ಸಹಕಾರ ರತ್ನ ಪ್ರಶಸ್ತಿ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ.

ಕೊಪ್ಪಳ, ಅ.೬
(ಕ ವಾ)  ಸಹಕಾರ ಇಲಾಖೆ ವತಿಯಿಂದ ಶ್ರೇಷ್ಠ ಸಹಕಾರಿಗಳನ್ನು ಗುರುತಿಸಿ
ಪ್ರಸಕ್ತ ಸಾಲಿನ ಸಹಕಾರ ರತ್ನ ಪ್ರಶಸ್ತಿ ನೀಡಲು ಉದ್ದೇಶಿಸಲಾಗಿದ್ದು, ಅರ್ಹ
ಸಹಕಾರಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಕೆ ಅವಧಿಯನ್ನು ಅ. ೧೫ ರವರೆಗೆ
ವಿಸ್ತರಿಸಲಾಗಿದೆ.
     ಪ್ರಶಸ್ತಿ ಆಯ್ಕೆಗೆ ಸಂಬಂಧಪಟ್ಟಂತೆ ಈಗಾಗಲೇ ಅಧ್ಯಕ್ಷರು,
ಆರ್.ಡಿ.ಸಿ.ಸಿ ಬ್ಯಾಂಕ್ ನಿ, ಇವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಲಾಗಿದೆ.
ಸಹಕಾರ ಕ್ಷೇತ್ರದಲ್ಲಿ ಕನಿಷ್ಠ ೧೦ ವರ್ಷಗಳ ನಿಷ್ಕಳಂಕ ಸೇವೆ ಸಲ್ಲಿಸಿರುವ ಕೊಪ್ಪಳ
ಜಿಲ್ಲೆಯ ನಿವಾಸಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿಯೊಂದಿಗೆ ತಮ್ಮ ವೈಯಕ್ತಿಕ
ಪರಿಚಯ, ಸಹಕಾರ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ವಿವರ, ಸಹಕಾರ ಚಳುವಳಿಯಲ್ಲಿ
ತೊಡಗಿಸಿಕೊಂಡಿರುವ ವಿವರ ಹಾಗೂ ಪೂರಕ ಮಾಹಿತಿ ಇತ್ಯಾದಿ ಅಗತ್ಯ ದಾಖಲೆಗಳನ್ನು
ಲಗತ್ತಿಸಿ, ಸಹಕಾರ ಸಂಘಗಳ ಉಪನಿಬಂಧಕರು, ಕೊಪ್ಪಳ ಇವರಿಗೆ ಅಕ್ಟೋಬರ್ ೧೫ ರೊಳಗಾಗಿ
ಸಲ್ಲಿಸಬಹುದಾಗಿದೆ. ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಈ ಹಿಂದೆ ಅ.೦೧ ಕೊನೆ ದಿನಾಂಕವೆಂದು
ತಿಳಿಸಲಾಗಿತ್ತು. ಆದರೆ ಸರ್ಕಾರವು ಅರ್ಜಿ ಸಲ್ಲಿಸುವ ಅವಧಿಯನ್ನು ಅ.೧೫ ರವರೆಗೆ
ವಿಸ್ತರಿಸಿದೆ ಎಂದು ಕೊಪ್ಪಳ ಜಿಲ್ಲೆಯ ಸಹಕಾರ ಸಂಘಗಳ ಉಪ ನಿಬಂಧಕ ಡಾ|| ಉಮೇಶ.ಜಿ
ತಿಳಿಸಿದ್ದಾರೆ.
Please follow and like us:
error