ಕೌಶಲ್ಯ ಅಭಿವೃದ್ಧಿ ತರಬೇತಿ ಶಿಬಿರ ಅರ್ಜಿ ಆಹ್ವಾನ.

ಕೊಪ್ಪಳ, ಅ.೧೬ (ಕ
ವಾ)   ಧಾರವಾಡದ ಸಿಡಾಕ್ ಸಂಸ್ಥೆ ವತಿಯಿಂದ ಪ್ರಸಕ್ತ ಸಾಲಿನ ಆಧುನಿಕರಣ ತಾಂತ್ರಿಕ
ತರಬೇತಿ ಯೋಜನೆಯಡಿ ಯಲಬುರ್ಗಾ ತಾಲೂಕಿನ ನಿರುದ್ಯೋಗಿ ಯುವಕ ಯುವತಿಯರಿಗೆ ಉದ್ಯೋಗ
ಅವಕಾಶ ಕಲ್ಪಿಸಲು ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠನಗೊಳಿಸಲಾಗುತ್ತಿದ್ದು
ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
     ಯೋಜನೆಯಡಿ ೨ ತಿಂಗಳ ಅವಧಿಯ
ಟೈಲರಿಂಗ್ ಮತ್ತು ಮೊಬೈಲ್ ರಿಪೇರ್ ಮತ್ತು ಸರ್ವಿಸ್ ತರಬೇತಿ ನೀಡಲಾಗುತ್ತಿದ್ದು,
ಟೇಲರಿಂಗ್ ತರಬೇತಿಗೆ ೮ನೇ ತರಗತಿ ಹಾಗೂ ಮೊಬೈಲ್ ರಿಪೇರ್ ಮತ್ತು ಸರ್ವಿಸ್ ತರಬೇತಿಗೆ
೧೦ನೇ ಅಥವಾ ಐಟಿಐ ವಿದ್ಯಾರ್ಹತೆ ಹೊಂದಿರಬೇಕು. ಟೈಲರಿಂಗ್ ತರಬೇತಿಯನ್ನು ಮಹಿಳೆಯರಿಗೆ
ಮಾತ್ರ ನೀಡಲಾಗುತ್ತಿದ್ದು, ತರಬೇತಿ ಅವಧಿಯಲ್ಲಿ ಮಾಸಿಕ ರೂ.೧೫೦೦ ರೂ.ಗಳ ಶಿಷ್ಯವೇತನ
ನೀಡಲಾಗುವುದು. ಆಸಕ್ತರು ಭರ್ತಿ ಮಾಡಿದ ನಿಗದಿತ ಅರ್ಜಿ ನಮೂನೆಯೊಂದಿಗೆ ವಿದ್ಯಾರ್ಹತೆ
ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ರೇಷನ್‌ಕಾರ್ಡ ಪ್ರತಿಯನ್ನು ಲಗತ್ತಿಸಿ, ಜಂಟಿ
ನಿರ್ದೇಶಕರ ಕಛೇರಿ, ಜಿಲ್ಲಾ ಕೈಗಾರಿಕಾ ಕೇಂದ್ರ ಕೊಪ್ಪಳ ಇವರಿಗೆ ಅ.೩೧ ರೊಳಗಾಗಿ
ಸಲ್ಲಿಸಬಹುದಾಗಿದೆ.
       ಹೆಚ್ಚಿನ ಮಾಹಿತಿಗಾಗಿ ಕೆ.ಭೀಮಪ್ಪ, ಸಹಾಯಕ
ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಕೊಪ್ಪಳ, ಮೊಬೈಲ್ ಸಂಖ್ಯೆ : ೯೪೮೧೬೬೪೪೦೧
ಅಥವಾ ಎಂ.ಡಿ.ಚಿನಿವಾರ, ಪ್ರಥಮ ದರ್ಜೆ ಸಹಾಯಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಕೊಪ್ಪಳ,
ಮೊಬೈಲ್ ಸಂಖ್ಯೆ : ೯೯೦೨೮೯೬೭೮೮ ಇವರನ್ನು ಸಂಪರ್ಕಿಸಬಹುದು.
