ಮಾ. ೨೫ ರಂದು ೦೭ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

 ಕೊಪ್ಪಳ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಮಾ. ೨೫ ರಂದು ಮಂಗಳವಾರ ಒಟ್ಟು ಏಳು ಅಭ್ಯರ್ಥಿಗಳು ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಕೆ.ಪಿ. ಮೋಹನ್‌ರಾಜ್ ಅವರಿಗೆ ನಾಮಪತ್ರ ಸಲ್ಲಿಸಿದರು.
  ಮಂಗಳವಾರದಂದು ನಾಮಪತ್ರ ಸಲ್ಲಿಸಿದವರ ವಿವರ ಇಂತಿದೆ.  ಕೆ. ಬಸವರಾಜ್ ಹಿಟ್ನಾಳ್- ಕಾಂಗ್ರೆಸ್.   ಕುಷ್ಟಗಿಯ ಶಿವಕುಮಾರ್- ಆಮ್ ಆದ್ಮಿ ಪಾರ್ಟಿ.  ಗಂಗಾವತಿಯ ಭಾರದ್ವಜ್- ಸಿಪಿಐ(ಎಂಎಲ್) ಲಿಬರೇಷನ್.  ಗಂಗಾವತಿಯ ರಮೇಶ್ ಕೋಟಿ- ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ. ಲಿಂಗಸುಗೂರು ತಾಲೂಕಿನ ನಾಗರಾಜ್ ಹುಲುಗಪ್ಪ- ಪಕ್ಷೇತರ.  ರಾಯಚೂರಿನ ಕೆ.ಎಂ. ರಂಗನಾಥರೆಡ್ಡಿ- ಸಮಾಜವಾದಿ ಪಕ್ಷ.  ಕಾರಟಗಿಯ ಇಸಾಕ ಜಯರಾಜ್- ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.   ಕೊಪ್ಪಳ ಲೋಕಸಭಾ ಚುನಾವಣೆಗಾಗಿ ಇದುವರೆಗೂ ಒಟ್ಟು ೧೧ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದಂತಾಗಿದೆ.  ನಾಮಪತ್ರ ಸಲ್ಲಿಸಲು ಮಾ. ೨೬ ಕೊನೆಯ ದಿನಾಂಕವಾಗಿದೆ .

Leave a Reply