ಕಾಂಗ್ರೆಸ್ ಭ್ರಷ್ಟರ ಕೂಟ : ಕರಡಿ ಸಂಗಣ್ಣ

ಕೊಪ್ಪಳ 25 : ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಕಾಂಗೆ್ರಸ್ ನೇತೃತ್ವದ ಯುಪಿಎ ಸರಕಾರವು 3ಜಿ ತರಂಗಾಂತರ, ಕಲ್ಲಿದ್ದಲು ಹಗರಣ, ಕಾಮನ್ ವೆಲ್ತ್ ಹಗರಣಗಳ ಮೂಲಕ ದೇಶವನ್ನು ಕೊಳ್ಳೆ ಹೊಡೆಯುವ ಹುನ್ನಾರ ನಡೆಸಿದೆ. ಕಾಂಗ್ರೆಸ್ ತಟ್ಟೆಯಲ್ಲಿ ಕತ್ತೆ ಬಿದ್ದಿದೆ. ತಮ್ಮನ್ನು ರಕ್ಷಿಸಿಕೊಳ್ಳಲು ತಟ್ಟೆಯಲ್ಲಿ ನೊಣ ಬಿದ್ದವರ ಕಡೆ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ. ಅದೊಂದು ಭ್ರಷ್ಟಾಚಾರದಿಂದ ತುಂಬಿದ ಕೂಟವಾಗಿದೆ ಎಂದು ಕೊಪ್ಪಳ ವಿಧಾನ ಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ನಿಯೋಜಿತ ಅಭ್ಯಥಿ ಕರಡಿ ಸಂಗಣ್ಣ ಆಪಾಧಿಸಿದರು.
ಅವರಿಂದು ಕೊಪ್ಪಳದ ವಡ್ಡರ ಓಣಿಯಲ್ಲಿ ಜರುಗಿದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ ಈ ಮೇಲಿನಂತೆ ನುಡಿದರು. ಭಾರತೀಯ ಜನತಾ ಪಕ್ಷ ನೇತೃತ್ವದ ಸರಕಾರವು ಬೋವಿ ಜನಾಂಗ, ಬಂಜಾರ ಜನಾಂಗದ ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸಿದ್ದು, ಆಯಾ ಜನಾಂಗಗಳ ಆಥಿಕ, ಶೈಕ್ಷಣಿಕ, ಸಾಮಾಜಿಕ ಸಬಲತೆಗಾಗಿ ಶ್ರಮಿಸಿದೆ ಎಂದರು. ಕಾಂಗ್ರೆಸ್ ಪಕ್ಷ 60 ವಷಗಳಲ್ಲಿ ದಲಿತರನ್ನು, ಮುಸ್ಲಿಂರನ್ನು ಓಟ್ ಬ್ಯಾಂಕ್ ಮಾಡಿಕೊಂಡು ಒಡೆದಾಳುವ ನೀತಿಯನ್ನು ಅನುಸರಿಸುತ್ತಿದೆ ಎಂದರು.
ಮಾಜಿ ನಗರಸಭಾ ಅಧ್ಯಕ್ಷ ಗವಿಸಿದ್ಧಪ್ಪ ಕಂದಾರಿ ಮಾತನಾಡಿ ಬಿ.ಜೆ.ಪಿ. ನೇತೃತ್ವದ ಸರಕಾರವು ಪ.ಜಾತಿ ಮತ್ತು ಪ.ಪಂಗಡಗಳ ಅಭ್ಯುದಯಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಪ್ರತಿಭಾತವಂತ ನಿರುದ್ಯೋಗಿ ವಿದ್ಯಾವಂತರಿಗೆ ಬ್ಯಾಂಕ್ ಸಾಲ, ಜೀವನ ನಿವಹಣೆಗೆ ಅನುಕೂಲ ಮಾಡಿಕೊಡುವಂತಹ ಕೊಳವೆ ಬಾವಿ ಯೋಜನೆಗಳನ್ನು ನೀಡಿದೆ. ಕೊಪ್ಪಳ ವಿಧಾನಸಭಾ ಕ್ಷೇತ್ರವೊಂದರಲ್ಲಿಯೇ 800 ಕ್ಕೂ ಹೆಚ್ಚು ಕೊಳವೆ ಬಾವಿಗಳನ್ನು ಮಂಜೂರು ಮಾಡಲಾಗಿದೆ.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ  ಅಪ್ಪಣ್ಣ ಪದಕಿ, ಭರಮಪ್ಪ ಟೆಂಗಿನಕಾಯಿ, ಈಶಪ್ಪ ದಿನ್ನಿ, ಬಸವರಾಜ ಬೋವಿ, ರಾಮಣ್ಣ, ರಂಗಪ್ಪ, ರಮೇಶ, ಲಕ್ಷ್ಮಯ್ಯ ಬೋವಿ, ನಾಗರಾಜ ಮುಂತಾದವರು ಉಪಸ್ಥಿತರಿದ್ದರು.
Please follow and like us:

Leave a Reply