fbpx

ರೈತ ಸಂಜೀವಿನಿ : ಪರಿಹಾರ ಚೆಕ್ ವಿತರಣೆ

ಗಂಗಾವತಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ರೈತ ಸಂಜೀವಿನಿ ಅಪಘಾತ ವಿಮಾ ಯೋಜನೆಯಡಿ ರೈತ ಯಮನಪ್ಪ ಹುಲಿಹೈದರ್ ಅವರಿಗೆ ೭೫ ಸಾವಿರ ರೂ.ಗಳ ಪರಿಹಾರ ಚೆಕ್ ಅನ್ನು ವಿತರಿಸಲಾಯಿತು.
  ಗಂಗಾವತಿ ತಾಲೂಕು ಹುಲಿಹೈದರ್ ಗ್ರಾಮದ ರೈತ ಯಮನಪ್ಪ ಅವರ ಪುತ್ರಿ ಬಾಳಮ್ಮ (೧೭) ಹೊಲದಲ್ಲಿ ಕ್ರಿಮಿನಾಶಕ ಸಿಂಪಡಣೆ ಮಾಡುವಾಗ ಕ್ರಿಮಿನಾಶಕ ಆಕಸ್ಮಿಕವಾಗಿ ದೇಹವನ್ನು ಸೇರಿದ್ದರಿಂದ ಮೃತಪಟ್ಟಿದ್ದಳು.  ರೈತ ಸಂಜೀವಿನಿ ಅಪಘಾತ ವಿಮಾ ಯೋಜನೆಯಡಿ ಇದಕ್ಕೆ ಪರಿಹಾರ ವಿತರಣೆಗೆ ಅವಕಾಶವಿದ್ದು, ಈ ಯೋಜನೆಯಡಿ ಪರಿಹಾರ ಮೊತ್ತವಾಗಿ ರೂ.೭೫೦೦೦/- ಗಳ ಚೆಕ್ಕನ್ನು ಎಪಿಎಂಸಿ ಕಾರ್ಯದರ್ಶಿ ಜಿ. ಶರಶ್ಚಂದ್ರ ರಾನಡೆ ಮೃತ ಬಾಲಕಿಯ ತಂದೆ ಯಮನಪ್ಪ ಅವರಿಗೆ ವಿತರಿಸಿದರು.  ಈ ಸಂದರ್ಭದಲ್ಲಿ ಸಮಿತಿಯ ಸಹಾಯಕ ಕಾರ್ಯದರ್ಶಿ ಜವಳಿ ಸಿದ್ದಪ್ಪ, ಮಾರುಕಟ್ಟೆ ಮೇಲ್ವಿಚಾರಕ ಅಮರಯ್ಯಸ್ವಾಮಿ ಉಪಸ್ಥಿತರಿದ್ದರು.

Please follow and like us:
error

Leave a Reply

error: Content is protected !!