ಅ. ೧೯ ರಂದು ಜಿಲ್ಲಾ ಮಟ್ಟದ ಗ್ರಾಮೀಣ ಕ್ರೀಡಾ ಕೂಟ

ಕೊಪ್ಪಳ
ಅ. ೧೬ (ಕ ವಾ) ಪ್ರಸಕ್ತ ಸಾಲಿನ ಕೊಪ್ಪಳ ಜಿಲ್ಲಾ ಮಟ್ಟದ ರಾಜೀವ್‌ಗಾಂಧಿ
ಖೇಲ್ ಅಭಿಯಾನ (ಆರ್‌ಜಿಕೆಎ) ಗ್ರಾಮೀಣ  ಕ್ರೀಡಾ ಕೂಟ ಅ. ೧೯ ರಂದು ಬೆಳಿಗ್ಗೆ ೦೯.೩೦
ಗಂಟೆಗೆ ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಲಿದೆ.
     ಈ ಕ್ರೀಡಾ ಕೂಟದಲ್ಲಿ
ಭಾಗವಹಿಸುವ ತಂಡಗಳು, ತಾಲ್ಲೂಕ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಅಥ್ಲೇಟಿಕ್ಸ್
ಸ್ಪರ್ಧೆಯಲ್ಲಿ ಪ್ರಥಮ, ದ್ವೀತಿಯ ಸ್ಥಾನ ಮತ್ತು  ಗುಂಪು ಸ್ಪರ್ದೆಯಲ್ಲಿ ಪ್ರಥಮ ಸ್ಥಾನ
ಪಡೆದವರು ಮಾತ್ರ, ಅ. ೧೯ ರಂದು ಜರುಗುವ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು
ಅರ್ಹರಿರುತ್ತಾರೆ. ತಾಲ್ಲೂಕು ಮಟ್ಟದಲ್ಲಿ ಸಂಘಟಸಿದ ಸ್ಪರ್ಧೆಗಳನ್ನು ಜಿಲ್ಲಾ
ಮಟ್ಟದಲ್ಲಿ ಏರ್ಪಡಿಸಲಾಗುವುದು. ಮತ್ತು ಫುಟ್‌ಬಾಲ್, ಹಾಕಿ ಬಾಸ್ಕೇಟಬಾಲ್, ಶೆಟಲ್
ಬ್ಯಾಡ್ಮಿಂಟನ್ ಮತ್ತು ಟಿ.ಟಿ ಕ್ರೀಡೆಗಳನ್ನು ನೇರವಾಗಿ ಜಿಲ್ಲಾ ಮಟ್ಟದಲ್ಲಿ
ಏರ್ಪಡಿಸಲಾಗುವುದು.
