You are here
Home > Koppal News > ಕೊಪ್ಪಳ ನಾಡು ಸಂಗೀತ, ಸಾಹಿತ್ಯದ ಬೀಡು ಶ್ರೀಮಂಜುನಾಥ ಡೊಳ್ಳಿನ.

ಕೊಪ್ಪಳ ನಾಡು ಸಂಗೀತ, ಸಾಹಿತ್ಯದ ಬೀಡು ಶ್ರೀಮಂಜುನಾಥ ಡೊಳ್ಳಿನ.

ಕೊಪ್ಪಳ, ಸೆ.೦೭ ಕೊಪ್ಪಳನಾಡು ಸಂಗೀತ ಸಾಹಿತ್ಯದ ಬೀಡು. ಅನಾದಿ ಕಾಲದಿಂದಲೂ ಈ ನಾಡು ಸಂಗೀತ ಸಾಹಿತ್ಯಕ್ಕೆ ಹೆಸರು ವಾಸಿಯಾಗಿದ್ದು ಅನೇಕ ಸಾಹಿತಿಗಳಿಗೆ ಜನ್ಮ ನೀಡಿದೆ. ಹಾಗೇ ಅನೇಕ ಸಂಗೀತಗಾರರನ್ನು ಪರಿಚಯಿಸಿದೆ ಎಂದು ಹೊಸಪೇಟೆ ಆಕಾಶವಾಣಿ ಪ್ರಸಾರ ನಿರ್ವಾಹಕರಾದ ಮಂಜುನಾಥ ಡೊಳ್ಳಿನ ಹೇಳಿದರು.
ಅವರು ಸಮೀಪದ ಭಾಗ್ಯನಗರದಲ್ಲಿ ನಿನ್ನೆ ರವಿವಾರ ಸಂಜೆ ೬ ಗಂಟೆಗೆ ಇಲ್ಲಿನ ಸ್ವರಸೌರಭ ಸಂಗೀತ ಮತ್ತು ಲಲಿತಕಲಾ ಸಂಸ್ಥೆ(ರಿ) ಹಾಗೂ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಮಾಜ ಭಾಗ್ಯನಗರ ಇವರ ಸಹಯೋಗದಲ್ಲಿ ನಡೆದ ೪ ನೇ ಸ್ವರಸೌರಭ ಸಂಗೀತ ಸಂಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಂದುವರೆದು ಮಾತನಾಡಿದ ಅವರು ಇಂತಹ ಪರಂಪರೆಯ ಮುಂದುವರೆದ ಭಾಗವಾಗಿ ಭಾಗ್ಯನಗರದ ನಾಗರಾಜ ಶ್ಯಾವಿ ಬಾನ್ಸುರಿ ವಾದನದಲ್ಲಿ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿರುವುದು ಈ ಗ್ರಾಮದ ದೊಡ್ಡ ಕೊಡುಗೆ ಎಂದರು.
ಕಾರ್ಯಕ್ರಮ ಉದ್ಘಾಟನೆ ನೇರವೇರಿಸಿದ ಕೊಪ್ಪಳದ ರಾಜ್ಯ ಲೆಕ್ಕಪತ್ರ ಇಲಾಖೆ ನಿವೃತ್ತ ನೌಕರರಾದ ಎ.ಪಿ. ಹಿರೇಮಠ ಮಾತನಾಡಿ, ಸಂಘಟಕರನ್ನು ಕಾರ್ಯಕ್ರಮವನ್ನು ಪ್ರೋತ್ಸಾಹಿಸಬೇಕಿರುವುದು ನಮ್ಮೇಲ್ಲಾ ಪ್ರೇಕ್ಷಕರ ಹಾಗೂ ಸಂಗೀತ ಪ್ರೀಯರ ಆಧ್ಯ ಕರ್ತವ್ಯವಾಗಿದೆ. ಅದರ ಅಳಿಸುವಿಕೆ, ಉಳಿಸುವಿಕೆ ಸಮಾಜದಿಂದ ಆಗಬೇಕಿದೆ. ಇದರಿಂದ ಕಾರ್ಯಕ್ರಮಗಳಿ ಜೀವಂತಿಕೆಯಿಂದ ಕೂಡಿರುತ್ತವೆಂದು ತಿಳಿಹೇಳಿದರು. ಮುಖ್ಯ ಅತಿಥಿಗಳಾಗಿ ಉ
ಕಾರ್ಯಕ್ರಮದಲ್ಲಿ ಹಿರೇವಂಕಲಕುಂಟಾ ಮುರಾರ್ಜಿ ದೇಸಾಯಿ ವಸತಿ ಶಾಲೆ ಸಂಗೀತ ಶಿಕ್ಷಕರಾದ ಹನುಮಂತ ಕುಮಾರ ಯರೇಹಂಚಿನಾಳ ಇವರ ಶಿರಿಕಂಠದಿಂದ ಶಾಸ್ತ್ರೀಯ ಹಾಗೂ ಸುಗಮ ಸಂಗೀತ ಸುಧೆ  ಹರಿದು ಬಂದು ಸಂಗೀತಾಸಕ್ತರಿಗೆ ಹಾಗೂ ಜನತೆಗೆ ಆನಂದವನ್ನು ನೀಡಿತು. ಇವರಿಗೆ ರಾಮಚಂದ್ರಪ್ಪ ಉಪ್ಪಾರ ಹಾರ್‍ಮೋನಿಯಂ, ಮಾರುತಿ ಬಿನ್ನಾಳ ತಬಲಾ ಸಾಥ ನೀಡಿದರು.
ಕಾರ್ಯಕ್ರಮದ ಪೂರ್ವದಲ್ಲಿ ಕುಮಾರಿ ಸೌಮ್ಯ ಕೋಟೆ ಪ್ರಾರ್ಥಿಸಿದರು. ಸಂಸ್ಥೆಯ ಕಾರ್ಯದರ್ಶಿ ನಾಗರಾಜ ಶ್ಯಾವಿ ಸ್ವಾಗತಿಸಿದರು. ಕಾರ್ಯಕ್ರಮ ನಿರೂಪಣೆ ಹಾಗೂ ವಂದನಾರ್ಪಣೆಯನ್ನು ಬಿ.ಪಿ. ಮರೇಗೌಡರ ನಿರ್ವಹಿಸುವದರೊಂದಿಗೆ  ಕಾರ್ಯಕ್ರಮ ಸಂಪನ್ನಗೊಂಡಿತು.

ಪನ್ಯಾಸಕರಾದ ರಾಚಪ್ಪ ಕೇಸರಬಾವಿ, ಸಾಹಿತಿಗಳಾದ ಎಸ್.ಖಾಸೀಂ ಸಾಹೇಬ ಮಾತನಾಡಿದರು.

Leave a Reply

Top