೬ರಂದು ಕೊಪ್ಪಳದಲ್ಲಿ ಬೃಹತ್ ಹಿಂದೂ ಸಮಾವೇಶ

ಕೊಪ್ಪಳ :  ವಿಶ್ವ ಹಿಂದೂ ಪರಿಷತ್ ಸ್ವರ್ಣ ಸಂಭ್ರಮದ ಹಿನ್ನೆಲೆಯಲ್ಲಿ ನಗರದಲ್ಲಿ ಶುಕ್ರವಾರ ದಿ. ೬ರಂದು ಸಂಜೆ ೫ ಗಂಟೆಗೆ ಸಾರ್ವಜನಿಕ ಮೈದಾನದಲ್ಲಿ  ಬೃಹತ್ ಹಿಂದೂ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಅದಕ್ಕೆ ಪೂರಕವಾಗಿ ದಿ. ೪ರಂದು ಸಂಜೆ ೪ ಗಂಟೆಗೆ ನಗರದಲ್ಲಿ ಬೈಕ್ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಯ ಜಿಲ್ಲಾ ಪ್ರಧಾನ ಕಾರ‍್ಯದರ್ಶಿ ಚಂದ್ರಶೇಖರಗೌಡ ಪಾಟೀಲ್ ಹೇಳಿದರು . ಅವರು ನಗರದ ಮೀಡಿಯಾ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ಸಮಾವೇಶಕ್ಕೂ ಮುನ್ನ ಮಧ್ಯಾಹ್ನ ೨ ಗಂಟೆಗೆ ಗವಿಸಿದ್ದೇಶ್ವರ ಮಠದ ಆವರಣದಿಂದ ಶೋಭಾಯಾತ್ರೆ ಆರಂಭವಾಗಲಿದ್ದು ಅದು ಸಾರ್ವಜನಿಕ ಮೈದಾನಕ್ಕೆ ಸಂಜೆ ೫ ಗಂಟೆಗೆ ತಲುಪಲಿದೆ.  ಕಾರ‍್ಯಕ್ರಮದ ಸಾನಿಧ್ಯವನ್ನು ಗವಿಮಠದ ಶ್ರೀ ಗವಿಸಿದ್ದೇಶ್ವರ ಸ್ವಾಮಿಜಿಗಳು ವಹಿಸಲಿದ್ಧರೆ. ಮುಖ್ಯ ಭಾಷಣಕಾರರಾಗಿ ಶಂಕರಾನಂದ ಪ್ರಾಂತ ಪ್ರಚಾರಕರು ಆರ್.ಎಸ್.ಎಸ್. ಆಗಮಿಸಲಿದ್ದಾರೆ. ಗೌರವಾಧ್ಯಕ್ಷರಾದ ಶ್ರೀ ಶಿವಸಂಗಮೇಶ್ವರ ಸ್ವಾಮಿಗಳು ಬೆದವಟ್ಟಿ ಆಗಮಿಸಲಿದ್ದಾರೆ. ಸಾರ್ವಜನಿಕರು ಕಾರ‍್ಯಕ್ರಮದಲ್ಲಿ ಆಗಮಿಸಿ ಯಶಸ್ವಿಗೊಳಿಸಬೇಕೆಂದು ಕೋರಿದರು.
ಇದೇ ಸಂದರ್ಭದಲ್ಲಿ ಡಾ.ಕೆ.ಜಿ.ಕುಲಕರ್ಣಿ ವಿಶ್ವ ಹಿಂದೂ ಪರಿಷತ್ ದ್ಯೇಯೋದ್ದೇಶಗಳ ಕುರಿತು ಮಾತನಾಡಿದರು. ಪತ್ರಿಕಾಗೋಷ್ಠಿಯಲ್ಲಿ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಈಶಣ್ಣ ಬಳ್ಳೊಳ್ಳಿ, ವೀರಣ್ಣ ಸಂಕ್ಲಾಪೂರ, ಸಂಗಪ್ಪ ವಕ್ಕಳದ ಉಪಸ್ಥಿತರಿದ್ದರು. 
Please follow and like us:
error