     ಸ್ಪರ್ಧೆಗಳ ವಿವರ ಇಂತಿದೆ.  ಪುರುಷರ ವಿಭಾಗದ
ಅಥ್ಲೆಟಿಕ್ಸ್‌ನಲ್ಲಿ ೧೦೦ಮೀ. ೪೦೦ಮೀ. ೮೦೦ಮೀ. ೧೫೦೦ಮೀ. ೩೦೦೦ಮೀ. ಓಟ, ಉದ್ದ ಜಿಗಿತ,
ಎತ್ತರ ಜಿಗಿತ, ಗುಂಡು ಎಸೆತ, ಚಕ್ರ ಎಸೆತ, ೪*೧೦೦ಮೀ ರಿಲೇ, ೪*೪೦೦ಮೀ ರಿಲೇ.  ಗುಂಪು
ಸ್ಪರ್ಧೆಯಲ್ಲಿ  ವ್ಹಾಲಿಬಾಲ್, ಕಬ್ಬಡ್ಡಿ, ಖೋಖೋ, ಹ್ಯಾಂಡ್‌ಬಾಲ್, ಫುಟ್‌ಬಾಲ್, ಹಾಕಿ,
ಬಾಸ್ಕೇಟಬಾಲ್, ಶೆ.ಬ್ಯಾಡ್ಮಿಂಟನ್, ಟಿ.ಟಿ.  ಮಹಿಳೆಯರ ವಿಭಾಗದ ಅಥ್ಲೆಟಿಕ್ಸ್‌ನಲ್ಲಿ
೧೦೦ಮೀ. ೪೦೦ಮೀ. ೮೦೦ಮೀ. ೧೫೦೦ಮೀ. ೩೦೦೦ಮೀ. ಓಟ, ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು
ಎಸೆತ, ಚಕ್ರ ಎಸೆತ,  ೪*೧೦೦ಮೀ ರಿಲೇ, ೪*೪೦೦ಮೀ ರಿಲೇ.  ಗುಂಪು ಸ್ಪರ್ಧೆಯಲ್ಲಿ
ವ್ಹಾಲಿಬಾಲ್, ಕಬ್ಬಡ್ಡಿ, ಖೋಖೋ, ಹ್ಯಾಂಡ್‌ಬಾಲ್, ಫುಟ್‌ಬಾಲ್, ಹಾಕಿ, ಬಾಸ್ಕೇಟಬಾಲ್, 
ಶೆಟಲ್ ಬ್ಯಾಡ್ಮಿಂಟನ್, ಟಿ.ಟಿ. ಕ್ರೀಡೆಗಳು ಜರುಗಲಿವೆ.   
    ಭಾಗವಹಿಸುವ
ಎಲ್ಲಾ ಸ್ಪರ್ದಾಳುಗಳು ಅ. ೧೯ ರಂದು  ಬೆಳಿಗ್ಗೆ ೧೦ ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ
ಹಾಜರಾಗಿ ತಮ್ಮ ಹೆಸರುಗಳನ್ನು ಕಡ್ಡಾಯವಾಗಿ ನೊಂದಾಯಿಸಿಕೊಳ್ಳಬೇಕು. ಅಲ್ಲದೆ ಅಂದು
ಬೆಳಿಗ್ಗೆ ೦೯.೩೦ ಗಂಟೆಗೆ ಉದ್ಘಾಟನಾ ಸಮಾರಂಭದಲ್ಲಿ ತಮ್ಮ ತಾಲ್ಲೂಕಿನ ದ್ವಜದೊಂದಿಗೆ
ಕಡ್ಡಾಯವಾಗಿ ಭಾಗವಹಿಸಬೇಕು.  ವಿವಿಧ ತಾಲ್ಲೂಕಿನಿಂದ ಬರುವ ಕ್ರೀಡಾ ಪಟುಗಳಿಗೆ
ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗುವುದು. ಹಾಗೂ ಆಯಾ ತಾಲ್ಲೂಕ ಕೇಂದ್ರ ಸ್ಥಾನದಿಂದ
ಕೊಪ್ಪಳಕ್ಕೆ ಬಂದು ಹೋಗುವ ಸಾಮಾನ್ಯ ಬಸ್ ದರದ ಪ್ರಯಾಣ ಭತ್ಯೆ ನೀಡಲಾಗುವುದು. 
ಸಂಬಂದಪಟ್ಟ ತಾಲ್ಲೂಕಿನ ದೈಹಿಕ ಶಿಕ್ಷಕರು, ಆಯಾ ತಾಲ್ಲೂಕಿನ ರಾಜೀವ್‌ಗಾಂಧಿ ಖೇಲ್
ಅಭಿಯಾನ ಯೋಜನೆ ಗ್ರಾಮೀಣ ಕ್ರೀಡಾಕೂಟ ವಿಜೇತರ ಫಲಿತಾಂಶ ಪಟ್ಟಿಯನ್ನು ಅ. ೧೭ ರ ಒಳಗೆ
ಮುದ್ದಾಂ ಸಹಾಯಕ ನಿರ್ದೇಶಕರು, ಯುಸೇಕ್ರೀ ಇಲಾಖೆ ಕೊಪ್ಪಳ ಕಚೇರಿಗೆ ಸಲ್ಲಿಸಬೇಕು.
