You are here
Home > Koppal News > ಡಿ.೦೬ ರಂದು ಶ್ರೀ ಮೌನೇಶ್ವರರ ೨೨ನೇ ವರ್ಷದ ಜಯಂತಿ ಆಚರಣೆ

ಡಿ.೦೬ ರಂದು ಶ್ರೀ ಮೌನೇಶ್ವರರ ೨೨ನೇ ವರ್ಷದ ಜಯಂತಿ ಆಚರಣೆ

ಕೊಪ್ಪಳ,ಡಿ.೦೫: ಕೊಪ್ಪಳ ನಗರದ ಶ್ರೀ ಸಿರಸಪ್ಪಯ್ಯ ಸ್ವಾಮಿ ಮಠದ ಆವರಣದಲ್ಲಿ ಡಿ.೦೬ ರಂದು ಜಗದ್ಗುರು ಶ್ರೀ ಮೌನೇಶ್ವರರ ೨೨ನೇ ವರ್ಷದ ಜಯಂತಿ ಉತ್ಸವ, ಶ್ರೀ ಸಿರಸಪ್ಪಯ್ಯ ಸ್ವಾಮಿಗಳ ೨ನೇ ವರ್ಷದ ಜಯಂತಿ ಉತ್ಸವ, ಸಾಮೂಹಿಕ ವಿವಾಹ, ಮದುವೆ ಮತ್ತು ಉಪನಯನ, ೧೦೮ ಕುಂಬಗಳ ಮೆರವಣಿಗೆ, ಆನೆಯ ಮೇಲೆ ಅಂಬಾರಿಯೊಂದಿಗೆ ಶ್ರೀ ಮೌನೇಶ್ವರರ ಬೆಳ್ಳಿಮೂರ್ತಿ, ಶ್ರೀ ಸಿರಸಪ್ಪಯ್ಯ ಸ್ವಾಮಿಗಳ ಭಾವಚಿತ್ರದ, ವಿಶ್ವಕರ್ಮ ಪ್ರಭುವಿನ ಪಂಚ ಕಸಬುಗಳ ಋಷಿ ಪುಂಗವರ ಸ್ಥಬ್ದ ಚಿತ್ರದ ಮೆರವಣಿಗೆ ಕಾರ್ಯಕ್ರಮಗಳು ಜರುಗಲಿವೆ.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸಿರಸಪ್ಪಯ್ಯನ ಮಠದ ಸಿರಸಪ್ಪಯ್ಯ ಸ್ವಾಮಿಗಳು, ಅಳ್ಳಳ್ಳಿಯ ಅಯ್ಯಪ್ಪಯ್ಯಸ್ವಾಮಿ ಮಠದ ಶ್ರೀ ನಾಗೇಂದ್ರ, ಕೊಪ್ಪಳ ಶಾಖಾಮಠದ ಲೆಕ್ಕಿಹಾಳ ಶಾಖಾಮಠದ ಶ್ರೀ ಸಿರಸಪ್ಪಯ್ಯ, ಹಿರೇಹಾಳಮಠದ ಶ್ರೀ ಶಿವಶಂಕರ, ಗಿಣಿಗೇರಿಯ ಶ್ರೀ ದೇವೇಂದ್ರ, ಮುದ್ದಾಬಳ್ಳಿಯ ಶ್ರೀ ಗುರುನಾಥ, ಲೇಬಗೇರಿಯ ಅಯ್ಯಪ್ಪಯ್ಯ, ಶಾಡ್ಲಗೇರಿಯ ವಿರುಪಾಕ್ಷಯ್ಯ, ಲೇಬಗೇರಿಯ ನಾಗಮೂರ್ತಿ, ಗಿಣಿಗೇರಿಯ ಶ್ರೀ ಗುರುನಾಥ, ನರಸಿಂಹಸ್ವಾಮಿ, ಕಾತರಕಿ-ಗುಡ್ಲಾನೂರಿನ ಶ್ರೀ ವಿರುಪಾಕ್ಷಯ್ಯ, ಹರ್ಲಾಪುರದ ಶ್ರೀಗುರು ಮೌನ ಚಿದಾನಂದಜ್ಜನವರ ಮಠದ ಶ್ರೀ ಮುತ್ತಪ್ಪಜ್ಜ, ಗಿಣಿಗೇರಿಯ ಶ್ರೀ ಸುಬ್ಬಣ್ಣಾಚಾರ್ಯ ವಿದ್ಯಾನಗರ ಸೇರಿದಂತೆ ಅನೇಕರು ಸಾನಿಧ್ಯ ವಹಿಸುವರು. 
