ್ಯ ತಡೆಗಟ್ಟಲು ಜಾರಿಗೆ ತಂದಿದೆ.  ತುಂಗಭದ್ರಾ ನದಿಯೂ ಸೇರಿದಂತೆ ದೇಶದ ಅನೇಕ ನದಿಗಳ ಮಾಲಿನ್ಯ ಹೆಚ್ಚಾಗುತ್ತಿದೆ.  ಬ್ಯಾಕ್ಟೀರಿಯಾದಿಂದ ಕೂಡ ನದಿ ನೀರು ಸಾಧ್ಯವಿರುವ ಗರಿಷ್ಟ ಮಿತಿಯನ್ನು ದಾಟಿ ನೀರು ಮಾಲಿನ್ಯಗೊಳ್ಳುತ್ತಿದೆ.  ಕೊಳಚೆ ನಿರ್ಮೂಲನೆ ಹಾಗೂ ತ್ಯಾಜ್ಯ ವಿಲೇವಾರಿಗೆ ಸಂಬಂಧಪಟ್ಟಂತೆ ಸೌಕರ್ಯ ಕಲ್ಪಿಸುವ ಜವಾಬ್ದಾರಿಯು ಆಯಾ ರಾಜ್ಯ ಹಾಗೂ ನಗರ/ಪಟ್ಟಣಗಳ ಸ್ಥಳೀಯ ಸಂಸ್ಥೆಗಳ ಹೊಣೆಯಾಗಿದೆ.  ಇದಕ್ಕೆ ಸಂಬಂಧಪಟ್ಟಂತೆ ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ, ಜವಾಹರ ನೆಹರು ನ್ಯಾಷನಲ್ ಅರ್ಬನ್ ರಿನಿವಲ್ ಮಿಷನ್ ಮತ್ತು ಅರ್ಬನ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಯೋಜನೆಯಡಿ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ನದಿ ನೀರು ಮಾಲಿನ್ಯ ನಿಯಂತ್ರಣಕ್ಕೆ ನೆರವು ನೀಡುತ್ತದೆ ಎಂದು ಕೇಂದ್ರ ಪರಿಸರ ಮತ್ತು ಅರಣ್ಯ ಖಾತೆ ರಾಜ್ಯ ಸಚಿವೆ ಜಯಂತಿ ನಟರಾಜನ್ ಅವರು ಸಂಸದ ಶಿವರಾಮಗೌಡ ಅವರಿಗೆ ಲಿಖಿತ ಉತ್ತರ ನೀಡಿದ್ದಾರೆ.
  ಒಟ್ಟಾರೆ ತುಂಗಭದ್ರಾ ನದಿ ನೀರು ಮಾಲಿನ್ಯ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸಂಸದ ಶಿವರಾಮಗೌಡ ಅವರು ಕೇಂದ್ರ ಸರ್ಕಾರದ ಗಮನ ಸೆಳೆದಿದ್ದಾರೆ.
Please follow and like us:
error

Related posts

Leave a Comment