    
ಹೆಚ್ಚಿನ ಮಾಹಿತಿಗಾಗಿ ಕಛೇರಿ ದೂರವಾಣಿ ಸಂಖ್ಯೆ : ೦೮೫೩೯-೨೦೧೪೦೦ ಅಥವಾ
ಕೆ.ಎಂ.ಪಾಟೀಲ್-೯೯೪೫೫೫೫೩೨೦ ಎ.ಎನ್.ಯತಿರಾಜ್-೯೪೪೮೬೩೩೧೪೬ ಹಾಗೂ ಆರ್.ತುಕಾರಾಮ್
-೭೮೯೯೪೩೨೨೨೭ ಇವರನ್ನು ಸಂಪರ್ಕಿಸುವಂತೆತಿಳಿಸಿದೆ.
ಅ.೧೭ ರಂದು ನಾಟಕದ ಉದ್ಘಾಟನಾ ಸಮಾರಂಭ.
ಕೊಪ್ಪಳ,
ಅ.೧೬ (ಕ ವಾ)ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೊಪ್ಪಳ ಹಾಗೂ ನಿಸರ್ಗ
ಕಲಾ ಸಂಘ, ಹುಬ್ಬಳ್ಳಿ ಇವರುಗಳ ಸಂಯುಕ್ತಾಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ
ಪ್ರಾಯೋಜಿತ ಕಾರ್ಯಕ್ರಮಡಿ ಕರ್ನಾಟಕ ಕಲಾ ವೈಭವ ಸಂಘ, ಬೆಂಗಳೂರು ಇವರಿಂದ ‘ಓಂ ನಮೋ
ಶ್ರೀಗುರು ಪುಟ್ಟರಾಜ’ ನಾಟಕದ ಉದ್ಘಾಟನಾ ಸಮಾರಂಭ ಅ.೧೭ ರಂದು ಮಧ್ಯಾಹ್ನ ೨.೩೦ ಗಂಟೆಗೆ
ನಗರದ ಸಾಹಿತ್ಯ ಭವನದಲ್ಲಿ ನಡೆಯಲಿದೆ.
     ಸಂಸ್ಥಾನ ಗವಿಮಠದ
ಶ್ರೀಗವಿಸಿದ್ಧೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸುವರು. ಶಾಸಕ ಕೆ.ರಾಘವೇಂದ್ರ ಹಿಟ್ನಾಳ
ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಂಸದ ಸಂಗಣ್ಣ ಕರಡಿ ಅಧ್ಯಕ್ಷತೆ ವಹಿಸುವರು. ಜಿಲ್ಲಾ
ಪಂಚಾಯತ್ ಅಧ್ಯಕ್ಷ ಅಮರೇಶ ಕುಳಗಿ, ನಗರಸಭೆ ಅಧ್ಯಕ್ಷೆ ಬಸಮ್ಮ ಹಳ್ಳಿಗುಡಿ, ತಾಲೂಕಾ
ಪಂಚಾಯತ್ ಅಧ್ಯಕ್ಷೆ ಬಾನು ಚಂದುಸಾಬ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ
ಎ.ಶ್ಯಾಂಸುಂದರ, ರಾಯಚೂರು, ಬಳ್ಳಾರಿ, ಕೊಪ್ಪಳ ಹಾಲು ಒಕ್ಕೂಟ ಸಮಿತಿ ಅಧ್ಯಕ್ಷ
ವೆಂಕನಗೌಡ್ರ ಹಿರೇಗೌಡ್ರ, ಎ.ಪಿ.ಎಂ.ಸಿ ಅಧ್ಯಕ್ಷ ಶಿವಲಿಂಗಪ್ಪ ತಿಪ್ಪವ್ವನವರ ಸೇರಿದಂತೆ
ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.  
