ಗ್ರಾಮವಿಕಾಸದ ಅಡಿಯಲ್ಲಿ ಗ್ರಾಮಗಳ ಅಭಿವೃಧ್ಧಿಗೆ ಹೆಚ್ಚಿನ ಅನುದಾನ-ಶಾಸಕ ಕೆ.ರಾಘವೇಂದ್ರ ಹಿಟ್ನಾಳ.

ಕೊಪ್ಪಳ:ಫೆ-೨೦ ಕ್ಷೇತ್ರದ ಹಳೆ ಕನಾಕಪೂರ ಹೊಸಕನಕಾಪೂರು, ಗೀಣಿಗೇರಾ, ಬಸಾಪೂರು,ಕುಟಗನಹಳ್ಳಿ, ಬೇಳವಿನಾಳ, ಕುಣಿಕೇರಿ ತಾಂಡ ಗ್ರಾಮಗಳಲ್ಲಿ ಹೆಚ್.ಕೆ.ಡಿ.ಬಿ. ಸಣ್ಣನೀರಾವರಿ ಸಮಾಜಕಲ್ಯಾಣ ಇಲಾಖೆ, ಪಂಚಾಯತಿ ರಾಜ್ ಇಂಜಿನಿಯರಿಂಗ್ ಅನುದಾನದ ಅಡಿಯಲ್ಲಿ ಅಂದಾಜು ಮೂತ್ತ ರೂ.೧.೫ ಕೋಟಿಗಳ ಕುಡಿಯುವ ನೀರಿನ ಟ್ಯಾಂಕ್, ಸಿ,ಸಿ. ರಸ್ತೆ ಶಾಲಾ ಕೊಠಡಿ, ಗ್ರಂಥಾಲಯ ಕಟ್ಟಡ, ಗೀಣೆಗೇರಿ ಕೆರೆ, ಅಂಗನವಾಡಿ ಕಟ್ಟಡ, ಸೇವಾಲಾಲ್ ಸಮುದಾಯ ಭವನದ ಕಾಮಗಾರಿಯ ಭೂಮಿ ಪೂಜೆ ನೇರವೇರಿಸಿ ಮಾತನಾಡಿದ ಶಾಸಕ ರಾಘವೇಂದ್ರ ಹಿಟ್ನಾಳರವರು ಕ್ಷೇತ್ರದ ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಗೆ ರಾಜ್ಯದ ಜನಪ್ರೀಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಹೆಚ್ಚಿನ ಅನುದಾನವನ್ನು ನೀಡುತ್ತಿದ್ದು, ಗ್ರಾಮಗಳ ಅಭಿವೃದ್ಧಿಗೆ ಇದು ಸಹಾಯಕಾರಿ ಯಾಗುತ್ತಿದೆ. ಗ್ರಾಮಗಳಲ್ಲಿ ಸಿ.ಸಿ.ರಸ್ತೆ, ಚರಂಡಿ, ಕುಡಿಯುವ ನೀರು, ಪ್ರಾಥಮಿಕ ಆರೋಗ್ಯ ಕೇಂದ್ರ, ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ಮಾಣ ಕಾರ್ಯವು ಬರದಿಂದ ಸಾಗಿದ್ದು ಕೊಪ್ಪಳ ಕ್ಷೇತ್ರವು ಬರುವ ದಿನಗಳಲ್ಲಿ ರಾಜ್ಯದಲ್ಲಿ ಒಂದು ಮಾದರಿಯ ಕ್ಷೇತ್ರವಾಗಿ ಮಾರ್ಪಡಲಿದೆ. ಮುಂಬರುವ ಬಜೆಟ್‌ನಲ್ಲಿ ಹೈರ್ದಾಬಾದ್ ಕರ್ನಾಟಕಕ್ಕೆ ೩ ಸಾವಿರ ಕೋಟಿ ಅನುದಾನ ಬರಲಿದ್ದು, ಇದರಲ್ಲಿ ೩೭೧ಜೆ ಅನುದಾನ ಅಡಿಯಲ್ಲಿ ೧ ಸಾವಿರ ಕೋಟಿ ಅನುದಾನ ಮಂಜೂರಾಗಲಿದೆ. ಆದ್ದರಿಂದ ಕ್ಷೇತ್ರದ ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಉನ್ನತ ಮಟ್ಟದ ಶಿಕ್ಷಣಕ್ಕೆ ಒತ್ತುಕೊಡಬೇಕು. ೩೭೧ಜೆ ಕಲಂನಿಂದ ಇಲ್ಲಿಯೇ ಉದ್ಯೋಗ ಅವಕಾಶಗಳು ಹೆಚ್ಚಾಗುವವು. ಬರುವ ಆರ್ಥಿಕ ವರ್ಷದಿಂದ ಜಿಲ್ಲೆಯಲ್ಲಿ ಮೇಡಿಕಲ್ ಹಾಗೂ ಇಂಜಿನಿಯರಿಂಗ್ ಪ್ರಾರಂಭಗೊಳ್ಳಲಿದ್ದು, ಶೇ.೭೦ ಬಡಮಕ್ಕಳಿಗೆ ಅವಕಾಶ ಕಲ್ಪಿಸಲಾಗುವುದೆಂದು ಹೇಳಿದರು.

ಈ ಸಂದರ್ಭದಲ್ಲಿ ಎ.ಪಿ.ಎಮ್.ಸಿ.ಅದ್ಯಕ್ಷ ಗವಿಸಿದ್ದಪ್ಪ ಮುದುಗಲ್, ಪಕ್ಷದ ಮುಖಂಡರಾದ ಗುಳಪ್ಪ ಹಲಗೇರಿ, ನಾಗರಾಜ ಚಳ್ಳೂಳ್ಳಿ, ಯಂಕಪ್ಪ ಇಂದರಗಿ, ಪಿ.ಎಲ್.ಡಿ.ಬ್ಯಾಂಕ್ ಸದಸ್ಯ ಕರಿಯಪ್ಪ ಮೇಟಿ, ಸುಬ್ಬಣ್ಣ ಆಚಾರ, ಬಸವರಾಜ ಅಗೋಲಿ, ಹನುಮಂತಪ್ಪ ಕಿಡದಾಳ, ವಿ.ಎಸ್.ಎಸ್.ಎನ್.ಅದ್ಯಕ್ಷರಾದ ಶಂಕ್ರಪ್ಪ ಅಬ್ಬಿಗೇರಿ, ಯಮನೂರಪ್ಪ ಕಟ್ಟಗಿ, ಗವಿಸಿದ್ದಯ್ಯ ಹುಡೇಜಾಲಿ,  ತಹಶೀಲ್ದಾರ ನಾಗರಾಜ, ತಾ.ಪಂ.ಇ.ಯೋ. ಕೃಷ್ಣಮೂರ್ತಿ, ಅಭಿಯಂತರರಾದ ಮಾಳಗಿ,  ಗುತ್ತಿಗೆದಾರರು, ಪಂಚಾಯತಿಯ ಸದಸ್ಯರು ಉಪಸ್ಥಿತರಿದ್ದರು.
Please follow and like us:
error