ರಾಜ್ಯದ ಹಲವೆಡೆ ಲಘು ಭೂ ಕಂಪನ

ಸಾಂದರ್ಭಿಕ ಚಿತ್ರ
 ಬೆಂಗಳೂರು, ಫೆ. 25: ಇಂದು ಬೆಳ್ಳಂಬೆಳಗ್ಗೆ ದಕ್ಷಿಣ ಕನ್ನಡ, ಹಾಸನ, ಕೊಡಗು ಹಾಗೂ ಚಿಕ್ಕಮಗಳೂರು ಸೇರಿ 4 ಜಿಲ್ಲೆಗಳಲ್ಲಿ ಲಘು ಭೂಕಂಪನದ ಅನುಭವವಾಗಿರುವ ಬಗ್ಗೆ ವರದಿಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕೆಲವು ಗ್ರಾಮಗಳಲ್ಲಿ ಭೂ ಕಂಪನ ಅನುಭವವಾಗಿದೆ. ಕುಕ್ಕೆ ಸುಬ್ರಹ್ಮಣ್ಯ, ಗುತ್ತಿಗಾರು, ಕುಲ್ಕಂದ ಗ್ರಾಮದಲ್ಲಿ ಕಂಪನ ಉಂಟಾಗಿದ್ದು, ಜನರು ಆತಂಕಗೊಂಡು ಮನೆಯಿಂದ ಹೊರ ಬಂದಿದ್ದಾರೆ. 5 ರಿಂದ 6 ಸೆಕೆಂಡ್‌ಗಳ ಕಾಲ ಭೂಮಿ ಕಂಪಿಸಿದ ಅನುಭವವಾಗಿದೆ ಎನ್ನಲಾಗಿದೆ.
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕೆಲವು ಗ್ರಾಮಗಳಲ್ಲಿ ಲಘು ಭೂ ಕಂಪನದ ಅನುಭವವಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹಲವು ಗ್ರಾಮಗಳಲ್ಲಿ ಭೂ ಕಂಪನವಾಗಿದ್ದು, ಒಂದು ಸೆಕೆಂಡ್‌‌ ಕಾಲ ಭೂಮಿ ಕಂಪಿಸಿದ ಅನುಭವವಾಗಿದೆ. 
ಹಾಸನದ ಬಾಳ್ಳುಪೇಟೆಯಲ್ಲೂ ಲಘು ಭೂ ಕಂಪನ ಅನುಭವವಾಗಿದೆ. ಅಲ್ಲದೆ, ಸಕಲೇಶಪುರ ತಾಲೂಕಿನ ಸಕಲೇಶಪುರ, ಕಡ್ರಹಳ್ಳಿ, ಜಾನೆಕೆರೆ ಗ್ರಾಮಗಳಲ್ಲಿ ಭೂ ಕಂಪನವಾಗಿದೆ. 4 ರಿಂದ 5 ಸೆಕೆಂಡ್‌’ಗಳ ಕಾಲ ಭೂಮಿ ಕಂಪಿಸಿದ ಅನುಭವವಾಗಿದೆ.
ಆಂಧ್ರಪ್ರದೇಶದಲ್ಲೂ ಲಘೂ ಭೂ ಕಂಪನ
ಆಂಧ್ರಪ್ರದೇಶದಲ್ಲೂ ಲಘೂ ಭೂ ಕಂಪನ ಅನುಭವವಾಗಿದೆ. ರಾಜ್ಯದ ಗುಂಟೂರು, ಪ್ರಕಾಶಂ ಜಿಲ್ಲೆಗಳಲ್ಲಿ ಭೂ ಕಂಪನದ ಅನುಭವವಾಗಿದೆ. ಗುಂಟೂರು ಜಿಲ್ಲೆಯ 10 ಗ್ರಾಮಗಳಲ್ಲಿ ಭೂ ಕಂಪನ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ 4 ರಷ್ಟು ತೀವ್ರತೆ ದಾಖಲಾಗಿದೆ ಎನ್ನಲಾಗಿದೆ. 
Please follow and like us:
error