ಅ. ೨೦ ಮತ್ತು ೨೧ ರಂದು ಜಿಲ್ಲಾ ಮಟ್ಟದ ದಸರಾ ಮತ್ತು ಮಹಿಳಾ ಕ್ರೀಡಾಕೂಟ.
ಕೊಪ್ಪಳ
ಅ. ೧೬ (ಕ ವಾ) ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಅ. ೨೦
ರಂದು ಪ್ರಸಕ್ತ ಸಾಲಿನ ಕೊಪ್ಪಳ ಜಿಲ್ಲಾ ಮಟ್ಟದ ದಸರಾ ಕ್ರೀಡಾ ಕೂಟ ಹಾಗೂ ಅ. ೨೧ ರಂದು
ಜಿಲ್ಲಾ ಮಟ್ಟದ ಮಹಿಳಾ ಕ್ರೀಡಾ ಕೂಟವನ್ನು ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಿಗ್ಗೆ
೯.೩೦ ಗಂಟೆಗೆ ಜರುಗಿಸಲಾಗುವುದು.
          ಜಿಲ್ಲಾ ಮಟ್ಟದ ದಸರಾ ಕ್ರೀಡಾ
ಕೂಟದಲ್ಲಿ ಭಾಗವಹಿಸುವ ತಂಡಗಳು ತಾಲ್ಲೂಕ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಗುಂಪು
ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹಾಗೂ ಅಥ್ಲೇಟಿಕ್ಸ್ ಸ್ಪರ್ಧೆಯಲ್ಲಿ ಪ್ರಥಮ, ಹಾಗೂ
ದ್ವಿತಿಯ ಸ್ಥಾನ ಪಡೆದವರು ಮಾತ್ರ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು
ಅರ್ಹರಿರುತ್ತಾರೆ. 
      ಸ್ಪರ್ಧೆಗಳ ವಿವರ ಇಂತಿದೆ.  ಪುರುಷರ ವಿಭಾಗದಲ್ಲಿ
ಅಥ್ಲೆಟಿಕ್ಸ್ : ೧೦೦ಮೀ. ೨೦೦ಮೀ. ೪೦೦ಮೀ. ೮೦೦ಮೀ. ೧೫೦೦ಮೀ. ೫೦೦೦ಮೀ. ಓಟ, ಉದ್ದ
ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, ತ್ರಿಬಲ್‌ಜಂಪ್, ಜಾವಲಿನ್ ಥ್ರೋ, ಡಿಸ್ಕಸ್
ಥ್ರೋ, ೧೧೦ಮೀಹರ್ಡಲ್ಸ್, ೪*೧೦೦ಮೀ.ರಿಲೇ, ೪*೪೦೦ಮೀ.ರಿಲೇ.  ಗುಂಪು ಸ್ಪರ್ಧೆಯಲ್ಲಿ
ಜಿಮ್ನಾಸ್ಟಿಕ್, ವ್ಹಾಲಿಬಾಲ್, ಕಬ್ಬಡ್ಡಿ, ಖೋಖೋ, ಬಾಲ್ ಬ್ಯಾಡ್ಮಿಂಟನ್,
ಬಾಸ್ಕೆಟ್‌ಬಾಲ್, ಹ್ಯಾಂಡ್‌ಬಾಲ್, ಟೇಬಲ್‌ಟೆನ್ನಿಸ್, ಟೆನ್ನಿಸ್,  ಫುಟ್ಬಾಲ್ ಬಾಲ್,
ಬಾಲ್ ಬ್ಯಾಡ್ಮಿಂಟನ್, ಹಾಕಿ, ಶೆಟಲ್ ಬ್ಯಾಡ್ಮಿಂಟನ್, ಥ್ರೋಬಾಲ್, ನೆಟ್‌ಬಾಲ್.
