ಮೋದಿ ಸರ್ಕಾರದ ಅಘೋಷಿತ ತುರ್ತು ಪರಿಸ್ಥಿತಿಯ ವಿರುದ್ಧ ಪ್ರತಿಭಟನೆ.

೧೯೭೫ ರಲ್ಲಿ ಕಾಂಗ್ರೆಸ್ ಸರ್ಕಾರ ತುರ್ತುಪರಿಸ್ಥಿತಿಯನ್ನು ಜನರ ಮೇಲೆ ಹೇರುವುದರ ಮೂಲಕ ಪ್ರಜಾತಾಂತ್ರಿಕ ಹಕ್ಕುಗಳಿಗಾಗಿ ದನಿಯೆತ್ತುವವರನ್ನು ದಮನ ಮಾಡಿತು. ೩೯ ವರ್ಷಗಳ ನಂತರ ಅಧಿಕಾರಕ್ಕೆ ಬಂದ ಒಂದೇ ವರ್ಷದಲ್ಲಿ ಮೋದಿಸರ್ಕಾರ ಅಘೋಷಿತ ತುರ್ತುಪರಿಸ್ಥಿತಿಯನ್ನು ಜನರ ಮೇಲೆ ಹೇರುತ್ತಿರುವಂತೆ ಅನ್ನಿಸುತ್ತಿದೆ. ಇದನ್ನು  ಪ್ರತಿಭಟಿಸಲು ಮತ್ತು ಸ್ಥಳೀಯ ಕಾರ್ಮಿಕರ, ಬೀದಿ ವ್ಯಾಪಾರಿಗಳ ರಕ್ಷಣೆಗಾಗಿ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದೆಂದು ಅಖಿಲ ಭಾರತ ಪ್ರಜಾವೇದಿಕೆಯ ಜಿಲ್ಲಾ ಸಂಚಾಲಕ ಬಸವರಾಜ ಸುಳೇಕಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ದಿನಾಂಕ ೩೦-೦೬-೨೦೧೫ ರಂದು ಬೆಳಿಗ್ಗೆ ೧೧.೦೦ ಗಂಟೆಗೆ ಶ್ರೀ ಕೃಷ್ಣದೇವರಾಯ ವೃತ್ತದಲ್ಲಿ ಧರಣಿ ಸತ್ಯಾಗ್ರಹ ಮಾಡಲಾಗುವುದು. ಈ ಧರಣಿಯನ್ನುದ್ದೇಶಿಸಿ ಕೊಪ್ಪಳ, ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಗಳ ಮುಖಂಡರು ಭಾಷಣ ಮಾಡಲಿದ್ದಾರೆ. ಈ ಹೋರಾಟದಲ್ಲಿ ನಗರಸಭೆಯ ದಿನಗೂಲಿ ನೌಕರರು, ದಲಿತ ಸಂಘಟನೆಗಳ ಪದಾಧಿಕಾರಿಗಳು, ಬೀದಿ ವ್ಯಾಪಾರಿಗಳು, ಇಟ್ಟಂಗಿಭಟ್ಟಿ ಕಾರ್ಮಿಕರು, ಅಕ್ಕಿ ಗಿರಣಿ ಕಾರ್ಮಿಕರು, ವಾಹನ ಚಾಲಕರು, ಕಟ್ಟಡ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಎಂ.ವಿರುಪಾಕ್ಷಪ್ಪ, ಎಂ. ಏಸಪ್ಪ, ಖಾದರಭಾಷಾ, ಮಾಬುಸಾಬ್ ದಮ್ಮೂರು ಪಾಲ್ಗೊಳ್ಳಬೇಕೆಂದು ಕೋರಿದ್ದಾರೆ.
Please follow and like us:
error