ಕೊಪ್ಪಳ ೦೯ :ಸಂಚಿಸಾರಂಗ ತಂಡ ಗುಲಬುರ್ಗಾದವರಿಂದ ದಿ:೦೮-೧೧-೨೦೧೩ ರಂದು ಸಂಜೆ : ೭-೦೦ಗಂಟೆಗೆ ಕೊಪ್ಪಳದ ಸರಕಾರಿ ಬಾಲಿಕೆಯರ ಪದವಿಪೂರ್ವ ಕಾಲೇಜಿ ಒಳಾಂಗಣದಲ್ಲಿ ಸನ್ಮಾನ್ಯ ಸಚಿವರ ಸಾವು ಎಂಬ ನಾಟಕ ಪ್ರದರ್ಶನಗೊಂಡಿತು. ಈ ಪ್ರದರ್ಶನದ ವ್ಯವಸ್ಥೆಯನ್ನು ಶಕ್ತಿ ಶಾರದೆಯ ಮೇಳ ಭಾಗ್ಯನಗರ ಮತ್ತು ಜ್ಞಾನ ಬಂಧು ಶಾಲೆಯ ಸಹಯೋಗದಲ್ಲಿ ಸಂಚಾಲಕರಾದ ಡಿ.ಎಂ.ಬಡಿಗೇರ ಉಪನ್ಯಾಸಕರು ಮತ್ತು ದಾನಪ್ಪ ಜಿ.ಕವಲೂರ ತಾ.ಪಂ.ಸದಸ್ಯರು ಅಚ್ಚುಕಟ್ಟಾಗಿ ಏರ್ಪಡಿಸಿದ್ದರು.
ಕುಕನೂರಿನ ಖ್ಯಾತ ರಂಗ ಕಲಾವಿದ ಬಾಬಣ್ಣ ಕಲ್ಮನಿಯವರು ನಾಟಕವನ್ನು ತಮ್ಮಟೆ ಬಡಿಯುವ ಮೂಲಕ ಉದ್ಘಾಟಿಸಿ ಪ್ರೇಕ್ಷಕರು ತಮ್ಮ ಬಗ್ಗೆ ಇರಿಸಿಕೊಂಡ ಅಭಿಮಾನವನ್ನು ನೆನೆಪಿಸಿಕೊಂಡರು. ಅತಿಥಿಯಾಗಿ ಆಗಮಿಸಿದ ವಿಠ್ಠಪ್ಪ ಗೋರಂಟ್ಲಿಯವರು ನಾಟಕ ಸಾಹಿತ್ಯ ಬೆಳವಣಿಗೆಯ ಕುರಿತು ಅನೇಕ ಮಹತ್ವದ ಮಾತುಗಳನ್ನಾಡಿದರು. ಇನ್ನೊಬ್ಬ ಅತಿಥಿ ಪ್ರೊ. ಅಲ್ಲಮಪ್ರಭು ಬೆಟ್ಟದೂರವರು ನಾಟಕ ಲಲಿತ ಕಲೆಯ ಎಲ್ಲ ಪ್ರಕಾರಗಳನ್ನು ತನ್ನಲ್ಲಿ ತುಂಬಿಕೊಂಡಿರುವದರಿಂದ ಸಾಹಿತ್ಯದ ಪ್ರಕಾರಗಳಲ್ಲಿ ರಂಗಭೂಮಿಯೇ ಸಶಕ್ತವಾದುದು ಎಂದು ಹೇಳಿದರಲ್ಲದೆ ಕಲಾವಿದರ ಉತ್ತಮ ಅಭಿನಯವನ್ನು ಹೊಗಳಿದರು. ಉತ್ತಮ ನಿರ್ದೇಶನ, ಹಿತ-ಮಿತವಾದ ಸಂಗೀತ ದಿಂದ ನಾಟಕ ಪ್ರೇಕ್ಷಕರ ಮೇಲೆ ಉತ್ತಮ ಪರಿಣಾಮ ಬೀರಿತು. ಎಂದರು.
ಈ ನಾಟಕದ ಪ್ರದರ್ಶನಕ್ಕೆ ಎಲ್ಲ ರೀತಿಯ ಸಹಕಾರ ನೀಡಿ, ಉದ್ಘಾಟನೆಯ ಕಾರ್ಯಕ್ರಮದ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಡಾ.ವ್ಹಿ.ಬಿ.ರಡ್ಡೇರವರು.
Please follow and like us: