ಯಲಬುರ್ಗಾ : ಮ್ಯಾನ್ಯುಯಲ್ ಸ್ಕ್ಯಾವೆಂಜರ್‌ಗಳ ಬಗ್ಗೆ ಸಮೀಕ್ಷೆ

  ಯಲಬುರ್ಗಾ ಪಟ್ಟಣದ ವ್ಯಾಪ್ತಿಯಲ್ಲಿ ನಡೆಸಿದ ಸಮೀಕ್ಷೆಯಂತೆ ಯಾವುದೇ ಮ್ಯಾನ್ಯುಯಲ್ ಸ್ಕ್ಯಾವೆಂಜರ್‌ಗಳು ಇರುವುದಿಲ್ಲ ಎಂಬ ವರದಿ ಸಲ್ಲಿಸಲಾಗಿದ್ದು, ಈ ಕುರಿತಂತೆ ಯಾವುದೇ ಆಕ್ಷೇಪಣೆಗಳಿದ್ದಲ್ಲಿ, ಯಲಬುರ್ಗಾ ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿಗಳಿಗೆ ಸಲ್ಲಿಸಬಹುದಾಗಿದೆ.
  ಮ್ಯಾನ್ಯುಯಲ್ ಸ್ಕ್ಯಾವೆಂಜರಗಳ ಗುರುತಿಸುವಿಕೆ ಮತ್ತು ಪುನರ್ ವಸತಿಗಾಗಿ ರಾಷ್ಟ್ರಾದ್ಯಂತ ಸಮೀಕ್ಷೆ ಕಾರ್ಯವನ್ನು ಕಾರ್ಯಾಲಯದಿಂದ ನೇಮಕವಾದಂತ ಗಣತಿದಾರರು ಸಮೀಕ್ಷೆ ನಡೆಸಿ, ಸಮೀಕ್ಷೆ ಸಮಯದಲ್ಲಿ ಮ್ಯಾನ್ಯುಯಲ್ ಸ್ಕ್ಯಾವೆಂಜರಗಳು ಯಲಬುರ್ಗಾ ಪಟ್ಟಣದ ವ್ಯಾಪ್ತಿಯಲ್ಲಿ ಯಾರು ಇರುವುದಿಲ್ಲವೆಂದು ವರದಿ ಸಲ್ಲಿಸಿದ ಅನ್ವಯ ಮೇಲ್ವಿಚಾರಕರು ಕೂಡಾ ಅನುಮೋದಿಸಿದ ಪ್ರಕಾರ ಟೌನ್ ಲೇವಲ್ ಕಮಿಟಿಯಲ್ಲಿ ಯಾರು ಇಲ್ಲವೆಂದು ನಿರ್ಣಯಿಸಿರುತ್ತಾರೆ.  ಈ ಬಗ್ಗೆ ಆಸಕ್ತಿ ಉಳ್ಳ ವ್ಯಕ್ತಿಗಳಾಗಲಿ ಅಥವಾ ಏಜೆನ್ಸಿದಾರರು ತಮ್ಮ ಆಕ್ಷೇಪಣೆಯನ್ನು ಈ ಪ್ರಕಟಣೆ ಪ್ರಕಟಗೊಂಡ ೩ ದಿನಗಳೊಳಗಾಗಿ ತಮ್ಮ ಆಕ್ಷೇಪಣೆ ಸಲ್ಲಿಸತಕ್ಕದ್ದು, ನಿಗದಿತ ಸಮಯದಲ್ಲಿ ಯಾವುದೇ ಆಕ್ಷೇಪಣೆ ಸ್ವೀಕೃತವಾಗದಿದ್ದಲ್ಲಿ ಮ್ಯಾನ್ಯುಯಲ್ ಸ್ಕ್ಯಾವೆಂಜರಗಳು ಯಾರು ಇರುವುದಿಲ್ಲವೆಂದು ವರದಿ ಸಲ್ಲಿಸಲಾಗುವುದು ಎಂದು ಯಲಬುರ್ಗಾ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.

Leave a Reply