fbpx

ಅಭ್ಯರ್ಥಿ ಕೆ.ಎಂ.ಸಯ್ಯದ್ ಪರ ಕೆಜೆಪಿಯಿಂದ ಕೊಪ್ಪಳದಲ್ಲಿ ಬೈಕ್ ರ್‍ಯಾಲಿ

ಕೊಪ್ಪಳ,ಮೇ.೦೩: ಕೊಪ್ಪಳ ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಚಾರಕ್ಕೆ ಕೊನೆ ದಿನವಾದ ಶುಕ್ರವಾರ ಸುಡು ಬಿಸಿಲನ್ನೂ ಲೆಕ್ಕಿಸದೆ ಕೆಜೆಪಿ ಅಭ್ಯರ್ಥಿ ಕೆ.ಎಂ.ಸಯ್ಯದ್ ಪ್ರಮುಖ ರಸ್ತೆಗಳಾದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಬನ್ನಿಕಟ್ಟಿಯಿಂದ, ಸಾರ್ವಜನಿಕ ಮೈದಾನದವರೆಗೆ ಬೈಕ್ ರ್‍ಯಾಲಿ ನಡೆಸಿ ನಂತರ ಸಾರ್ವಜನಿಕ ಮೈದಾನದಲ್ಲಿ ಏರ್ಪಡಿಸಿದ ಬೃಹತ್ ಬಹಿರಂಗ ಸಭೆ ನಡೆಸಿ ಮತಯಾಚಿಸಿದರು. ಸಹಸ್ರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು. 
ನಗರದಲ್ಲೇಡೆ  ಜನಸಾಗರವೇ ಕಾಣುತಿತ್ತು. ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾದ ಶುಕ್ರವಾರ ಅಬ್ಬರದ ಪ್ರಚಾರದಲ್ಲಿ ಸಹಸ್ರಾರು ಸಂಖ್ಯೆಯ ಅಭಿಮಾನಿಗಳು ಕೆಜೆಪಿ ಅಭ್ಯರ್ಥಿ ಕೆ.ಎಂ.ಸಯ್ಯದ್‌ಗೆ ಸಾತ್ ನೀಡಿದರು.   ಕ್ಷೇತ್ರದ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಸಾವಿರಾರು ಸಂಖ್ಯೆಯ ಕಾರ್ಯಕರ್ತರು ಬೈಕ್ ರ್‍ಯಾಲಿಯಲ್ಲಿ ಪಾಲ್ಗೊಂಡು ತಮ್ಮ ಅಭ್ಯರ್ಥಿಯ ಪರ ಜಯ ಘೋಷಗಳನ್ನು ಕೂಗಿದರು. ನಂತರ ಸಾರ್ವಜನಿಕ ಮೈದಾನದಲ್ಲಿ ಜರುಗಿದ ಬಹಿರಂಗ ಸಭೆಯಲ್ಲಿ ಅಭ್ಯರ್ಥಿ ಮಾತನಾಡಿ, ಬಿಎಸ್‌ವೈ ಬೆಂಬಲಿಸಿ ಕೆಜೆಪಿ ಗೆಲ್ಲಿಸಿ ಎಂದು ಅಭ್ಯರ್ಥಿ ಕೆ.ಎಂ.ಸಯ್ಯದ್ ಮನವಿ ಮಾಡಿಕೊಂಡರು. 
ಪಕ್ಷದ ತಾಲೂಕ ಅಧ್ಯಕ್ಷ ಪ್ರಫುಲ್ ಗೌಡ ಹುರಕಡ್ಲಿ, ಪ್ರಚಾರ ಸಮಿತಿ ಅಧ್ಯಕ್ಷ ನೇಮಿರಾಜ ಪಾಟೀಲ್, ಮುಖಂಡರಾದ ಈಶ್ವರ ಎನ್., ಶ್ಯಾಮೀದ್ ಸಾಬ ಕಿಲ್ಲೇದಾರ, ಮೆಹಬೂಬ ಮುಲ್ಲಾ, ಸಿ.ಎಸ್.ಡಂಬಳ, ಮಾರುತಿ ಮಾಗಳದ್, ಮಹೆಬೂಬ ಬಹದ್ದೂರಬಂಡಿ, ಮಲ್ಲಿಕಾರ್ಜುನ ಒದಗನಾಳ, ಬಸವರಾಜ ಬಳ್ಳಾರಿ ಅಳವಂಡಿ, ಶ್ರೀಮತಿ ರೇಣುಕಾ, ಹನುಮಂತ ಕಲಿಕೇರಿ, ಡಿ.ಕೆ.ಹಿರೇಮಠ, ಲಕ್ಷ್ಮಣ ಕವಲೂರು, ಪರಸಪ್ಪ ಲಮಾಣಿ, ಯಮನೂರಪ್ಪ ಹಾಗೂ ಪಕ್ಷದ ಹಿರಿಯ ಮುಖಂಡ ಹಾಜಿ ಸಯ್ಯದ್ ಹಜರತ್ ಪಾಷಾ ಖಾದ್ರಿ ಸೇರಿದಂತೆ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಭಾಗವಹಿಸಿದ್ದರು.
Please follow and like us:
error

Leave a Reply

error: Content is protected !!