ಆಗಸ್ಟ್ ೨೫ರಂದು ಕೊಪ್ಪಳ ಜಿಲ್ಲಾ ೫ನೇ ಚುಟುಕು ಸಾಹಿತ್ಯ ಸಮ್ಮೇಳನ

ಕೊಪ್ಪಳ: ಆಗಸ್ಟ್ ೨೫ರಂದು ನಗರದ ಸಾಹಿತ್ಯ ಭವನದಲ್ಲಿ  ಕೊಪ್ಪಳ ಜಿಲ್ಲಾ ೫ನೇ ಚುಟುಕು ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ತಿಳಿಸಿದ್ದಾರೆ. 
     ನಗರದ ಗವಿಸಿದ್ದೇಶ್ವರ ಪ್ರೌಢ ಶಾಲೆಯ ನಿವೃತ ಮುಖ್ಯೋಪಾಧ್ಯಾಯರು ಹಾಗೂ ಹಿರಿಯ ಸಾಹಿತಿಗಳಾದ ಎಂ.ಎಸ್.ಸವದತ್ತಿಯವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಎಂ.ಎಸ್.ಸವದತ್ತಿಯರನ್ನು ಕುರಿತು ಹನುಮಂತಪ್ಪ ಅಂಡಗಿ ಚಿಲವಾಡಗಿರವರ ಸಂಪಾದಕತ್ವದಲ್ಲಿ ಹೊರತರಲಾಗಿರುವ “ಸಹೃದಯಿ”ಎಂಬ ಅಭಿನಂದನಾ ಗ್ರಂಥ ಹಾಗೂ ಎಂ.ಎಸ್.ಸವದತ್ತಿಯವರ “ಹಾಡು-ಪಾಡು” ಕವನ ಸಂಕಲನ ಸಮ್ಮೇಳನದಲ್ಲಿ ಬಿಡುಗಡೆಗೊಳ್ಳಲಿವೆ.ಖ್ಯಾತ ಚುಟುಕು ಸಾಹಿತಿಗಳಾದ ಎಚ್.ಡುಂಡಿರಾಜ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ ಎಂದು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ  ತಿಳಿಸಿದ್ದಾರೆ.

Leave a Reply