ತಂಬಾಕು,ಸಿಗರೇಟ್ ಮತ್ತು ಗುಟಕದಂತಹ ಅಂಗಡಿಗಳ ತೆರವಿಗೆ ಆಗ್ರಹ

 ಕೊಪ್ಪಳ ನಗರ ಒಂದರಲ್ಲಿಯೆ ಪ್ರಸಿದ್ದ ಶಾಲಾ ಕಾಲೇಜುಗಳ ಮುಂದೆಯೆ, ನಗರದ ಮದ್ಯೆ ಯಾವುದೇ ಭಯವಿಲ್ಲದೆ ಮಾರಾಟ ಮಾಡುತಿದ್ದು. ಆ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಆ ವ್ಯಸನಗಳಿಗೆ ಆಕರ್ಷಿತರಾಗಿದ್ದು, ಅಂತಹ ಚಟುವಟಿಕೆಗಳಿಗೆ ಬಲಿಯಾಗುತ್ತಿದ್ದಾರೆ. ಆದಕಾರಣ ಅಂತಹ ಅಂಗಡಿಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗಬೇಕು ಮತ್ತು ರಾಜ್ಯಾದ್ಯಾಂತ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನಕ್ಕೆ ನಿಷೇಧ ಇದ್ದರು, ಸಾರ್ವಜನಿಕರು ಬಹಿರಂಗವಾಗಿ ಯಾವುದೇ ಭಯವಿಲ್ಲದೆ ತಮಗೆ ಇಷ್ಟಬಂದ ಸ್ಥಳಗಳಲ್ಲಿ ಧೂಮಪಾನ ಮಾಡುತ್ತಿದ್ದಾರೆ. ಹಾಗೆಯೇ ನಗರದ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಇವುಗಳಿಗೆ ನಿಷೇಧ ಇದ್ದರು ಮಾರಾಟ ಮಾಡುತ್ತಿದ್ದಾರೆ.
ಈ ರೀತಿಯ ಅಂಗಡಿಗಳನ್ನು ತೆರವುಗೊಳಿಸಬೇಕು ಸಾರ್ವಜನಿಕ ಸ್ತಳಗಳಲ್ಲಿ ಧೂಮಪಾನ ಮಾಡಿದ ವ್ಯಕ್ತಿಗಳಿಗೆ ದಂಡ ಕಡ್ಡಾಯ ಮಾಡಬೇಕು ಹಾಗು ಎರಡು ದಿನಗಳ ಕಾಲಾವಕಾಶದಲ್ಲಿ ತಕ್ಶಣವೇ ತೆರವುಗೊಳಿಸಿ ಅ.ಭಾ.ವಿ.ಪ ದ ನಷಮುಕ್ತ ಭಾರತ ಅಭಿಯಾನಕ್ಕೆ ಸಹಕಾರ ನೀಡಬೇಕು. ಒಂದುವೇಳೆ ಈ ಕಾರ್ಯಾಕ್ಕೆ ವಿಳಂಬಮಾಡಿದಲ್ಲಿ ೩ನೇ ದಿನ ಉಗ್ರ ಹೋರಾಟಮಾಡುತ್ತೇವೆ ಎಂದು ತಿಳಿಸುತ್ತೇವೆ. ಆದ ಕಾರಣ ಹೋರಾಟಕ್ಕೆ ದಾರಿಮಾಡಿಕೋಡಬಾರದೆಂದು  ಎಬಿವಿಪಿ ಆಗ್ರಹಿಸಿದೆ.  ಈ ಕುರಿತು ಮನವಿ ಸಲ್ಲಿಸಲಾಯಿತು ಈ ಸಂದರ್ಭದಲ್ಲಿ  ಆನಂದ ಆಶ್ರಿತ್ ,ನಗರ ಕಾರ್ಯದರ್ಶಿ ಅ.ಬ.ವಿ.ಪಿ. ಕೊಪ್ಪಳ.ರಾಕೇಶ ಪಾನಘಂಟಿ,ರವಿಚಂದ್ರ ಎಸ್ ಮಾಲಿಪಾಟೀಲ್,ಭಾಗಣ್ಣ,ನವೀನ್ ಪಿರಂಗಿ,ಪ್ರದೀಪ ಜಾಣ,ಶರಣು ಇದ್ದರು

Leave a Reply