fbpx

’ಗ್ರೀನ್ ಬಡ್ಸ್ ಆಗ್ರೋ ಪಾರಂ ಪ್ರವೇಟ್ ಲಿಮಿಟೆಡ್’ ಮೇಲೆ ಸಿಐಡಿ ದಾಳಿ

—————————————————————————-
ಸಿಐಡಿ ಅಧಿಕಾರಿಗಳು ದಾಖಲೆ ವಶಪಡಿಸಿಕೊಂಡು ಹೋಗುತ್ತಿರುವುದು ಮೂಕ ಪ್ರೇಕ್ಷಕನಾದ ಗ್ರಾಹಕ

ಹೊಸಪೇಟೆ-ಗ್ರಾಹಕರಿಗೆ ಹಲವಾರು ಅಮಿಷಗಳನ್ನು ಒಡ್ಡಿ ಚೀಟಿ ವ್ಯವಹಾರ ಮಾಡಿ ಕೊನೆಗೆ ಪಂಗನಾಮ ಹಾಕಿದ ಬ್ಲೇಡ್ ಕಂಪನಿಯ ಮೇಲೆ ಸಿಐಡಿ ದಾಳಿ ನಡೆದಿದೆ.
ನಗರದ ತಾಲೂಕು ಕಛೇರಿಯ ಮುಂದಿರುವ ಆಂಧ್ರ ಬ್ಯಾಂಕ್‌ನ ಮಹಡಿಯ ಮೇಲೆ ಕಾರ್ಯನಿರ್ವಹಿಸು ತ್ತಿದ್ದ ’ಗ್ರೀನ್ ಬಡ್ಸ್ ಆಗ್ರೋ ಪಾರಂ ಪ್ರವೇಟ್ ಲಿಮಿಟೆಡ್’ ಕಂಪನಿಯೇ ಜನಸಾಮಾನ್ಯರ ಅಂದಾಜು ೭೦ ಕೋಟಿ ರೂ ಹಣವನ್ನು ನುಂಗಿ ಪರಾರಿ ಯಾಗಿದ್ದ ಕಂಪನಿ,  ಮೈಸೂರಿ ನಲ್ಲಿ  ಮುಖ್ಯ ಕಛೇರಿಯನ್ನು ಹೊಂದಿದೆ.  
ಪ್ರತಿ ತಿಂಗಳು ಸಾವಿರಾರು ರೂಗಳನ್ನು ಚೀಟಿ ಕಟ್ಟಿರುವ ಗ್ರಾಹಕರಿಗೆ ಕೊನೆಗೆ ಪಂಗನಾಮ ಬಿದ್ದಿದೆ, ೨೦೦೫ರಲ್ಲಿ ಪ್ರಾರಂಭವಾಗಿ ೨೦೧೩ರವರೆಗೆ ಕಾರ್ಯನಿರ್ವಹಿಸಿ  ಗ್ರಾಹಕರ ವಿಶ್ವಾಸ ಗಳಿಸಿತು, ಬಹುಕೋಟಿ ಹಗರಣ ಸಂಬಂಧಪಟ್ಟಂತೆ, ಸಿಬಿಐ ಅಧಿಕಾರಿಗಳ ತಂಡ,  ಗ್ರೀನ್ ಬಡ್ಸ್ ಆಗ್ರೋ ಪಾರಂ ಪ್ರವೇಟ್ ಲಿಮಿಟೆಡ್ ಕಚೇರಿ ಮೇಲೆ ದಾಳಿ ನಡೆಸಿ ಮಹತ್ತದ ದಾಖಲೆಗಳನ್ನು ವಶಪಡಿಸಿ ಕೊಂಡ ಘಟನೆ ಬುಧವಾರ ನಗರದಲ್ಲಿ ಜರುಗಿದೆ. 
ಸ್ಥಳೀಯ ಹಲ ವಾರು ನಗರಸಭಾ ಸದಸ್ಯರು, ಅಂಗನವಾಡಿ ಕಾರ್ಯ ಕರ್ತರು, ಶಿಕ್ಷಕರು ಹಾಗೂ ಸಾರ್ವಜನಿಕರು ಇದರಲ್ಲಿ ಹಣವನ್ನು ತೊಡಗಿಸಿದ್ದರು.
ಈ ಬಗ್ಗೆ ನಗರ ಪಟ್ಟಣಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸದಂತೆ ಬೆಂಗಳೂ ರಿನ ಸಿಐಡಿ ಡಿವೈಎಸ್ಪಿ ವೀರಭದ್ರಯ್ಯ ಅವರ ನೇತೃತ್ವದ ತಂಡ ನಗರದ ತಾಲೂಕು ಕಚೇರಿ ಬಳಿ ಇರುವ ಗ್ರೀನ್ ಬಡ್ ಆಗ್ರೋ ಪಾರಂ ಪ್ರವೇಟ್ ಲಿಮಿಟೆಡ್ ಕಚೇರಿ ಮೇಲೆ ದಾಳಿ ನಡೆಸಿ, ಕಂಪ್ಯೋಟರ್ ಆರ‍್ಡ್ ಡಿಸ್ಕ್ ಸೇರಿದಂತೆ ಇತರೆ ಮಹತ್ತರ ದಾಖಲೆಗಳನ್ನು ವಶಪಡಿಸಿಕೊಂಡಿದೆ. 
Please follow and like us:
error

Leave a Reply

error: Content is protected !!