ಅದೇ ದಿನ ಮಧ್ಯಾಹ್ನ ೧ ಗಂಟೆಗೆ ಶ್ರೀ ಅಮರಶಿಲ್ಪಿ ಜಕಣಾಚಾರ್ ವೇದಿಕೆಯಲ್ಲಿ ಜರುಗುವ ಧಾರ್ಮಿಕ ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ನೀರಾವರಿ ಸಚಿವ ಶಿವರಾಜ ತಂಗಡಗಿ ಅವರು ನೆರವೇರಿಸುವರು. ಅಧ್ಯಕ್ಷತೆಯನ್ನು ಸಂಸದ ಸಂಗಣ್ಣ ಕರಡಿ ಅವರು ವಹಿಸುವರು. ವಿಶೇಷ ಉಪನ್ಯಾಸಕರಾಗಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ|| ವಿರೇಶ ಬಡಿಗೇರ ಅವರು ಆಗಮಿಸುವರು. ಬೆಳ್ಳಿ ಮೂರ್ತಿ ಮೆರವಣಿಗೆಯ ಉದ್ಘಾಟನೆಯನ್ನು ರಾಜ್ಯ ವಿಶ್ವಕರ್ಮ ಮಹಾಮಂಡಳದ ರಾಜ್ಯಾಧ್ಯಕ್ಷ ಎಲ್.ನಾಗರಾಜ ಆಚಾರ ಅವರು ನೆರವೇರಿಸುವರು. 
ಮುಖ್ಯ ಅತಿಥಿಗಳಾಗಿ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ, ದೊಡ್ಡನಗೌಡ ಪಾಟೀಲ್, ಬಸವರಾಜ ರಾಯರೆಡ್ಡಿ, ಇಕ್ಬಾಲ್ ಅನ್ಸಾರಿ, ಜಿ.ಪಂ.ಅಧ್ಯಕ್ಷ ಅಮರೇಶ ಕುಳಗಿ, ನಗರಸಭೆ ಅಧ್ಯಕ್ಷೆ ಲತಾ ವೀರಣ್ಣ ಸಂಡೂರು ಸೇರಿದಂತೆ ವಿಶ್ವಕರ್ಮ ಸಮಾಜದ ಗೌರವ ಅಧ್ಯಕ್ಷ ನಾಗಲಿಂಗಪ್ಪ ಪತ್ತಾರ, ಜಿಲ್ಲಾ ವಿಶ್ವಕರ್ಮ ಸಮಾಜದ ಅಧ್ಯಕ್ಷ ಅಶೋಕ ವೇದಪಾಠಕ ಸೇರಿದಂತೆ ಅನೇಕರು ಭಾಗವಹಿಸುವರು. ಜಿಲ್ಲೆಯ ಎಲ್ಲಾ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕೊಪ್ಪಳ ತಾಲೂಕ ವಿಶ್ವಕರ್ಮ ಸಮಾಜದ ಅಧ್ಯಕ್ಷ ಶೇಖರಪ್ಪ ಬಡಿಗೇರ ಹಾಗೂ  ಗೌರವಾಧ್ಯಕ್ಷ ರುದ್ರಪ್ಪ ಬಡಿಗೇರ   ತಿಳಿಸಿದ್ದಾರೆ.

Leave a Reply

Top