ಮಹಿಳೆಯರ
ವಿಭಾಗದಲ್ಲಿ ಅಥ್ಲೆಟಿಕ್ಸ್, :  ೧೦೦ಮೀ. ೨೦೦ಮೀ. ೪೦೦ಮೀ. ೮೦೦ಮೀ. ೧೫೦೦ಮೀ. ೩೦೦೦ಮೀ.
ಓಟ, ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, ಟ್ರಿಪಲ್‌ಜಂಪ್, ಜಾವಲಿನ್ ಥ್ರೋ,
ಡಿಸ್ಕಸ್ ಥ್ರೋ, ೧೦೦ಮೀ ಹರ್ಡಲ್ಸ್, ೪*೧೦೦ಮೀ.ರಿಲೇ, ೪*೪೦೦ಮೀ ರಿಲೇ.  ಗುಂಪು
ಸ್ಪರ್ಧೆಯಲ್ಲಿ  ಜಿಮ್ನಾಸ್ಟಿಕ್ಸ್, ವ್ಹಾಲಿಬಾಲ್, ಕಬ್ಬಡ್ಡಿ, ಖೋಖೋ, ಹಾಕಿ,
ಬಾಸ್ಕೇಟ್‌ಬಾಲ್, ಬ್ಯಾಡ್ಮಿಂಟನ್, ಹ್ಯಾಂಡಬಾಲ್, ಟೇಬಲ್ ಟೆನ್ನಿಸ್, ಟೆನ್ನಿಸ್, ಬಾಲ್
ಬ್ಯಾಡ್ಮಿಂಟನ್, ನೆಟ್‌ಬಾಲ್ ಸ್ಪರ್ಧೆಗಳು ಜರುಗಲಿವೆ.
    ಭಾಗವಹಿಸುವ ಎಲ್ಲಾ
ಸ್ಪರ್ದಾಳುಗಳು ಕ್ರಿಡಾಕೂಟ ನಡೆಯುವ ದಿನದಂದು ಬೆಳಿಗ್ಗೆ ೯.೦೦ ಗಂಟೆಗೆ ಜಿಲ್ಲಾ
ಕ್ರೀಡಾಂಗಣದಲ್ಲಿ ಹಾಜರಾಗಿ ತಮ್ಮ ಹೆಸರುಗಳನ್ನು ಸ್ಪರ್ಧೆಗಳೊಂದಿಗೆ ಕಡ್ಡಾಯವಾಗಿ
ನೊಂದಾಯಿಸಿಕೊಳ್ಳಬೇಕು.
    ವಿವಿಧ ತಾಲ್ಲೂಕಿನಿಂದ ಬಂದ ಕ್ರೀಡಾ ಸ್ಪರ್ದಾಳುಗಳಿಗೆ
ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗುವುದು. ಹಾಗೂ ಆಯಾ ತಾಲ್ಲೂಕ ಕೇಂದ್ರ ಸ್ಥಾನದಿಂದ
ಕೊಪ್ಪಳಕ್ಕೆ ಬಂದು ಹೋಗುವ ಸಾಮಾನ್ಯ ಬಸ್ ದರದ ಪ್ರಯಾಣ ಭತ್ಯೆ ನೀಡಲಾಗುವುದು.
 
ಹೆಚ್ಚಿನ ಮಾಹಿತಿಗಾಗಿ ಕಛೇರಿ ದೂರವಾಣಿ ಸಂಖ್ಯೆ : ೦೮೫೩೯-೨೦೧೪೦೦ ಅಥವಾ
ಕೆ.ಎಂ.ಪಾಟೀಲ್-೯೯೪೫೫೫೫೩೨೦ ಎ.ಎನ್.ಯತಿರಾಜ್-೯೪೪೮೬೩೩೧೪೬ ಹಾಗೂ ಆರ್.ತುಕಾರಾಮ್
-೭೮೯೯೪೩೨೨೨೭ ಇವರನ್ನು ಸಂಪರ್ಕಿಸುವಂತೆ ತಿಳಿಸಿದೆ.

Please follow and like us:
error