ಹೊಸ ವರ್ಷಕ್ಕಾಗಿ ಯುವಕನ ಹೊಸ ಕೇಶವಿನ್ಯಾಸ.

ಯಲಬುರ್ಗಾ-31-  ೨೧ ನೇ ಶತಮಾನದ ಆರಂಭದಲ್ಲಿ ಅಂಚೆ ಕಾಗದದ ಮೂಲಕ ಸಂದೇಶ ರವಾನಿಸಲಾಗುತ್ತಿತ್ತು ಆದರೆ ಕಾಲ ಬದಲಾದಂತೆ ಮೊಬೈಲ್ ಬಳಕೆಯಿಂದ ಎಸ್.ಎಮ್.ಎಸ್ , ವಾಟ್ಸಅಪ್ ಮೂಲಕ ಸಂದೇಶ ರವಾನಿಸಲಾಗುತ್ತಿದೆ .ಆದರೆ ಯಲಬುರ್ಗಾ ಪಟ್ಟಣದ ಪ್ರೇಂಡ್ಸ್ ಜೇಂಟ್ಸ್ ಪಾರ್ಲರ್‌ನಲ್ಲಿ ಶರಣು ಎಂಬ ಯವಕ ತನ್ನ ತಲೆಯಲ್ಲಿ ೨೦೧೬ ಎಂದು ಹೇರ್ ಕಟ್ ಮಾಡಿಸಿಕೊಂಡು ನಾವು ನಾಳೆಯಿಂದ ಹೊಸ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದೆವೆ ಎಂದು ಹೇಳಿದರು .ಕೇಶವಿನ್ಯಾಸಕಾರ ಮುತ್ತುರಾಜ ಹಡಪದ ಮಾತನಾಡಿ ತಲೆಯಲ್ಲಿ ಕೇಶವಿನ್ಯಾಸ ಮಾಡಿಸಿಕೊಳ್ಳುವುದು ಅಷ್ಟೆ ಮುಖ್ಯವಲ್ಲ ಯುವಕರು ದುಶ್ಚಟಗಳನ್ನು ಬಿಡಬೇಕು. ಹಳೆಯ ಕಹಿ ಘಟನೆಯ ನೆನಪುಗಳನ್ನು ಮರೆತು ಹೊಸ ವರ್ಷದಲ್ಲಿ ಯಾವುದೆ ಅವಘಡಗಳು ನಡೆಯದೆ ನಮ್ಮ ದೇಶ ಎಲ್ಲಾ ರಂಗಗಳಲ್ಲಿ ಅಭಿವೃದ್ದಿ ಪಥದಲ್ಲಿ ಸಾಗಲಿ ಎಲ್ಲರೂ ಶಾಂತಿ ಸೌಹಾರ್ದ ಸಹಬಾಳ್ವೆಯಿಂದ ಬಾಳೋಣ ಹೊಸ ವರ್ಷವನ್ನು ಆಚರಿಸೋಣ ಎಂದು ಇದೇ ವೇಳೆ ತಮ್ಮ ಅಭಿಪ್ರಾಯ ತಿಳಿಸಿದರು. ಮಹಾದೇವಪ್ಪ ಹಡಪದ ,ಕಳಕೇಶ ಹಡಪದ ,ಮಾರುತಿ ಹಡಪದ ಇದ್ದರು.
Please follow and like us:
error