ರಾಷ್ಟ್ರೀಯ ಶಿಕ್ಷಣ ನೀತಿ ಸಲಹೆ, ಸೂಚನೆಗಳಿಗೆ ಆಹ್ವಾನ.

ಕೊಪ್ಪಳ ಜು. ೧೦  ಕೇಂದ್ರ ಸರ್ಕಾರದ ಆದೇಶದಂತೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ
ತಯಾರಿಕೆ ನಿಟ್ಟಿನಲ್ಲಿ ತಾಲೂಕು ಮಟ್ಟದ ಸಮಾಲೋಚನಾ ಸಭೆ ನಡೆಸಲು ಉದ್ದೇಶಿಸಲಾಗಿದ್ದು,
ಶಿಕ್ಷಣ ನೀತಿಗೆ ಸಂಬಂಧಿಸಿದಂತೆ ಶಿಕ್ಷಣ ಪ್ರೇಮಿಗಳು, ಶಿಕ್ಷಣ ತಜ್ಞರು,
ಸಾರ್ವಜನಿಕರಿಂದ ಸಲಹೆ, ಸೂಚನೆಗಳನ್ನು ಆಹ್ವಾನಿಸಲಾಗಿದೆ.ಮುಂದಿನ ನಮ್ಮ
ಮಕ್ಕಳ ಭವಿಷ್ಯದ ಶಿಕ್ಷಣ ವ್ಯವಸ್ಥೆ ಹೇಗಿರಬೇಕು ? ಹಾಗೂ ಉದ್ದೇಶಿತ ಹೊಸ ರಾಷ್ಟ್ರೀಯ
ಶಿಕ್ಷಣ ನೀತಿ ಹೇಗಿರಬೇಕು ಎಂಬುದರ ಕುರಿತು ಸಲಹೆ ಸೂಚನೆಗಳನ್ನು ನೀಡಲಿಚ್ಛಿಸುವ ಶಿಕ್ಷಣ
ಪ್ರೇಮಿಗಳು, ಶಿಕ್ಷಣ ತಜ್ಞರು, ಸಾರ್ವಜನಿಕರು ತಮ್ಮ ಸಲಹೆ, ಸೂಚನೆಗಳನ್ನು ಕೊಪ್ಪಳ
ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಜು. ೨೦ ರ ಒಳಗಾಗಿ ನೀಡಬೇಕು ಎಂದು ತಿಳಿಸಿದೆ.
  

Leave a Reply