ದಿ.೧೦ರಿಂದ ೩೦ರವರೆಗೆ ಮಕ್ಕಳಿಗೆ ಬೇಸಿಗೆ ಶಿಬಿರ

ಹೊಸಪೇಟೆ:  ಭಾವೈಕ್ಯತಾ ವೇದಿಕೆಯು ತನ್ನ ೨೫ನೇ ವರ್ಷ ಬೆಳ್ಳಿಹಬ್ಬದ ಸವಿನೆನಪಿಗೆ ಇದೇ ದಿ.೧೦ರಿಂದ೩೦ರವರೆಗೆ ಚಿಣ್ಣರ ಲೋಕ ಬಣ್ಣದ ಲೋಕ ಮಕ್ಕಳ ಬೇಸಿಗೆ ಶಿಬಿರ ನಡೆಸಲಿದೆ.
ಸಿದ್ಧಲಿಂಗಪ್ಪ ಚೌಕಿಯ ೨ನೇ ಕ್ರಾಸ್ ಕೊನೆಗೆ, ಅರಳಿ ಮರದ ಹತ್ತಿರ ಸಂತಶಿಶುನಾಳ್ ಶರೀಪ್ ರಂಗಮಂದಿರದಲ್ಲಿ ನಡೆಯುವ ಈ ಬೇಸಿಗೆ ಶಿಬಿರವನ್ನು ಕರ್ನಾಟಕ ನಾಟಕ ಆಕಾಡೆಮಿ ಅಧ್ಯಕ್ಷ ಶೇಖ್ ಮಾಸ್ತರ್ ಉದ್ಘಾಟಿಸಲಿದ್ದಾರೆ.
ಶಿಬಿರದ ಸಂಪನ್ಮೂಲ ವ್ಯಕ್ತಿಗಳಾಗಿ ಎನ್‌ಎಸ್‌ಡಿ ಪದವೀಧರೆ ಪಿ.ಸಹನಾ,ನೀನಾಸಂ ಪದವಿ ಪಡೆದ ಅಜಾದ್ ನಾಗರಾಜ್, ಸಹಕಾರ, ಶಾಹೀರಾ, ಶಿವನಾಯ್ಕ ದೊರೆ, ಎಲ್.ಗುರುರಾಜ, ಚಿತ್ರಕಲಾವಿದ ಮಹ್ಮದ್ ಯೂನಿಸ್, ಶಿವಸಂಚಾರದ ಶ್ರೀನಿವಾಸ ಪುರೋಹಿತ, ಚಿತ್ರಕಲಾವಿದ ಎಸ್.ವಾದಿರಾಜ್, ಕಬೀರ, ಇನ್ಸಾಫ್ ಭಾಗವಹಿಸಲಿದ್ದಾರೆ. ಹೊರಗಿನಿಂದ ೧೫ಕ್ಕೂ ಹೆಚ್ಚು ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಲಿದ್ದಾರೆ. ಶಿಬಿರಕ್ಕೆ ಸೇರಲು ಭಾವೈಕ್ಯತಾ ವೇದಿಕೆ, ಆಮೀನಾ ಗಾದಿ ತಯಾರಕರು, ಸಿದ್ಧಲಿಂಗಪ್ಪ ಚೌಕಿ ಇಲ್ಲಿಗೆ ಸಂಪರ್ಕಿಸಲು ಕೋರಲಾಗಿದೆ. ಹೆಚ್ಚಿನ ವಿವರಗಳಿಗೆ ಪಿ.ಅಬ್ದುಲ್ -೯೮೪೫೮೨೨೦೫೨೭ ಇಲ್ಲಿಗೆ ಸಂಪರ್ಕಿಸಬೇಕೆಂದು ಶಿಬಿರದ ನಿರ್ದೇಶಕ ಪಿ.ಅಬ್ದುಲ್ ತಿಳಿಸಿದ್ದಾರೆ.

Related posts

Leave a Comment