You are here
Home > Koppal News > ಕುಮಾರಸ್ವಾಮಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದಕ್ಕೆ ಸಂಭ್ರಮಾಚರಣೆ

ಕುಮಾರಸ್ವಾಮಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದಕ್ಕೆ ಸಂಭ್ರಮಾಚರಣೆ

ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆಯ್ಕೆಯಾಗಿದ್ದಕ್ಕೆ ನಗರದ ಅಶೋಕ್ ಸರ್ಕಲನಲ್ಲಿ ಕಾರ‍್ಯಕರ್ತರು ಹಾಗೂ ಪದಾಧಿಕಾರಿಗಳು ಸಿಹಿ ಹಂಚಿ, ಪಟಾಕಿ ಸಿಡಿಸಿ  ಸಂಭ್ರಮಾಚರಣೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ  ಜೆಡಿಎಸ್  ನಗರ ಯುವ ಘಟಕ ಅಧ್ಯಕ್ಷ ಸಯ್ಯದ್ ಮೆಹಮೂದ್ ಹುಸೇನಿ ಕುಮಾರಣ್ಣನವರ ನೇತೃತ್ವದಲ್ಲಿ ಪಕ್ಷ ಬಲಿಷ್ಠವಾಗಲಿದೆ. ಆದಷ್ಟು ಬೇಗ ಜಿಲ್ಲೆಯ ಪ್ರವಾಸ ಮಾಡಿ ಜೆಡಿಎಸ್ ಪಕ್ಷದ ಕುಂದುಕೊರತೆಗಳನ್ನು ದೂರ ಮಾಡಿ ಪಕ್ಷಕ್ಕೆ ಹುಮ್ಮಸ್ಸು ತುಂಬಲಿ ಎಂದು ಆಶಿಸಿದರು. 
   ಸಂಭ್ರಮಾಚರಣೆಯಲ್ಲಿ  ನಗರಸಭೆ ಸದಸ್ಯರಾದ ಚನ್ನಪ್ಪ ಕೋಟ್ಯಾಳ, ಖಾಜಾವಲಿ ಬನ್ನಿಕೊಪ್ಪ ,ಮುಖಂಡರಾದ ವಿರೇಶ ಮಹಾಂತಯ್ಯನಮಠ ಖಲೀಲ ಮಾನ್ವಿ, ಇಮ್ತಿಯಾಜ್, ವೆಂಕಟೇಶ್ ಬೆಲ್ಲದ, ಪೈರೋಜ್, ನಾಗರಾಜ ಬಾರಕೇರ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Top